ಮಲಯಾಳಂ ಸಿನಿರಂಗದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುವ ಹನಿ ರೋಸ್ ಈಗ ಹೊಸ ಗಾಸಿಪ್‌ಗಳಿಂದ ಸುದ್ದಿಯಲ್ಲಿದ್ದಾರೆ. ಕೇರಳದ ಪ್ರತಿ ಊರಲ್ಲೂ ಅಭಿಮಾನಿಗಳ ನೂಕು ನುಗ್ಗಲು ಹುಟ್ಟಿಸಿರುವ ಈ ನಟಿ, ಶೀಘ್ರದಲ್ಲೇ ಹಿಂದಿ ಸಿನಿರಂಗದ ‘ಬಿಗ್ ಬಾಗ್’ಗೆ ಕಾಲಿಡ್ತಾರಂತೆ.
ಅದರಲ್ಲೂ ಅಚ್ಚರಿಯ ವಿಷಯ ಏನೆಂದರೆ – ಸಲ್ಮಾನ್ ಖಾನ್ ಜೊತೆ ಹನಿ ರೋಸ್ ಅಭಿನಯಿಸಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಬಾಲಿವುಡ್‌ನ ‘ಭಾಯ್‌ಜಾನ್’ ಜೊತೆ ನಟಿಸುವ ಅವಕಾಶ ಎಂದರೆ ಯಾವ ದಕ್ಷಿಣ ಭಾರತೀಯ ನಟಿಗೂ ದೊಡ್ಡ ಮೈಲುಗಲ್ಲೇ ಸರಿ. ಹೀಗಾಗಿ ಈ ಗಾಸಿಪ್ ತಕ್ಷಣವೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಹನಿ ರೋಸ್ ತಮ್ಮ ಅಭಿನಯ ಶೈಲಿಯಿಂದ ಉತ್ತಮ ನಟಿಯೆಂದು ಸಾಬೀತು ಮಾಡಿಕೊಂಡಿದ್ದಾರೆ. ಗ್ಲಾಮರ್ ಹಾಗೂ ಪರ್ಫಾರ್ಮೆನ್ಸ್ ಎರಡರಲ್ಲೂ ತಾನೊಬ್ಬ ‘ಕಾಂಪ್ಲೀಟ್ ಪ್ಯಾಕೇಜ್’ ಅನ್ನಿಸಿಕೊಳ್ಳುವಂತಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಸಿಕ್ಕಿರುವ ಜನಪ್ರಿಯತೆ ಊರೂರಿಗೂ ಹರಡಿದೆ.
ಆದರೆ, ಹನಿ ರೋಸ್ ಬಗ್ಗೆ ಕೆಲವೊಂದು ಗಾಸಿಪ್‌ಗಳೂ ಫಿಲ್ಮ್ ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿವೆ. ಬಾಲಿವುಡ್ ಎಂಟ್ರಿ ವಿಚಾರ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಆದರೂ ಅವರ ಹೆಸರು ಈಗಾಗಲೇ ಹಲವಾರು ಬಿಗ್ ಪ್ರಾಜೆಕ್ಟ್‌ಗಳ ಜೊತೆಗೆ ಜೋಡಣೆಯಾಗಿದೆ.
ಅಭಿಮಾನಿಗಳ ಮಾತು ಏನೆಂದರೆ – “ಸಲ್ಮಾನ್ ಜೊತೆಗೆ ಹನಿ ರೋಸ್ ಬಂದರೆ ಖಚಿತವಾಗಿ ಪರದೆ ಬೆಂಕಿಯೇ ಕಾಣಿಸುತ್ತದೆ!” 🔥ಎನ್ನುವುದು ಅವರ ಅಭಿಮಾನಿಗಳ ಮಾತಾಗಿದೆ.
ಇದಲ್ಲದೆ, ಹನಿ ರೋಸ್ ಬಾಲಿವುಡ್ ಕಡೆಗೆ ಹೆಜ್ಜೆ ಹಾಕಿದರೆ, ಮಲಯಾಳಂ ಮಾತ್ರವಲ್ಲ, ದಕ್ಷಿಣ ಭಾರತದ ಪ್ರೇಕ್ಷಕರಿಗೂ ಇದು ಹೆಮ್ಮೆಯ ವಿಚಾರವಾಗುತ್ತದೆ.