ಮಂಗಳೂರು, ಮೂಲ್ಕಿ, ಉಳ್ಳಾಲ, ಬಂಟ್ವಾಳ, ಪುತ್ತೂರು ತಾಲೂಕಿನಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮತ್ತು ಬಿ. ಇ. ಓ. ರವರೊಂದಿಗೆ ಚರ್ಚೆ ಮಾಡಲಾಗಿ ಇಂದು ಶಾಲೆಗಳಿಗೆ ರಜೆ ನೀಡುವುದು ಸೂಕ್ತವೆಂದು ತಿಳಿದು ಆಯಾ ತಹಸೀಲ್ದಾರ್ ಅವರು ಇಂದು ದಿನಾಂಕ 28-8-25 ರಂದು ತಾಲೂಕಿನ ಅಂಗನವಾಡಿ ಕೇಂದ್ರಗಳು. ಸರಕಾರಿ ಪ್ರಾಥಮಿಕ /ಪ್ರೌಢ ಶಾಲೆಗಳು ಮತ್ತು ಖಾಸಗಿ ವಿದ್ಯಾ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಮಂಗಳೂರು ತಾಲೂಕಿನಲ್ಲಿ ಪದವಿಪೂರ್ವ ಕಾಲೇಜಿಗೂ ರಜೆ ಘೋಷಿಸಲಾಗಿದೆ.