ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಿದ ಡಿಕೆಶಿ !

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಅಧಿವೇಶನದ ವೇಳೆ ಆರ್‌ಎಸ್‌ಎಸ್‌ನ ಗೀತೆ “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಹಾಡಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ತಪ್ಪು ಉದ್ದೇಶವಿಲ್ಲದ ಕಾರಣದಿಂದಾಗಿ ಈ ನಡೆ ನಡೆದಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಕುರಿತು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಅಥವಾ ಇತರರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಅವರು ಎಲ್ಲರ ಸಮಕ್ಷಮ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, “ನಾನು ಯಾವುದೇ ತಪ್ಪು ಮಾಡಿಲ್ಲ. ಬದಲಾಗಿ, ವಿರೋಧಪಕ್ಷದ ಸಿದ್ಧಾಂತದ ಅರಿವಿದೆ ಎಂಬುದನ್ನು ತೋರಿಸುವ ಉದ್ದೇಶದಿಂದ ಆ ಗೀತೆ ಉಚ್ಚರಿಸಿದ್ದೆ. ಆದರೆ ಯಾರಿಗಾದರೂ ಈ ನಡೆ ತಪ್ಪಾಗಿ ಕಂಡಿದ್ದರೆ ಅಥವಾ ಅವರ ಭಾವನೆಗೆ ಧಕ್ಕೆಯಾಗಿದ್ದರೆ, ನಾನು ಅವರ ಬಳಿ ಕ್ಷಮೆ ಕೇಳುತ್ತೇನೆ,” ಎಂದು ಹೇಳಿದರು.

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇

ನನ್ನ ಮೇಲೆ ಅನುಮಾನ ಪಡುವವರು ಮೂರ್ಖರು, ಅವರೆಲ್ಲ ನನ್ನ ನನ್ನ ಹತ್ತಿರಕ್ಕೆ ಬರಲು ಅವರು ಸಾಧ್ಯವಿಲ್ಲ ‌ಎಂದು ಡಿಸಿಎಂ ಡಿಕೆಶಿ ತನ್ನದೇ ಸ್ಟೈಲ್​ನಲ್ಲಿ ತಿರುಗೇಟು ಕೊಟ್ಟಿದ್ದಾರೆ.

ಅಲ್ಲದೆ, ತಮ್ಮ ಕಾಂಗ್ರೆಸ್ ಪಕ್ಷದ ನಿಷ್ಠೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು, “ನಾನು ಹುಟ್ಟಿನಿಂದಲೂ ಕಾಂಗ್ರೆಸ್‌ನವನಾಗಿದ್ದೇನೆ. ನನ್ನ ರಕ್ತವೂ ಕಾಂಗ್ರೆಸ್‌ನದ್ದು. ಪಕ್ಷದ ತತ್ವ ಹಾಗೂ ಹೈಕಮಾಂಡ್‌ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಅವರು ಸ್ಪಷ್ಟಪಡಿಸಿದರು. ಇದಲ್ಲದೆ, ಯಾವುದೇ ವ್ಯಕ್ತಿಯ ಭಾವನೆಗೆ ತೊಂದರೆ ಆಗುವ ಉದ್ದೇಶ ತಮ್ಮದು ಅಲ್ಲ ಎಂಬುದನ್ನು ಡಿಕೆಶಿ ಧೃಡವಾಗಿ ಹೇಳಿದರು. “ನಾನು ಯಾರ ಮನಸ್ಸನ್ನೂ ನೋಯಿಸಲು ಇಚ್ಛಿಸಿದ್ದಲ್ಲ. ಅದು ಕೇವಲ ರಾಜಕೀಯ ಹಾಸ್ಯದಿಂದಾಗಿಯೇ ನಡೆದದ್ದು,” ಎಂದು ಸ್ಪಷ್ಟನೆ ನೀಡಿದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!