ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಫಿಜಿಯೋಥೆರಪಿ ತನ್ನ ಪ್ರಥಮ ಅಂತಾರಾಷ್ಟ್ರೀಯ ಫಿಜಿಯೋಥೆರಪಿ ಕಾನ್ಫರೆನ್ಸ್ ‘SPARC 2025’ ಅನ್ನು ಆಗಸ್ಟ್ 29 ಮತ್ತು 30ರಂದು ಪಾಂಡೇಶ್ವರ ಕ್ಯಾಂಪಸ್‌ನಲ್ಲಿ ಕುಲಾಧಿಪತಿ ಡಾ ಸಿಎ ಎ.ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕರು ಮಂಗಳೂರಿನ ಪತ್ರಿಕಾಭವನದಲ್ಲಿ ಮಾಹಿತಿ ನೀಡಿದ್ದಾರೆ.
ʻರಿವೈಟಲೈಸಿಂಗ್ ರಿಹ್ಯಾಬಿಲಿಟೇಷನ್: ಶೇಪಿಂಗ್ ದ ಪ್ಯೂಚರ್ ಆಫ್ ಫಿಜಿಯೋಥೆರಪಿʼ ಎಂಬ ವಿಷಯಾಧಾರಿತ ಈ ಸಮ್ಮೇಳನವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.
ಸುಮಾರು 5 ದೇಶಗಳು, 10 ರಾಜ್ಯಗಳು ಹಾಗೂ 35 ಫಿಜಿಯೋಥೆರಪಿ ಕಾಲೇಜುಗಳಿಂದ 1,500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾರ್ಡಿಯೊ-ರೆಸ್ಪಿರೇಟರಿ, ಆಂಕಾಲಜಿ, ಆರ್ಥೋ, ನ್ಯೂರೋ, ಮಹಿಳಾ ಆರೋಗ್ಯ ಸೇರಿದಂತೆ ಪುನರ್ವಸತಿ ವಿಜ್ಞಾನ ಕ್ಷೇತ್ರಗಳ ಕುರಿತು ತಜ್ಞರಿಂದ ಉಪನ್ಯಾಸ, ಪ್ಯಾನಲ್ ಚರ್ಚೆ, ಪೇಪರ್ ಹಾಗೂ ಪೋಸ್ಟರ್ ಪ್ರಸ್ತುತಿಗಳು ನಡೆಯಲಿವೆ.
ಪೂರ್ವಸಮ್ಮೇಳನ ವರ್ಕ್‌ಶಾಪ್ ಆಗಸ್ಟ್ 27–28ರಂದು ಡಾ. ಸಮನಾ ಸಯೇದ್ (ದುಬೈ) ಅವರಿಂದ ನಡೆಯಲಿದ್ದು, ಆಗಸ್ಟ್ 31ರಂದು ಡಾ. ವಾಕರ್ ಎಂ. ನೆಕ್ಕಿ (ಕತಾರ್) ಮತ್ತು ಕೊಬಿ ವೈಸ್ (ಇಸ್ರೇಲ್) ಅವರಿಂದ ನಂತರದ ವರ್ಕ್‌ಶಾಪ್‌ಗಳು ನಡೆಯಲಿವೆ.
ಸಾಂಸ್ಕೃತಿಕ ಅಂಗವಾಗಿ ಆಗಸ್ಟ್ 29ರಂದು ಸಂಜೆ “ಫ್ಯೂಷನ್ ಫಿಯೆಸ್ಟಾ” ಅಂತರ್‌ಕಾಲೇಜು ಸ್ಪರ್ಧೆಗಳು (ನೃತ್ಯ, ನಾಟಕ, ಫ್ಯಾಷನ್ ಶೋ) ನಡೆಯಲಿವೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ಅಜಯ್ ಕುಮಾರ್, ಶ್ರೀನಿವಾಸ ವಿವಿ ಅಭಿವೃದ್ಧಿ ರಿಜಿಸ್ಟ್ರಾರ್, ಡಾ. ತ್ರಿಶಾಲಾ ನೊರೋನ್ಹಾ ಪಿ.ಟಿ., ಡೀನ್, ಫಿಸಿಯೋಥೆರಪಿ ಸಂಸ್ಥೆ, ಶ್ರೀನಿವಾಸ ವಿಶ್ವವಿದ್ಯಾಲಯ, SPARC ಸಂಘಟನಾ ಅಧ್ಯಕ್ಷೆ, ಡಾ. ಪ್ರೇಮ್ ಕುಮಾರ್, ಸಂಚಾಲಕ, ಡಾ.ಮಧುರಿಪು ಪಿ. ಪಿ.ಟಿ. ಮತ್ತು ಡಾ. ಐಶ್ವರ್ಯ ನೊನದನೆ ಪಿ.ಟಿ. ಸಹ ಸಂಚಾಲಕರು ಉಪಸ್ಥಿತರಿದ್ದರು.