ಹೊಸದಿಲ್ಲಿ: ಉತ್ತರ ದಿಲ್ಲಿಯ ಸಿವಿಲ್ ಲೈನ್ಸ್ ನಲ್ಲಿ ಆಗಸ್ಟ್ ತಿಂಗಳಲ್ಲಿ ಮನೆಯೊಂದರಲ್ಲಿ ಹಮ್ಮಿಕೊಳ್ಳಲಾಗಿದ್ದ ಔತಣ ಕೂಟದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಕಿರುತೆರೆ ನಟ ಆಶಿಶ್ ಕಪೂರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪಂಜಾಬಿ ಬಾಗ್ ನ ನಿವಾಸಿ ಹಾಗೂ ಖಾಸಗಿ ಕಂಪನಿಯೊಂದರ ಉದ್ಯೋಗಿಯಾದ 24 ವರ್ಷದ ಮಹಿಳೆಯೊಬ್ಬರು ಸಿವಿಲ್ ಲೈನ್ಸ್ ನ ಮನೆಯೊಂದರಲ್ಲಿ ನಡೆದಿದ್ದ ಔತಣ ಕೂಟದಲ್ಲಿ ಗುಂಪೊಂದು ನನಗೆ ಮಾದಕ ದ್ರವ್ಯ ನೀಡಿ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ನನ್ನ ಸ್ನೇಹಿತರೊಬ್ಬರು ಸಿವಿಲ್ ಲೈನ್ಸ್ ನಲ್ಲಿರುವ ಅವರ ಮತ್ತೋರ್ವ ಸ್ನೇಹಿತರ ನಿವಾಸದಲ್ಲಿ ಆಯೋಜನೆಗೊಂಡಿದ್ದ ಔತಣ ಕೂಟಕ್ಕೆ ನನ್ನನ್ನು ಆಮಂತ್ರಿಸಿದ್ದರು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದರು.
ಔತಣ ಕೂಟದಲ್ಲಿ ನಾನು ನನ್ನ ಸ್ನೇಹಿತ ಹಾಗೂ ಮತ್ತೋರ್ವ ಮಹಿಳೆ ಸೇರಿದಂತೆ ಐದು ಮಂದಿಯನ್ನು ನೋಡಿದೆ. ಆಗ ಗುಂಪು ನನ್ನ ಪಾನೀಯಕ್ಕೆ ಮಾದಕ ದ್ರವ್ಯ ಬೆರೆಸಿ, ನಾನು ಪ್ರಜ್ಞಾಹೀನಳಾಗುವಂತೆ ಮಾಡಿದ ನಂತರ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತು ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ನನ್ನನ್ನು ಥಳಿಸಿದ ಆ ಗುಂಪು, ನನ್ನ ಮೇಲಿನ ಹಲ್ಲೆಯನ್ನು ಚಿತ್ರೀಕರಿಸಿಕೊಂಡಿತು ಎಂದೂ ಆಕೆ ಆಪಾದಿಸಿದ್ದಾರೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ಒಂದು ವೇಳೆ ಈ ಘಟನೆಯನ್ನು ಯಾರಿಗಾದರೂ ತಿಳಿಸಿದರೆ, ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲಾಗುವುದು ಎಂದು ಆರೋಪಿಗಳು ಆಕೆಗೆ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ನಂತರ, ಆಕೆಯನ್ನು ಮನೆಯ ಹೊರಗೆ ಬಿಟ್ಟು, ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉತ್ತರ ದಿಲ್ಲಿಯ ಉಪ ಪೊಲೀಸ್ ಆಯುಕ್ತ ರಾಜಾ ಬಂತಿಯಾ, “ಟಿವಿ ನಟ ಆಶೀಶ್ ಕಪೂರ್ ರನ್ನು ಬಂಧಿಸಲಾಗಿದೆ” ಎಂದು ದೃಢಪಡಿಸಿದ್ದಾರೆ.