ಬೆಂಕಿ ತಗುಲಿ ಮನೆ ಭಸ್ಮ: ಮನೆಮಂದಿ ಅಪಾಯದಿಂದ ಪಾರು

ಬಂಟ್ವಾಳ: ನರಿಕೊಂಬಿನ ಬೋರುಗುಡ್ಡೆಯಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಇಂದು (ಸೆ.8) ಮುಂಜಾನೆ ನಡೆದಿದೆ.

ಬೋರುಗುಡ್ಡೆ ನಿವಾಸಿ ರಮೇಶ್ ಅವರ ಮನೆಗೆ ಬೆಂಕಿ ತಗಲಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿರುವ ಕುರಿತು ಸಂಶಯಿಸಲಾಗಿದೆ. ಮುಂಜಾನೆ 4ರ ಸುಮಾರಿಗೆ ಘಟನೆ ನಡೆದಿದ್ದು, ಮಲಗಿದ್ದ ಮನೆ ಮಂದಿ ಹೊರಬಂದು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಅದು ಆರ್.ಸಿ.ಸಿ ಮನೆಯಾಗಿದ್ದು, ಮನೆಯೊಳಗಿದ್ದ ವಿದ್ಯುತ್ ಪರಿಕರಗಳು, ಇತರ ಸೊತ್ತುಗಳು ಸಂಪೂರ್ಣ ಸುಟ್ಟು ಹೋಗಿದೆ. ಬಂಟ್ವಾಳ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ.

error: Content is protected !!