ʻಒಂದು ಕಡೆ ಸಮೀರ್‌, ಇನ್ನೊಂದು ಕಡೆ ಸೈಮನ್‌, ಮತ್ತೊಂದೆಡೆ ಎಸ್‌ಡಿಪಿಐ: ಧರ್ಮಸ್ಥಳ ವಿರುದ್ಧ ಷಡ್ಯಂತ್ರʼ

ಮಂಗಳೂರು: ಗಿರೀಶ್‌ ಮಟ್ಟೆಣ್ಣನವರ್‌ ಹುಬ್ಬಳ್ಳಿ ಮೂಲದ ರೌಡಿ ಶೀಟರ್‌ ಮದನ್‌‌ ಬುಗಡಿಯನ್ನು ಮಾನವ ಹಕ್ಕುಗಳ ಸದಸ್ಯ ಎಂದಿದ್ದಾರೆ. ಇದೇ ನಕಲಿ ಮಾನವ ಹಕ್ಕು ಸದಸ್ಯ ಮದನ್‌ನನ್ನು ಕರ್ಕೊಂಡು ಬಂದಿದ್ದು, ಚರ್ಚ್‌ ಮದಬೋಧಕ ಸೈಮನ್‌ ಎನ್ನುವಾತ. ಒಂದು ಕಡೆ ಸಮೀರ್‌ ಇನ್ನೊಂದು ಕಡೆ ಸೈಮನ್‌! ಧರ್ಮಸ್ಥಳ ವಿಚಾರದಲ್ಲಿ ಇವರಿಗೇನು ಕೆಲಸ? ಪಿಎಫ್‌ಐ ನಂಟು ಹೊಂದಿರುವ ಎಸ್‌ಡಿಪಿಐ ಕೂಡ ಬಂದಿರುವುದನ್ನು ಒಟ್ಟಾಗಿ ನೋಡಿದಾಗ ಇಲ್ಲಿ ಏನೋ ಷಡ್ಯಂತ್ರ ಇರುವುದು ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮೀರ್‌ ನಮ್ಮ ಧಾರ್ಮಿಕ ಕ್ಷೇತ್ರದ ಮೇಲೆ ಆರೋಪ, ಅಪಚಾರ ಮಾಡಿ ಇಡೀ ದೇಶ ವಿದೇಶಗಳಲ್ಲಿ ತೋರಿಸಿ ಧರ್ಮಕ್ಷೇತ್ರದ ಮೇಲೆ ಅಪಚಾರ ಬರುವಂತೆ ಮಾಡಿದರೂ ಅವನನ್ನು ಇನ್ನೂ ಯಾಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದರು. ಚಿನ್ನಯ್ಯ ಕೊಟ್ಟ ಹೇಳಿಕೆ ಪ್ರಕಾರ ಬುರುಡೆ ಪ್ರಕರಣ ಏನಾಗಿದೆ ಎಂದು ಗೊತ್ತಿದೆ. ಆದರೆ ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.

ಪ್ರಕರಣದಲ್ಲಿ ವ್ಯವಸ್ಥಿತ ಷಡ್ಯಂತ್ರ ಇರುವುದನ್ನು ಸ್ವತಃ ಡಿಕೆಶಿಯವರೇ ಉಲ್ಲೇಖಿಸಿದ್ದಾರೆ. ಮಾಧ್ಯಮಗಳ ಪ್ರಕಾರ, ಸಮೀರ್‌ಗೆ ಅಂತಾರಾಷ್ಟ್ರೀಯ ಮಟ್ವದಲ್ಲಿ ಆದಾಯ ಬಂದಿದೆ. ಅವನ ಸ್ವಾರ್ಥಕ್ಕಾಗಿ ಕ್ಷೇತ್ರದ ಮೇಲೆ ಅಪಚಾರ ಮಾಡಿದರೂ ಅವನ ಮೇಲೆ ಯಾಕೆ ಮೃಧು ಧೋರಣೆ? ಇಷ್ಟೆಲ್ಲಾ ಆರೋಪ ಮಾಡಿದ ಮೇಲೂ ಹಿಂದೂಗಳು ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದರೆ ಅದಕ್ಕೆ ಅವರ ತಾಳ್ಮೆಯೇ ಕಾರಣ. ಆದರೆ ಇನ್ನೊಂದು ಧರ್ಮದ ಮೇಲೆ ಹಿಂದೂಗಳು ಹೀಗೆ ಆರೋಪ ಮಾಡಿದ್ದರೆ ಅವರ ಕಥೆ ಏನಾಗುತ್ತಿತ್ತು? ಅಥವಾ ಸಮೀರ್‌ನ ಪರಿಸ್ಥಿತಿ ಏನಾಗುತ್ತಿತ್ತು? ಆದರೂ ಹಿಂದೂಗಳು ಸಂಯಮದಿಂದ ತನಿಖೆಗೆ ಸಹಕಾರ ಕೊಟ್ಟಿದ್ದಾರೆ. ಹಾಗಾಗಿ ಸಮೀರ್‌ನನ್ನು ತಕ್ಷಣ ಬಂಧನ ಮಾಡ್ಬೇಕು ಎಂದರು.


