ಇತಿಹಾಸದಲ್ಲೇ ಅತಿದೊಡ್ಡ ಆನ್‌ಲೈನ್‌ ವಂಚನೆ ಬಹಿರಂಗ: ಬರೋಬ್ಬರಿ 24.76 ಕೋಟಿ ರೂ. ಪಂಗನಾಮ!

ಕೊಚ್ಚಿ: ಕೇರಳದ ಇತಿಹಾಸದಲ್ಲೇ ದಾಖಲಾಗಿರುವ ಅತಿ ದೊಡ್ಡ ಆನ್ಲೈನ್ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಈ ಪ್ರಕರಣದಲ್ಲಿ ಉದ್ಯಮಿಯೋರ್ವರು ಬರೋಬ್ಬರಿ 24.76 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಕೊಚ್ಚಿ ಸಿಟಿ ಸೈಬರ್ ಪೊಲೀಸ್ ಸೋಮವಾರ ಸಂಜೆ ಎಫ್ಐಆರ್ ದಾಖಲು ಮಾಡಿದ್ದು, ಇದು ರಾಜ್ಯದ ಅತ್ಯಂತ ದುಬಾರಿ ಡಿಜಿಟಲ್ ವಂಚನೆಯ ಘಟನೆಗಳಲ್ಲಿ ಒಂದೆಂದು ಗುರುತಿಸಲಾಗಿದೆ.

ಸಂತ್ರಸ್ಥ ಉದ್ಯಮಿ ಮೊದಲು ತಿರುವನಂತಪುರಂನ ರಾಜ್ಯ ಪೊಲೀಸ್ ಮುಖ್ಯಾಲಯಕ್ಕೆ ಭೇಟಿ ನೀಡಿದ್ದು, ಬಳಿಕ ಆದ ದೂರನ್ನು ಕೊಚ್ಚಿ ಸೈಬರ್ ಪೊಲೀಸರಿಗೆ ವಹಿಸಲಾಯಿತು.

ಎಫ್ಐಆರ್ ಪ್ರಕಾರ, ಔಷಧಿ ಕಂಪನಿಯ ಮಾಲೀಕ 15 ಮಾರ್ಚ್ 2023 ರಿಂದ 29 ಆಗಸ್ಟ್ 2025 ರವರೆಗೆ 24.76 ಕೋಟಿ ರೂಪಾಯಿಗಳಷ್ಟು ಹಣ ವಂಚನೆಗೊಳಗಾಗಿದ್ದಾರೆ. ಡೇನಿಯಲ್ ಎಂದು ಗುರುತಿಸಲಾದ ಆರೋಪಿ, wwwl.capitalix.com ವೆಬ್ಸೈಟ್ ಮೂಲಕ ಸ್ಟಾಕ್ ಎಕ್ಸೇಂಜ್ ಮೂಲಕ ಭಾರೀ ಆದಾಯದ ಭರವಸೆ ನೀಡಿದ್ದಾರೆ. @capitalix_bot ಟೆಲಿಗ್ರಾಮ್ ಹ್ಯಾಂಡಲ್ ಮತ್ತು ಫೋನ್ ಕಾಲ್‌ಗಳ ಮೂಲಕ ಇವರನ್ನು ಸಂಪರ್ಕಿಸಿದ್ದಾರೆ.

ಇದನ್ನು ನಂಬಿದ ಉದ್ಯಮಿ, ವೆಬ್ಸೈಟ್ನಲ್ಲಿ ತನ್ನ ಆನ್ಲೈನ್ ವ್ಯಾಪಾರ ಖಾತೆಯಲ್ಲಿ ಪ್ರದರ್ಶಿಸಲಾದ ಹೆಚ್ಚಿನ ಆದಾಯದ ಆಸೆಯಿಂದ ಹಲವಾರು ಬ್ಯಾಂಕ್ ಖಾತೆಗಳಿಗೆ ಬೇ ₹24,76,21,042 ವರ್ಗಾಯಿಸಿದ್ದಾರೆ. ಆದರೆ ಇಷ್ಟು ಹೂಡಿಕೆ ಮಾಡಿದರೂ ಆದಾಯ ಬಾರದೇ ಇದ್ದಾಗ ತಾನು ಮೋಸ ಹೋಗಿರುವುದು ಅವರಿಗೆ ಅವರಿಗೆ ಅರಿವಾಗಿದೆ.

ಇದರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಕಲಮ್ 318(4) (ವಂಚನೆ) ಮತ್ತು 316(2) (ಕ್ರಿಮಿನಲ್ ಟ್ರಸ್ಟ್ ಉಲ್ಲಂಘನೆ) ಅಡಿಯಲ್ಲಿ ಸೈಬರ್ ಪೊಲೀಸರು ಪ್ರಕರಣ ದಾಖಲಾಗಿದೆ.

ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

error: Content is protected !!