ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು 7 ಭಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪ್ರಕರಣ ದಾಖಲಾಗಿದ್ದು, ರಾಜ್ಯಸರಕಾರ ನೀಡಿದ್ದ ಶೇಕಡ 50 ರ ದಂಡ ರಿಯಾಯಿತಿಯನ್ನು ಬಳಸಿಕೊಂಡು ದಂಡ ಪಾವತಿಸಲಾಗಿದೆ.
ಸಿದ್ದರಾಮಯ್ಯ ಬಳಸುವ ಇನೋವಾ ಕ್ರಿಸ್ಟಾ ಕಾರು 2024ರಿಂದ ಈವರೆಗೆ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಈ ಪೈಕಿ ಆರು ಪ್ರಕರಣಗಳು ಸಿಎಂ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾಗಿದೆ. ಶೇ.50ರಷ್ಟು ರಿಯಾಯಿತಿಯ ಅನುಸಾರ ಅವರು 2,500 ರೂಪಾಯಿ ದಂಡ ಪಾವತಿಸಬೇಕಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆದ ಬಳಿಕ ಶುಕ್ರವಾರ ದಂಡ ಪಾವತಿಯಾಗಿದೆ ಎಂದು ಸಂಚಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
2024ರ ಜನವರಿ 24ರಂದು ಮಧ್ಯಾಹ್ನ 12.19ರಂದು ಓಲ್ಡ್ ಏರ್ ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಹೋಗುವಾಗ ಸಿದ್ದರಾಮಯ್ಯನವರು ಸೀಟು ಬೆಲ್ಟ್ ಧರಿಸಿರಲಿಲ್ಲ. ಅದೇ ಜಂಕ್ಷನ್ ನಲ್ಲಿ ಫೆಬ್ರವರಿ ಹಾಗೂ ಆಗಸ್ಟ್ ನಲ್ಲೂ ಮತ್ತೆರಡು ಪ್ರಕರಣಗಳು ದಾಖಲಾದರೆ, ಮಾರ್ಚ್ ನಲ್ಲಿ ಚಂದ್ರಿಕಾ ಹೊಟೇಲ್ ಜಂಕ್ಷನ್ ಹಾಗೂ ಆಗಸ್ಟ್ ನಲ್ಲಿ ಶಿವಾನಂದ ಸರ್ಕಲ್ ಹಾಗೂ ಡಾ.ರಾಜ್ ಕುಮಾರ್ ಪ್ರತಿಮೆ ಜಂಕ್ಷನ್ ಗಳ ಬಳಿ ಸೀಟು ಬೆಲ್ಟ್ ಧರಿಸಿದೆ ನಿಯಮ ಉಲ್ಲಂಘಿಸಿದ್ಧಾರೆ.
ಈ ವರ್ಷ ಜುಲೈ 9ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ಪೋರ್ಟ್ ಎಕ್ಸ್ ಪ್ರೆಸ್ ಕಾರಿಡಾರ್ ನಲ್ಲಿ ಸಿಎಂ ಅವರಿದ್ದ ಕಾರು ಓವರ್ ಸ್ಪೀಡಾಗಿ ಚಲಾಯಿಸಿ ನಿಯಮ ಮೀರಿತ್ತು. ಇದೀಗ ಕಾರಿನ ಮೇಲಿದ್ದ ದಂಡ ಪಾವತಿಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.