ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮಾಜಿ ಅಧ್ಯಕ್ಷ ಲಲಿತ್ ಮೋದಿ ‘ಸ್ಲ್ಯಾಪ್‌ಗೇಟ್’ ವೀಡಿಯೋ ಬಹಿರಂಗಪಡಿಸಿ ವೈರಲ್ ಮಾಡಿರುವ ಬೆನ್ನಲ್ಲೇ ಮಾಜಿ ಭಾರತ ಸ್ಪಿನ್‍ರ್ ಹಾರ್ಭಜನ್ ಸಿಂಗ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
2008ರಲ್ಲಿ ನಡೆದಿದ್ದ ಹರ್ಭಜನ್ ಶ್ರೀಶಾಂತ್ ನಡುವೆ ಸಂಭವಿಸಿದ್ದ ಘಟನೆಯ ವೀಡಿಯೋವನ್ನು ಲಲಿತ್ ಮೋದಿ ಒಂದು ಪಾಡ್‌ಕಾಸ್ಟ್‌ನಲ್ಲಿ ಬಹಿರಂಗ ಪಡಿಸಿದ್ದರು. ಈ ಕ್ಲಿಪ್ ಬಹಿರಂಗವಾಗಿರುವ ಕುರಿತಂತೆ ಅವರ ಅಭಿಮಾನಿಗಳು ಪ್ರತಿಕ್ರಿಯೆಯನ್ನು ಕೇಳಿದ್ದರು.
ಆಗ ಹರ್ಭಜನ್ “ವೀಡಿಯೋವನ್ನು ಬಹಿರಂಗ ಪಡಿಸಿದ ರೀತಿ ತಪ್ಪು. ಇದು ನಡೆಯಬಾರದಿತ್ತು. ಇದರ ಹಿಂದೆ ಅವರ(ಲಲಿತ್ ಮೋದಿ) ಸ್ವಾರ್ಥಿ ಉದ್ದೇಶ ಇರಬಹುದು. 18 ವರ್ಷಗಳ ಹಿಂದೆ ನಡೆದಿದ್ದ ಘಟನೆಯನ್ನು ಜನರು ಮರೆತಿದ್ದಾರೆ. ಆದರೆ ಅವರು ಅದನ್ನು ಮತ್ತೆ ಜನರಿಗೆ ನೆನಪಿಸುತ್ತಿದ್ದಾರೆ” ಎಂದರು.
“ಏನೋ ಕೆಟ್ಟ ಘಳಿಗೆಯಲ್ಲಿ ಘಟನೆ. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸಿದ್ದೆ, ಅಲ್ಲದೆ ಇಂದಿಗೂ ಅದರ ಬಗ್ಗೆ ವಿಷಾದವಿದೆ. ಆಟದ ಹುಮ್ಮಸ್ಸಿನಲ್ಲಿದ್ದ ನಮಗೆ ಕೊನೆ ಘಳಿಗೆ ಆಘಾತದಿಂದ ಈ ಘಟನೆ ಸಂಭವಿಸಿದೆ. ಎಲ್ಲರಿಂದಲೂ ಇಂದೊಂದು ತಪ್ಪುಗಳು ಸಂಭವಿಸಿದವು, ಅದರ ಬಗ್ಗೆ ನಾವು ಲಜ್ಜಿತರಾಗಿದ್ದೇವೆ” ಎಂದು ಹೇಳಿದರು.
ವೀಡಿಯೋದಲ್ಲಿ ಏನಿತ್ತು?
ಲಲಿತ್ ಮೋದಿ ಬಹಿರಂಗ ಮಾಡಿದ ವೀಡಿಯೋದಲ್ಲಿ, ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಆಟ ಮುಗಿದ ನಂತರ ಪರಸ್ಪರ ಹ್ಯಾಂಡ್‌ಶೇಕ್ ಮಾಡುವ ಸಂದರ್ಭದಲ್ಲಿ, ಹಾರ್ಭಜನ್ ಶ್ರೀಶಾಂತ್ ಅವರನ್ನು ಹೊಡೆಯುವುದನ್ನು ಕಾಣಬಹುದು. ಆಗ ಶ್ರೀಶಾಂತ್ ಕೋಪಗೊಂಡು ಹಾರ್ಭಜನ್ ಕಡೆಗೆ ಧಾವಿಸಿದರು, ಆದರೆ ಇಬ್ಬರನ್ನೂ ತಂಡದ ಇತರರು ಬೇರ್ಪಡಿಸಿದರು. ಈ ವೇಳೆ ಶ್ರೀಶಾಂತ್ ಕೆನ್ನೆಗೆ ಕೈ ಇಡುತ್ತಾ ಗೊಳೋ ಎಂದು ಅಳುತ್ತಿದ್ದ ವಿಡಿಯೋ ಅಂದು ಭಾರೀ ಸಂಚಲನ ಸೃಷ್ಟಿತ್ತು.
ಆದರೆ ಈ ಘಟನೆ ಬಿಸಿಸಿಸಿಐ ಮತ್ತು ಐಪಿಎಲ್ ಆಯೋಗಕ್ಕೆ ಹಿಡಿಸಲಿಲ್ಲ. ಕೋಡ್ ಆಫ್ ಕಂಡಕ್ಟ್ ಉಲ್ಲಂಘಿಸಿದ್ದಕ್ಕಾಗಿ ಹಾರ್ಭಜನ್‌ಗೆ 11 ಪಂದ್ಯಗಳ ನಿಷೇಧ ವಿಧಿಸಲಾಯಿತು ಮತ್ತು ಅವರಿಗೆ ಕೊಡುತ್ತಿದ್ದ ಸಂಭಾವನೆಯನ್ನು ಕಡಿತಗೊಳಿಸಲಾಗಿತ್ತು. ಹರ್ಭಜನ್ ಅವರು ಇದೇ ವಿಷಯವಾಗಿ ತಂಡದ = ರವಿಚಂದ್ರನ್ ಆಶ್ವಿನ್ ಅವರ ಪಾಡ್‌ಕಾಸ್ಟ್‌ನಲ್ಲೂ ಕ್ಷಮೆಯಾಚಿಸಿದ್ದರು. ಆದರೆ, ಈಗ ಶ್ರೀಶಾಂತ್ ಅವರೊಂದಿಗೆ ತಮ್ಮ ಸಂಬಂಧ ಉತ್ತಮವಾಗಿದೆ ಎಂದೂ ಹೇಳಿದ್ದರು.