ಓರಮ್ (ಅಮೆರಿಕಾ): ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಅಮೆರಿಕಾದಲ್ಲಿ ನಿಗೂಢ ಗುಂಡಿನ ದಾಳಿಗೆ ಅನೇಕ ಮುಖಂಡರು ಬಲಿಯಾಗುತ್ತಿದ್ದಾರೆ. ಅಮೆರಿಕಾ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರನ್ನೂ ಗುಂಡಿನ ದಾಳಿ ನಡೆಸಿ ಹತ್ಯೆ ನಡೆಸಿದ್ದರೂ ಆರೋಪಿಗಳು ಪತ್ತೆಯಾಗಿಲ್ಲ. ಇತ್ತೀಚೆಗಷ್ಟೇ ಚುನಾವಣೆ ಮುಂಚೆ ಡೊನಾಲ್ಡ್ ಟ್ರಂಪ್ ಕೂದಲೆಳೆ ಅಂತರದಲ್ಲಿ ಗುಂಡಿನ ದಾಳಿಯಿಂದ ಪಾರಾಗಿದ್ದರು. ಇಂತಹ ಹತ್ಯೆಯಲ್ಲಿ “ರಹಸ್ಯ ಸಮಾಜ” (secret society, illuminati ಇತ್ಯಾದಿ)ದ ಕೈವಾಡ ಇರುವುದರ ಬಗ್ಗೆ ಊಹಿಸಲಾಗುತ್ತಿದೆ. ಆದರೆ ಅಧಿಕೃತ ದೃಢೀಕರಣ ಅಥವಾ ಸಾಕ್ಷ್ಯ ಇದುವರೆಗೂ ಸ್ಪಷ್ಟವಾಗಿ ಹೊರಬಂದಿಲ್ಲ.
ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಅಮೆರಿಕದ ಖ್ಯಾತ ಬಲಪಂಥೀಯ ಕಾರ್ಯಕರ್ತ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಚಾರ್ಲಿ ಕಿರ್ಕ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಇಲ್ಲಿನ ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾಷಣ ಮಾಡುತ್ತಿದ್ದ ಚಾರ್ಲಿಕ್ ಕಿರ್ಕ್ ಅವರ ಮೇಲೆ, ಆಗಂತುಕ ಗುಂಡಿನ ದಾಳಿ ನಡೆಸಿದ್ದಾನೆ. ಆಗಂತುಕ ಹಾರಿಸಿದ ಗುಂಡು ಚಾರ್ಲಿಕ ಕಿರ್ಕ್ ಅವರ ಕುತ್ತಿಗೆಯನ್ನು ಸೀಳಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ರಾಜಕೀಯ ಹತ್ಯೆ ಅಮೆರಿಕವನ್ನು ಬೆಚ್ಚಿಬೀಳಿಸಿದೆ.
ಪ್ರಸಿದ್ಧ ಸಂಪ್ರದಾಯವಾದಿ ಕಾರ್ಯಕರ್ತ ಹಾಗೂ ಟರ್ನಿಂಗ್ ಪಾಯಿಂಟ್ ಯುಎಸ್‌ಎ ಸಂಸ್ಥಾಪಕ ಚಾರ್ಲಿ ಕಿರ್ಕ್ (Charlie Kirk) ಅವರನ್ನು ಬುಧವಾರ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ವೇಳೆ ಅಪರಿಚಿತ ಶೂಟರ್ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕಾದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
