ಉಪ್ಪಿನಂಗಡಿ: ದುಷ್ಕರ್ಮಿಗಳು ಹಟ್ಟಿಯಿಂದಲೇ ದನವನ್ನು ಕಳವು ಮಾಡಿ, ಅದನ್ನು ಮಾಲಕನ ತೋಟದಲ್ಲೇ ಕೊಂದು ಮಾಂಸ ಮಾಡಿಕೊಂಡು ಉಳಿದ ಭಾಗವನ್ನು ಬಿಟ್ಟು ಪರಾರಿಯಾದ ಘಟನೆ ಪೆರ್ನೆ ಸಮೀಪದ ಕಡಂಬು ಗ್ರಾಮದಲ್ಲಿ ದನ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಡಂಬು ನಿವಾಸಿ ದೇಜಪ್ಪ ಮೂಲ್ಯ ಅವರ ಹಟ್ಟಿಯಲ್ಲಿ ಸಾಕಿದ್ದ ಎರಡು ವರ್ಷದ ಗಬ್ಬದ ದನವು ಕಳೆದ ರಾತ್ರಿ ಕಾಣೆಯಾಗಿತ್ತು. ಸೆ.4ರ ಬೆಳಿಗ್ಗೆ ಎದ್ದಾಗ ದನ ಹಟ್ಟಿಯಲ್ಲಿ ಕಾಣದಿದ್ದರಿಂದ ಮನೆಯವರು ಹುಡುಕಾಟ ನಡೆಸಿದಾಗ, ತೋಟದಲ್ಲೇ ದನವನ್ನು ಕೊಂದು ಮಾಂಸ ಮಾಡಲಾಗಿರುವುದು ಪತ್ತೆಯಾಯಿತು.
ಅಲ್ಲಿಯೇ ಚರ್ಮ ಹಾಗೂ ಇತರೆ ಅವಶೇಷಗಳನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.