13 ವರ್ಷದ ಬಾಲಕನಿಂದ ಮಹಿಳೆಯರಿಗೆ ಕಿರುಕುಳ : ಆರೋಪಿ ಬಾಲಕ ಪೊಲೀಸರ ವಶ !

ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಪೇಟೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತದ್ದ 13 ವರ್ಷದ ಬಾಲಕನೋರ್ವನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪಾಣೆಮಂಗಳೂರು ಪೇಟೆ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಮಹಿಳೆಯರಿಗೆ ಅಪಮಾನವಾಗುವ ರೀತಿಯಲ್ಲಿ ಸ್ಕೂಟರ್ ಸವಾರನೋರ್ವ ಕಿರುಕುಳ ನಿಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಅಪರಾಧ ಕ್ರಮಾಂಕ 95/2025, ಕಲಂ 74 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಂದ ಗಂಭೀರವಾಗಿ ಆರೋಪಗಳು ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಕೈಗೆತ್ತುಗೊಂಡಿದ್ದು, ಸ್ಥಳೀಯವಾಗಿ ಕೆಲವು ಸಿಸಿ ಟಿವಿಗಳ ಫೂಟೇಜ್‌ ಪರಿಶೀಲನೆ ನಡೆಸಿ ಪೊಲೀಸರು ಆರೋಪಿ ಬಾಲಕನನ್ನು ಪತ್ತೆ ಹಚ್ಚಿ ಮಂಗಳವಾರ(ಆ26) ವಶಕ್ಕೆ ಪಡೆದುಕೊಂಡಿದ್ದಾರೆ. ಪಾಣೆಮಂಗಳೂರು ಪೇಟೆ ಬಳಿ ತನ್ನ ಪೋಷಕರ ಜೊತೆ ವಾಸವಾಗಿರುವ 13 ವರ್ಷದ ಬಾಲಕ ಈ ಕೃತ್ಯ ಎಸಗಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ.

ಬಾಲಕನನ್ನು ಆ. 26 ರಂದು ಆತನ ಮನೆಯಲ್ಲೇ ತಾಯಿಯ ಸಮಕ್ಷಮ ವಿಚಾರಿಸಿ ಹೇಳಿಕೆ ಪಡೆದು, ಮಂಗಳೂರು ಬಾಲನ್ಯಾಯ ಮಂಡಳಿ ಸಮಕ್ಷಮಕ್ಕೆ ಹಾಜರುಪಡಿಸಲಾಗಿದ್ದು, ಬಾಲ ನ್ಯಾಯಾಲಯವು ಬಾಲಕನನ್ನು ಸೆ.2 ವರೆಗೆ ಪರಿವೀಕ್ಷಣಾ ಮಂದಿರಕ್ಕೆ ಬಿಡುವಂತೆ ಆದೇಶ ಮಾಡಿದೆ.

error: Content is protected !!