ಕಾರವಾರ: ಊಟ ಮಾಡುತ್ತಿದ್ದ ವೇಳೆ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾದ ಎಂಬಲ್ಲಿನ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಭಾನುವಾರ(ಆ.31) ಸಂಭವಿಸಿದೆ.
ಬಿಣಗಾ ಮಾಳಸವಾಡ ನಿವಾಸಿ ಅಮಿತ್ ಮಾಳಸೇರ್ (38) ಮೃತ ವ್ಯಕ್ತಿ .
ಅಮಿತ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದರು.
ಮಂಗಳೂರು: ಮುಸ್ಲಿಂ ಕುಟುಂಬವೊಂದಕ್ಕೆ ಮನೆಯಲ್ಲಿ ಅಡುಗೆ ಮಾಡಿಕೊಡಲು ಮುಸ್ಲಿಂ ಮಹಿಳೆ ಬೇಕಾಗಿದ್ದಾರೆ. Salary 25000/- ಸಂಪರ್ಕ ಸಂಖ್ಯೆ: 8660040298
ಅಮಿತ್ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಅನ್ನದ ಅಗಳೊಂದು ಗಂಟಲಲ್ಲಿ ಸಿಲುಕಿಕೊಂಡಿದೆ. ತಕ್ಷಣ ಮನೆಯವರು ಅಮಿತ್‌ಗೆ ನೀರು ಕುಡಿಸಿದ್ದು, ಆತ ಅಲ್ಲೇ ಕುಸಿದು ಬಿದಿದ್ದಾರೆ. ತಕ್ಷಣ ಅವರನ್ನು ಅಂಬುಲೆನ್ಸ್ ಮೂಲಕ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೇ ವೈದ್ಯರು ಪರೀಕ್ಷಿಸಿದಾಗ ಗಂಟಲಲ್ಲಿ ಅನ್ನದ ಅಗಳು ಸಿಲುಕಿ ಅಮಿತ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.