ಮಂಗಳೂರು: ನಾಳೆ (ಸೆ.7ರ) ರಾತ್ರಿ ನಭೋ ಮಂಡಲದಲ್ಲಿ ಖಗೋಳ ಕೌತುಕ ಸಂಭವಿಸಲಿದೆ. ಇದು ಈ ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದ್ದು, ಇದರ ಪ್ರಭಾವ ದೇವಾಲಯದ ಮೇಲೆ ಬೀರಬಾರದು ಎಂಬ ಕಾರಣಕ್ಕೆ ಕರಾವಳಿಯಲ್ಲಿ ಇರುವ ಪ್ರಸಿದ್ಧ ದೇವಾಲಯಗಳ ದರ್ಶನದ ಅವಧಿ ಬದಲಾಗಲಿದೆ.
ಕರಾವಳಿಯಲ್ಲಿ ಬಂದ್ ಆಗಲಿರುವ ಪ್ರಸಿದ್ಧ ದೇವಾಸ್ಥಾನಗಳ ಅವಧಿ:
ಕುಕ್ಕೆ ಸುಬ್ರಹ್ಮಣ್ಯ : ಸಂಜೆ 5 ಗಂಟೆಗೆ ಬಂದ್
ಧರ್ಮಸ್ಥಳ: ಸಂಜೆ 7 ಗಂಟೆಗೆ ಬಂದ್
ಕುದ್ರೋಳಿ ದೇಗುಲ: ರಾತ್ರಿ 8 ಗಂಟೆಗೆ ಬಂದ್
ಕದ್ರಿ ದೇಗುಲ: ಸಂಜೆ 6.30 ಗಂಟೆಗೆ ಬಂದ್
ಉಡುಪಿ ಶ್ರೀಕೃಷ್ಣ ಮಠದಲ್ಲಿ ಗ್ರಹಣ ಕಾಲದಲ್ಲಿ ಗ್ರಹಣ ಶಾಂತಿ ಹೋಮ ನಡೆಸಲಾಗುತ್ತದೆ.