ವೇದಿಕೆಯಲ್ಲಿ ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಮೃತಪಟ್ಟ ವಿಧಾನಸಭೆ ಸಿಬ್ಬಂದಿ !

ತಿರುವನಂತಪುರಂ: ಓಣಂ ಆಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ನೃತ್ಯ ಪ್ರದರ್ಶನದ ವೇಳೆ ಕೇರಳ ವಿಧಾನಸಭೆಯ ಸಿಬ್ಬಂದಿಯೊಬ್ಬರು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಸೋಮವಾರ (ಸೆ.1) ನಡೆದಿದೆ.

ವಿಧಾನಸಭೆಯಲ್ಲಿ ಹಿರಿಯ ದರ್ಜೆಯ ಗ್ರಂಥಪಾಲಕ ಜುನೈಸ್ ಅಬ್ದುಲ್ಲಾ (46) ಮೃತ ವ್ಯಕ್ತಿ.

ಸೋಮವಾರ (ಸೆ.1)ನಡೆದ ಓಣಂ ಆಚರಣೆಯ ಕಾರ್ಯಕ್ರಮದ ಭಾಗವಾಗಿ ನೃತ್ಯ ಮಾಡುತ್ತಿದ್ದಾಗ ಜುನೈಸ್ ಅಬ್ದುಲ್ಲಾ ಅವರು ಕುಸಿದು ಬಿದ್ದಿದ್ದಾರೆ. ಈ ವೇಳೆ ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಷ್ಟೋತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಅಬ್ದುಲ್ಲಾ ಅವರು ವಯನಾಡ್ ಮೂಲದವರಾಗಿದ್ದು, ವಿಧಾನಸಭೆಯಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ ಅಲ್ಲದೆ ಈ ಹಿಂದೆ ಮಾಜಿ ಶಾಸಕ ಪಿವಿ ಅನ್ವರ್ ಅವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು ಎಂದು ಹೇಳಲಾಗಿದೆ.

error: Content is protected !!