ಕಾಸರಗೋಡು: ತನ್ನ 17 ವರ್ಷದ ಮಗಳು ಮತ್ತು 10 ವರ್ಷದ ಸೊಸೆಯ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ ಮನೋಜ್ ಕೆ.ಸಿ (46) ಎಂಬಾತನನ್ನು ರಾಜಪುರಂ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಪರಾಧದ ನಂತರ ಪಣತ್ತಡಿ ಪಂಚಾಯತ್‌ನ ಪರಕಡವ್ ಪ್ರದೇಶದ ಒಂಟಿ ಮನೆಯಲ್ಲಿ ಹಾಸಿಗೆಯ ಕೆಳಗೆ ಅಡಗಿಕೊಂಡಿದ್ದ ಮನೋಜ್, ಪೊಲೀಸರು ನಡೆಸಿದ ಶೋಧದಲ್ಲಿ ಸಿಕ್ಕಿಬಿದ್ದಿದ್ದಾನೆ.
ಮನೋಜ್ ತನ್ನ ಪತ್ನಿ ದಿವ್ಯಾಳ ಮೇಲೆ ಆಗಾಗ್ಗೆ ಹಲ್ಲೆ ನಡೆಸುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ದಿವ್ಯಾ ಇಬ್ಬರು ಮಕ್ಕಳೊಂದಿಗೆ ಸಹೋದರನ ಮನೆಯಲ್ಲಿ ವಾಸಿಸಲು ತೆರಳಿದ್ದರು. ಸೆಪ್ಟೆಂಬರ್ 5 ರಂದು ಓಣಂ ದಿನದಂದು ಮನೋಜ್ ಆ ಮನೆಗೆ ನುಗ್ಗಿ ಆಸಿಡ್ ಎರಚಿದ್ದು, ದಿವ್ಯಾಳ ಬದಲು ಮಗಳು ನಿನ್ನು ಮೋಲ್ (17) ಮತ್ತು ಸೊಸೆ ಮಾನ್ಯ (10) ಗಾಯಗೊಂಡಿದ್ದಾರೆ. ಇಬ್ಬರಿಗೂ ತೋಳು ಮತ್ತು ಮುಖದ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದಾರೆ.
ಆಸಿಡ್ ದಾಳೆಗೆ ಕೆಲವೇ ಗಂಟೆಗಳ ಮೊದಲು ದಿವ್ಯಾಳ ಸ್ಕೂಟರ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದನೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ರಾಜಪುರಂ ಪೊಲೀಸರು ಮನೋಜ್ ವಿರುದ್ಧ ಮನೆ ಅತಿಕ್ರಮಣ, ಆಸಿಡ್ ದಾಳಿ, ಕೊಲೆಗೆ ಯತ್ನ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಿದ್ದು, ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸಲಾಗುವ ಸಾಧ್ಯತೆ ಇದೆ.