ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಕುರಿತಾಗಿ ಸಲ್ಲಿಕೆಯಾದ ಅರ್ಜಿ ಮತ್ತು ಹಾಸಿಗೆ ದಿಂಬು ನೀಡುವ ಮನವಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶವನ್ನು ನೀಡಿದೆ.
ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಎರಡು ಅರ್ಜಿಗೆ ಸಂಬಂಧಿಸಿ ವಿಚಾರಣೆ ನಡೆದ ಬಳಿಕ ಇಂದು(ಸೆ.9) ಕೋರ್ಟ್ ಆದೇಶವನ್ನು ನೀಡಿದೆ.
ಸ್ಥಳಾಂತರಕ್ಕೆ ಸಕಾರಣಗಳಿಲ್ಲವೆಂದು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲು ಕೋರ್ಟ್ ನಿರಾಕರಿಸಿದೆ. ಜೈಲಿನ ಒಳಗೆ ಓಡಾಡಲು ಅವಕಾಶ ಮಾಡಿಕೊಟ್ಟಿದೆ. ಇನ್ನು ಹೆಚ್ಚುವರಿ ದಿಂಬು ಮತ್ತು ಹಾಸಿಗೆಯನ್ನು ನೀಡಲು ಕೋರ್ಟ್ ಅನುಮತಿ ನೀಡಿದೆ.
ಜೈಲಿನ ನಿಯಮವನ್ನು ಉಲ್ಲಂಘಿಸಿದರೆ ಜೈಲು ಐಜಿ ವರ್ಗಾವಣೆಗೆ ಕ್ರಮಕೈಗೊಳ್ಳಬಹುದೆಂದು ಕೋರ್ಟ್ ಹೇಳಿದೆ. ಜೈಲಿನ ಕೈಪಿಡಿಯಲ್ಲಿ ಇರುವಂತೆಯೇ ನಡೆದುಕೊಳ್ಳಬೇಕೆಂದು ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.