ಮಂಗಳೂರು : ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಪ್ರತಿಭೆ ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ 43 ವರ್ಷಗಳಿಂದ ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ ʻಶ್ರೀ ಕೃಷ್ಣ ವೇಷ ಸ್ಪರ್ಧೆʼಯನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸಪ್ಟೆಂಬರ್ 14ರಂದು ಭಾನುವಾರ ಕೃಷ್ಣಾಷ್ಟಮಿಯಂದು ಏರ್ಪಡಿಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಪ್ರಕಟಿಸಿದರು.
ಮಂಗಳೂರಿನ ಬಳ್ಳಾಲ್‌ಬಾಗ್ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.00ರಿಂದ ಶ್ರೀ ಕೃಷ್ಣ ವರ್ಣ ವೈಭವ, ಮಧ್ಯಾಹ್ನ 12 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ಸರಿಯಾಗಿ ಶ್ರೀಕೃಷ್ಣ ಜನ್ಮ ಮಹೋತ್ಸನ ನಂದಗೋಕುಲ ವೇದಿಕೆಯಲ್ಲಿ ಗಣ್ಯಾತಿಗಣ್ಯರು ಮತ್ತು ಪುಟಾಣಿಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ ದೀಪ ಪ್ರಜ್ವಲನದೊಂದಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ರಾತ್ರಿ 12.00ರ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 43 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಆಯೋಜಿಸಲಾಗಿದೆ ಮತ್ತು ಮಧ್ಯಾಹ್ನ 12 ರಿಂದ ರಾತ್ರಿ 12ರವರೆಗೆ ವಿವಿಧ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ಜೋಡಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರವ್ಯಾಪಿ ಮಾನ್ಯತೆಗೊಂಡ ಶ್ರೀ ಕೃಷ್ಣವೇಷ ಸ್ಪರ್ಧೆಗಳು ಒಟ್ಟು 43 ವಿಭಾಗಗಳಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಅಭಿಷೇಕ ಮಂದಿರ, ಕದ್ರಿಕೆರೆ, ಅಶ್ವತಕಟ್ಟೆ ಬಳಿ ವೇದಿಕೆ, ಅಭಿಷೇಕ ಮಂದಿರ 1ನೇ ಮಹಡಿ, ಕಲ್ಯಾಣ ಮಂಟಪ, ಮಂಜುಶ್ರೀ ಸಹಿತ ಏಕಕಾಲದಲ್ಲಿ ನಡೆಯಲಿದೆ. ಕದ್ರಿ ದೇವಳದ ಒಟ್ಟು ಆವರಣದಲ್ಲಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ಅಭಿಷೇಕ ಮಂದಿರ ಪ್ರಧಾನ ವೇದಿಕೆ ಸಹಿತ ಏಕಕಲಾದಲ್ಲಿ ನಡೆಯಲಿದೆ ಎಂದರು.
ನಮ್ಮ ಮಕ್ಕಳು ಕಂಸ ಆಗ್ಬಾರ್ದು, ಕೃಷ್ಣ ಆಗ್ಬೇಕು!
ಬೆರಳೆಣಿಕೆ ಮಕ್ಕಳೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಇಂದು ಸಹಸ್ರ ಸಹಸ್ರ ಮಕ್ಕಳು ಭಾಗವಹಿಸುವ ಮೂಲಕ ಬೆಳೆದಿದೆ. ಇದಕ್ಕೆ ಮಾಧ್ಯಮಗಳ ಬೆಂಬಲವೇ ಕಾರಣ. ಇಲ್ಲಿನ ಮುಟಾಣಿ ಮಕ್ಕಳ ಕೃಷ್ಣವೇಷ ಫೋಟೋಗಳು ಪತ್ರಿಕೆಗಳ ಮುಖಪುಟದಲ್ಲಿ ಬಂದಿದೆ. ದ್ವಾರಕ ಉತ್ಸವದೊಂದಿಗೆ ಜೋಡಿಸಿಕೊಂಡು ಚಿತ್ರ ವರದಿ ಪ್ರಕಟಿಸಿದೆ. ಇಲ್ಲಿ ಕೃಷ್ಣನಾಗಿ ವೇಷ ಹಾಕಿದ ಮಕ್ಕಳು ದೊಡ್ಡವರಾಗಿ ಇಂದು ಅವರ ಮಕ್ಕಳು ಕೃಷ್ಣನ ವೇಷ ಹಾಕುತ್ತಿದ್ದಾರೆ. ಕೆಲವರು ನಮ್ಮ ಕಾರ್ಯಕ್ರಮದೊಂದಿಗೆ ಕೈಜೋಡಿಸಿಕೊಂಡಿದ್ದಾರೆ ಎನ್ನುವಾಗ ಹೆಮ್ಮೆ ಎನಿಸುತ್ತದೆ ಎಂದರು. ಮಕ್ಕಳಲ್ಲಿ ಕೃಷ್ಣ ಚಿಂತನೆ ಜಾಗೃತವಾಗಬೇಕು. ಪೇಜಾವರ ಶ್ರೀಗಳು ಹೇಳಿದಂತೆ ಕೃಷ್ಣಾಷ್ಟಮಿ ನಿಜವಾಗಿಯೂ ರಾಷ್ಟ್ರೀಯ ಮಕ್ಕಳ ಉತ್ಸವವಾಗಿದೆ. ಇಲ್ಲಿ ಎಲ್ಲ ಧರ್ಮದವರ ಮಕ್ಕಳು ಭಾಗವಹಿಸಿದ್ದಾರೆ. ನಮ್ಮ ಮಕ್ಕಳು ಕಂಸ ಆಗ್ಬಾರ್ದು, ಕೃಷ್ಣ ಆಗ್ಬೇಕು ಎಂಬ ಧ್ಯೇಯ ನಮ್ಮದು ಎಂದರು.