ತಿಮರೋಡಿ ಬಗ್ಗೆ ನಿಮ್ಮ ನಿಲುವೇನು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಂಪಲ, ತಿಮರೋಡಿಯನ್ನು ಬಂಧನ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಅವರನ್ನು ಯಾಕೆ ಬಂಧಿಸಿದ್ದು ಎಂದು ಸರ್ಕಾರಕ್ಕೆ, ಪೊಲೀಸ್‌ ಇಲಾಖೆಗೆ ಗೊತ್ತಿದೆ. ಸೌಜನ್ಯ ಇರಲಿ, ಬೇರೆ ಯಾವುದೇ ತನಿಖೆ ಇರಲಿ, ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಯಾವ ಮಟ್ಟದ ತನಿಖೆಗೂ ಬಿಜೆಪಿಯ ಸ್ಪಷ್ಟ ಸಹಕಾರವಿದೆ. ಅದೇ ರೀತಿ ಧರ್ಮಸ್ಥಳ ಪ್ರಕರಣವನ್ನೂ ಎನ್‌ಐಯಗೆ ಕೊಡಬೇಕು. ಯಾಕೆಂದರೆ ಎಸ್‌ಐಟಿ ಒಂದು ರಾಜ್ಯದ ತನಿಖಾ ಸಂಸ್ಥೆಯಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ವ್ಯವಹಾರ ನಡೆದಿರುವ ಸಾಧ್ಯತೆ ಇದೆ, ಅಲ್ಲದೆ ಇತರ ರಾಜ್ಯಗಳ ವ್ಯಕ್ತಿಗಳ ಹೆಸರು ಕೇಳಿಬಂದಿರುವುದರಿಂದ ಈ ಪ್ರಕರಣದ ಎನ್‌ಐಎ ತನಿಖೆ ನಡೆಸುವಂತೆ ಕುಂಪಲ ಆಗ್ರಹಿಸಿದರು.

ಸೆ.1ರಂದು ಸುಮಾರು 1 ಲಕ್ಷ ಕಾರ್ಯಕತರು ಧರ್ಮಸ್ಥಳ ಭೇಟಿ
ಸೆಪ್ಟೆಂಬರ್‌ 1ರಂದು ದ.ಕ. ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 50 ಸಾವಿರದಿಂದ ಒಂದು ಲಕ್ಷದವರೆಗೆ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ಧಾರ್ಮಿಕ ನಂಬಿಕೆಯ ಜೊತೆ ನಾವಿದ್ದೇವೆ ಎಂಬುದನ್ನು ತೋರಿಸುವ ಸಲುವಾಗಿ ಈ ಭೇಟಿ ನಡೆಯಲಿದೆ ಎಂದು ಸತೀಶ್ ಕುಂಪಲ ಇದೇ ವೇಳಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಶಾಸಕ  ಮುಖಂಡರಾದ  ಸಂಜಯ್ ಪ್ರಭು, ಪ್ರೇಮಾನಂದ ಶೆಟ್ಟಿ, ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!