ಅವರ ಹೆಸರು ವೇದಾವತಿ.. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ತನ್ನ ಪಾಡಿಗಿದ್ದರು. ಆದರೆ ಹೆದ್ದಾರಿ ಗುಂಡಿಗೆ ಅವರ ಬದುಕನ್ನೇ ಬಲಿ ಪಡೆಯಿತು. ಮಾಧವಿ ಅಂದು ಚಿತ್ರಾಪುರದ ತನ್ನ ಮನೆಯಿಂದ ಬೆಳಗ್ಗೆ 8.30ರ ವೇಳೆಗೆ ಸ್ಕೂಟರಿನಲ್ಲಿ ಬರುತ್ತಿದ್ದರು. ಕುಳೂರಿನ ರಾಯಲ್ ಓಕ್ ಮುಂಭಾಗದಲ್ಲಿ ಹೆದ್ದಾರಿ ಗುಂಡಿ ಬಾಯಿ ತೆರೆದು ನಿಂತಿತ್ತು. ಗುಂಡಿಯನ್ನು ತಪ್ಪಿಸಲು ಆಗದೆ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಇದೇ ಸಮಯಕ್ಕೆ ಯಮನಂತೆ ಮುನ್ನುಗ್ಗುತ್ತಿದ್ದ ಮೀನು ಸಾಗಾಟದ ಈಚರ್ ಲಾರಿ ಮಾಧವಿಗೆ ಏಳಲೂ ಅವಕಾಶ ನೀಡಲಿಲ್ಲ. ಲಾರಿ ದೇಹದ ಮೇಲೆಯೇ ಸಾಗಿದ್ದರಿಂದ ಮಾಧವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹೆದ್ದಾರಿ ಇಲಾಖೆ ಅಧಿಕಾರಿಗಳೇ, ಜನಪ್ರತಿನಿಧಿಗಳೇ ರಾಷ್ಟ್ರೀಯ ಹೆದ್ದಾರಿ 66 ಸರಿಪಡಿಸಲು ಇನ್ನೆಷ್ಟು ಮಂದಿ ಸಾಯ್ಬೇಕು ಸ್ವಾಮಿ? ಜನರು ಎಷ್ಟು ಅಂತ ತಾಳ್ಮೆಯಿಂದ ಕಾಯ್ಬೇಕು? ನಿಮ್ಮಿಂದ ಹೆದ್ದಾರಿ ಸರಿಪಡಿಸಲು ಸಾಧ್ಯವಾಗೋದಿಲ್ವಾ? ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಜನರು ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡದೆ ಶೀಘ್ರ ರಸ್ತೆ ಸರಿಪಡಿಸುಯವಂತೆ ಒತ್ತಾಯಿಸುತ್ತಿದ್ದಾರೆ.
ವಿಡಿಯೋ ನೋಡಿ..