ನವದೆಹಲಿ: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಎ ವಿರುದ್ಧದ ಎರಡು ಬಹು-ದಿನ ಪಂದ್ಯಗಳಿಗಾಗಿ * ಭಾರತ ಎ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇದಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ನೇಮಿಸಿ ಬಿಸಿಸಿಐ ಅಚ್ಚರಿ ಮೂಡಿಸಿದೆ. ಧ್ರುವ್ ಜುರೆಲ್** ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸೆಪ್ಟೆಂಬರ್ 16 ಮತ್ತು 23ರಂದು ಲಕ್ನೋದಲ್ಲಿ ಪಂದ್ಯಗಳು ನಡೆಯಲಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಎದುರಾಳಿ ಆಸ್ಟ್ರೇಲಿಯಾ ಜೊತೆ ಭಾರತ ಸೆಣಸಲಿದೆ. ಜುರೆಲ್ ಉಪನಾಯಕತ್ವ ವಹಿಸಿದ್ದು, ಸಾಯಿ ಸುದರ್ಶನ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವರಿಗೆ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಪಂದ್ಯಕ್ಕೆ ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಸೇರ್ಪಡೆಗೊಳಿಸಲಾಗಿದ್ದು, ಗಾಯದ ಕಾರಣದಿಂದ ಸರ್ಫರಾಜ್ ಖಾನ್ ಹೊರಗುಳಿಯಲಿದ್ದಾರೆ. ನಂತರ ಮೂರು ಏಕದಿನ ಪಂದ್ಯಗಳು (ಸೆಪ್ಟೆಂಬರ್ 30, ಅಕ್ಟೋಬರ್ 3 ಮತ್ತು 5 – ಕಾನ್ಪುರ) ನಡೆಯಲಿದೆ.
ಬಿಸಿಸಿಐ ಹೇಳಿಕೆಯ ಪ್ರಕಾರ, ಈ ಸರಣಿ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಉತ್ತಮ ವೇದಿಕೆಯಾಗಿದೆ. ಇದೇ ಕಾರಣಕ್ಕೆ ಹಿರಿಯ ತಂಡಕ್ಕೆ ಶ್ರೇಯಸ್ ಅಯ್ಯರ್ ಅವ ಪಾದಾರ್ಪಣೆ ನಡೆಸಿದಿದೆ ಎಂದು ಹೇಳಲಾಗುತ್ತಿದೆ.
ಭಾರತ ಎ ತಂಡದ ದಾಂಡಿಗರು
ಶ್ರೇಯಸ್ ಅಯ್ಯರ್ (ಸಿ), ಅಭಿಮನ್ಯು ಈಶ್ವರನ್, ಎನ್ ಜಗದೀಸನ್ (ಡಬ್ಲ್ಯುಕೆ), ಸಾಯಿ ಸುದರ್ಶನ್, ಧ್ರುವ್ ಜುರೆಲ್ (ವಿಸಿ/ಡಬ್ಲ್ಯುಕೆ), ದೇವದತ್ ಪಡಿಕ್ಕಲ್, ಹರ್ಷ್ ದುಬೆ, ಆಯುಷ್ ಬದೋನಿ, ನಿತೀಶ್ ಕುಮಾರ್ ರೆಡ್ಡಿ, ತನುಷ್ ಕೋಟ್ಯಾನ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್.