ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು !

ಉಡುಪಿ: ಕಂಟೇನರ್ ಲಾರಿಯ ಕೆಳಗೆ ಸಿಲುಕಿ ಯುವಕನೊಬ್ಬ(38) ಸೋಮವಾರ(ಸೆ.1) ತಡರಾತ್ರಿ ಅಂಬಲಪಾಡಿಯಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆ ಸಂಭವಿಸಿದೆ.

ದೊಂದೂರುಕಟ್ಟೆ ಮೂಲದ ಬೈಕ್ ಸವಾರ ಪ್ರದೀಪ್ (38) ಮೃತ ವ್ಯಕ್ತಿ.

ಪ್ರದೀಪ್ ಅಂಬಲಪಾಡಿಯಲ್ಲಿರುವ ಆಟೋಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕಂಟೇನರ್ ಲಾರಿಯ ಕೆಳಗೆ ಸಿಲುಕಿ ತಲೆ ಸಂಪೂರ್ಣವಾಗಿ ಛಿದ್ರವಾಗಿತ್ತು.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು.

ಉಡುಪಿ ಸಂಚಾರ ಪೊಲೀಸರು ಕಾರ್ಯವಿಧಾನಗಳನ್ನು ನಡೆಸಿದರು.

error: Content is protected !!