“ದಿ ಅಮೆರಿಕನ್ ಕಮ್‌ಬ್ಯಾಕ್” ಎಂಬ ಘೋಷಣೆಯಡಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗುಂಡಿನ ಸದ್ದು ಕೇಳಿ ಕಾರ್ಯಕ್ರಮ ಗೊಂದಲಕ್ಕೆ ತುತ್ತಾಯಿತು. ಕಿರ್ಕ್ ಅವರ ಕುತ್ತಿಗೆಯಲ್ಲಿ ಗುಂಡು ತಗುಲಿ ಅವರು ನೆಲಕ್ಕುರುಳಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಗುಂಡಿನ ದಾಳಿ ನಡೆದ ತಕ್ಷಣ ವಿಶ್ವವಿದ್ಯಾಲಯವು ಲಾಕ್‌ಡೌನ್ ಘೋಷಿಸಿತು. ಸುಮಾರು 47,000 ವಿದ್ಯಾರ್ಥಿಗಳಿರುವ ಕ್ಯಾಂಪಸ್‌ನಲ್ಲಿ ಪೊಲೀಸರು ತೀವ್ರ ಶೋಧ ನಡೆಸಿದರು. ಪ್ರಾರಂಭಿಕ ವರದಿಗಳ ಪ್ರಕಾರ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎನ್ನಲಾಯಿತಾದರೂ, ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಶಂಕಿತ ಇನ್ನೂ ತಲೆಮರೆಸಿಕೊಂಡಿದ್ದು, ಎಫ್‌ಬಿಐ ಮತ್ತು ಸ್ಥಳೀಯ ಪೊಲೀಸರು ಸಂಯುಕ್ತವಾಗಿ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಸಾಕ್ಷಿದಾರರು, “ಗುಂಡು ದೂರದ ಕಟ್ಟಡದಿಂದ ಹಾರಿಸಲಾಯಿತೇನೋ. ಅದು ವೃತ್ತಿಪರ ಶೂಟರ್‌ನ ಕೆಲಸದಂತಿತ್ತು” ಎಂದು ಹೇಳಿದ್ದಾರೆ. ಒಂದು ಗುಂಡು ಮಾತ್ರ ಹಾರಿಸಲ್ಪಟ್ಟಿದ್ದು, ಅದು ನೇರವಾಗಿ ಕಿರ್ಕ್ ಅವರ ಕುತ್ತಿಗೆಯಲ್ಲೇ ತಗುಲಿದೆಯೆಂದು ಮಾಹಿತಿ ಇದೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿರ್ಕ್ ಅವರನ್ನು “ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮ” ಎಂದು ಕರೆದಿದ್ದಾರೆ. “ಅವರು ಅಮೆರಿಕದ ಯುವಕರ ಹೃದಯವನ್ನು ಅರ್ಥಮಾಡಿಕೊಂಡಿದ್ದ ಶ್ರೇಷ್ಠ ನಾಯಕರು” ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಿರ್ಕ್ ಅವರ ಪತ್ನಿ ಎರಿಕಾ ಹಾಗೂ ಇಬ್ಬರು ಮಕ್ಕಳಿಗೆ ಸಂತಾಪ ಸೂಚಿಸುವಲ್ಲಿ ಮೆಲಾನಿಯಾ ಟ್ರಂಪ್ ಸಹ ಸೇರಿಕೊಂಡಿದ್ದಾರೆ. ದೇಶದ ಬಾವುಟವನ್ನು ಅರ್ಧಕ್ಕೆ ಹಾರಿಸಿ ಚಾರ್ಲಿ ಕಿರ್ಕ್‌ಗೆ ಸಂತಾಪ ಸೂಚಿಸಲಾಗಿದೆ.
ಚಿಕಾಗೋನಗರಗಳಲ್ಲಿ ಬೆಳೆದ ಚಾರ್ಲಿ ಕಿರ್ಕ್, ಹೈಸ್ಕೂಲ್ ಕಾಲದಿಂದಲೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಟರ್ನಿಂಗ್ ಪಾಯಿಂಟ್ ಯುಎಸ್‌ಎ ಮೂಲಕ ಸಂಪ್ರದಾಯವಾದಿ ಧ್ವನಿಯಾಗಿ ಖ್ಯಾತಿ ಪಡೆದಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು MAGA ಚಳವಳಿಯ ಪ್ರಮುಖ ಮುಖಂಡರಾಗಿ ಹೊರಹೊಮ್ಮಿದ್ದರು.
ಪ್ರಪಂಚದಲ್ಲಿ ಪ್ರತೀ ದೊಡ್ಡ ಘಟನೆ – ರಾಜಕೀಯ ಹತ್ಯೆ, ಯುದ್ಧ, ಆರ್ಥಿಕ ಸಂಕಷ್ಟ ಅಥವಾ ಸಾಂಕ್ರಾಮಿಕ – ನಡೆದಾಗ ಅದಕ್ಕೆ ಸಂಬಂಧಿಸಿದಂತೆ “ರಹಸ್ಯ ಸಮಾಜ” ಅಥವಾ “ಸೀಕ್ರೆಟ್ ಗ್ರೂಪ್” ಕಾರಣವೆಂಬ ಷಡ್ಯಂತ್ರ ಸಿದ್ಧಾಂತಗಳು ಚಾಲ್ತಿಯಲ್ಲಿದೆ.