ಸ್ಪರ್ಧಾಳುಗಳೆಲ್ಲರಿಗೂ ಉಡುಗೊರೆಗಳು
ಸ್ಪರ್ಧಾಳುಗಳೆಲ್ಲರಿಗೂ ಉಡುಪಿ ಕಡಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥ ದೇವರ ಭಾವಚಿತ್ರ, ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳು ಹಾಗೂ ಪ್ರಶಂಸನಾ ಪತ್ರ ಮತ್ತು ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ಆಕರ್ಷಕ ಬಟ್ಟೆ ಚೀಲದೊಂದಿಗೆ ನೀಡಲಾಗುವುದು, ಜೊತೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಹಾಗೂ ಇನ್ನಿತರ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ನವನೀತ್ ಶೆಟ್ಟಿ ಕದ್ರಿ ಮಾತನಾಡಿ, ಕೃಷ್ಣನ ಅಲಂಕಾರವನ್ನು ಮನೆಯ ಪರಿಕರದಲ್ಲೇ ಮಾಡಿದರೆ ಉತ್ತಮ. ಅದಕ್ಕಾಗಿ ಬಾಡಿಗೆ ವಸ್ತುಗಳನ್ನು ತರಲು ಹೋಗಬೇಡಿ. ಈ ಬಾರಿ ಯಶೋದಾ ಕೃಷ್ಣ ಹಾಗೂ ದೇವಕಿ ಕೃಷ್ಣ ಎಂಬ ವಿಭಾಗವಿದ್ದು, ಕಳೆದ ಬಾರಿ ಯಶೋದ ಕೃಷ್ಣ ವೇಷ ಹಾಕಿದವರು ಈ ಬಾರಿ ದೇವಕಿ ಕೃಷ್ಣ ವೇಷ ಹಾಕಬೇಕು. ಮಕ್ಕಳಿಲ್ಲದವರು ಮಗುವಾದರೆ ಕೃಷ್ಣ ವೇಷ ಹಾಕಿಸುತ್ತೇನೆ ಎಂದು ಹರಕೆ ಸಲ್ಲಿಸಿ ಅಂತವರಿಗೆ ಮಗು ಹುಟ್ಟಿದರೆ ಅವರಿಗೆ ಹರಕೆಯ ಕೃಷ್ಣ ವೇಷ ಹಾಕುವ ಅವಕಾಶವಿದೆ ಎಂದರಲ್ಲದೆ ಸಂಘನಿಕೇತನದಲ್ಲಿ ಆರೆಸ್ಸೆಸ್‌ನಿಂದ ನಡೆಯುತ್ತಿದ್ದ ಅಷ್ಟಮಿ ಕಾರ್ಯಕ್ರಮದಲ್ಲ ಕುಂಬ್ಳೆ ಸುಂದರ ರಾವ್ ಅವರು ಹೇಳುತ್ತಿದ್ದ ಕಥೆಗಳಿಂದ ಪ್ರೇರಣೆ ಪಡೆದು ಈ ಕಾರ್ಯಕ್ರಮ ರೂಪಿಸಲಾಗಿದ್ದು, ಇಂದು ಅದು ಈ ಹಂತಕ್ಕೆ ಬಂದು ತಲುಪಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ದಯಾನಂದ ಕಟೀಲ್, ಸಮೀರ್ ಪುರಾಣಿಕ್, ತಾರಾನಾಥ್, ಉಮೇಶ್, ಪ್ರಭಾಮರ ಜೋಶಿ ಮತ್ತಿತರರು ಭಾಗವಹಿಸಿದ್ದರು.
ನೋಂದಣಿ ಹೇಗೆ?
ಸ್ಪರ್ಧಾ ಸ್ಥಳದಲ್ಲೇ ಹೆಸರು ನೋಂದಾಯಿಸಲು ಅವಕಾಶವಿದೆ. ಯಾವುದೇ ಪ್ರದೇಶ ಶುಲ್ಕ ಇರುವುದಿಲ್ಲ. ಚ್ಚಿನ ವಿವರಗಳಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಕೊಡಿಯಲಾಬೈಲ್ ಮಂಗಳೂರು. ದೂ. . 0824-2492239, 9448125949, 98450283736, email- kalkuraadvt@gmail.com̧ pradeep.kalkura@gmail.com, ದಯಾನಂದ ಕಟೀಲ್ ಶಾರದಾ ವಿದ್ಯಾಲಯ ಮಂಗಳೂರು ದೂ: 2493099/9448545578, dayakateel1992@gmail.com, ಕದ್ರಿ ನವನೀತ್ ಶೆಟ್ಟಿ:2213061/9448123061, ಜಾನ್‌ಚಂದ್ರನ್ (9844284175) ಸುಧಾಕರರಾವ್ ಪೇಜಾವರ, ಫೋನ್: 2214093/2443360, ಗೋಕುಲ್ ಕೆ. ಫೋನ್: 2214176, 9448549456, ಯೋಜನಾಧಿಕಾರಿಗಳು ಗ್ರಾಮಾಭಿವೃದ್ಧಿಯೋಜನೆ ಫೋನ್: 2425059, ಕದ್ರಿ ಶ್ರೀ ಮಂಜುನಾಥದೇವಸ್ಥಾನ ಪೋನ್: 2214176 ಇವರನ್ನು ಸಂಪರ್ಕಿಸಬಹುದು.