ಈ ಜಗತ್ತಿನಲ್ಲಿ ಕೊರಿಯನ್ ಸುಂದರಿಯರನ್ನು ಮೀರಿಸುವವರು ಯಾರೂ ಇಲ್ಲವೆಂದೇ ಹೇಳಬಹುದು. ಕೊರಿಯನ್ ಸುಂದರಿಯರಿಂದಾಗಿಯೇ ವೆಬ್ ಸೀರೀಸ್‌ಗಳು ಇಡೀ ಜಗತ್ತಿನಲ್ಲಿ ಜನಪ್ರಿಯತೆ ಪಡೆದಿದೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಕೊರಿಯನ್ ನಟ-ನಟಿಯರು ತಮ್ಮ ಪ್ರತಿಭೆ, ಆಕರ್ಷಕ ವ್ಯಕ್ತಿತ್ವ ಮಾತ್ರವಲ್ಲದೇ, ಫಿಟ್ ದೇಹ ಮತ್ತು ಆರೋಗ್ಯಕರ ಜೀವನಶೈಲಿಯಿಂದಲೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ಇವರ ಫಿಟ್ ಮೈಕಟ್ಟಿನ ಹಿಂದೆ ಯಾವುದೇ ಕಠಿಣ ಡಯಟ್‌ಗಳು ಇಲ್ಲ ಎಂಬುದು ಕುತೂಹಲಕರ ಸಂಗತಿ.
ಆರೋಗ್ಯ ತಜ್ಞರ ಸಲಹೆಯಂತೆ, ಕೊರಿಯನ್ ತಾರೆಗಳು ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ ಮತ್ತು ಶಿಸ್ತುಬದ್ಧ ಜೀವನಶೈಲಿ ಪಾಲನೆಗೆ ಹೆಚ್ಚು ಮಹತ್ವ ನೀಡುತ್ತಾರೆ.
– ಅವರು ಹೆಚ್ಚು ಕ್ಯಾಲೊರಿ ಇರುವ ಆಹಾರವನ್ನು ತಪ್ಪಿಸಿ, ಪ್ರೋಟೀನ್, ತರಕಾರಿ ಮತ್ತು ಸಿಹಿಗಡ್ಡೆ ತರಹದ ಆಹಾರ ಸೇವಿಸುತ್ತಾರೆ. ಕಡಿಮೆ ಕ್ಯಾಲೊರಿ ಆಹಾರವೇ ಅವರ ದೈನಂದಿನ ಆಯ್ಕೆಯಾಗಿರುತ್ತದೆ.
– ಅಧಿಕವಾಗಿ ರಾತ್ರಿ 7 ಗಂಟೆಯೊಳಗೆ ಊಟ ಮುಗಿಸುತ್ತಾರೆ. ಹಗುರವಾದ ಸಲಾಡ್, ಸೂಪ್ ಹಾಗೂ ಗ್ರಿಲ್ ಮಾಡಿದ ಪ್ರೋಟೀನ್ ಅವರ ಡಿನ್ನರ್‌ನಲ್ಲಿ ಕಾಣಸಿಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಕ.
– ಚಿಕನ್ ಬ್ರೆಸ್ಟ್, ಟೋಫು, ಮೊಟ್ಟೆ ಮೊದಲಾದ ಪ್ರೋಟೀನ್ ಆಹಾರ ಸೇವನೆ ಅವರಲ್ಲಿ ಸಾಮಾನ್ಯ. ಇದರಿಂದ ಶಕ್ತಿ ಹೆಚ್ಚಿ ಸ್ನಾಯುಗಳು ಕಾಪಾಡಿಕೊಳ್ಳಲ್ಪಡುತ್ತವೆ.
– ಹೆಚ್ಚಿನ ತಾರೆಗಳು 16:8 ಉಪವಾಸ ವಿಧಾನ ಪಾಲಿಸುತ್ತಾರೆ. 16 ಗಂಟೆ ಉಪವಾಸ, 8 ಗಂಟೆ ಅಂತರದಲ್ಲಿ ಆಹಾರ ಸೇವನೆ ಮೂಲಕ ದೇಹದಲ್ಲಿ ಕೊಬ್ಬು ಕರಗುವಂತೆ ನೋಡಿಕೊಳ್ಳುತ್ತಾರೆ.
– ಗಾಯನ ಹಾಗೂ ಅಭಿನಯ ರಿಹರ್ಸಲ್ ವೇಳೆ ಮಾಡುವ ನೃತ್ಯವೇ ಅವರಿಗೆ ಸಂಪೂರ್ಣ ದೇಹದ ವ್ಯಾಯಾಮ. ಇದರಿಂದ ಕೊಬ್ಬು ಕರಗಿ ಸ್ನಾಯು ಟೋನ್ ಆಗುತ್ತದೆ.
– ಸಕ್ಕರೆ ಮತ್ತು ಜಂಕ್ ಫುಡ್‌ಗೆ ದೂರ
– ಸ್ನ್ಯಾಕ್ಸ್ ಐಟೆಮ್ಸ್ ಹಾಗೂ ಸಕ್ಕರೆ ಪಾನೀಯಗಳಿಗೆ ಸಂಪೂರ್ಣವಾಗಿ ‘ನೋ’ ಹೇಳಿದ್ದಾರೆ. ಹಣ್ಣು, ತರಕಾರಿ, nuts ಗಳನ್ನು ಹೆಚ್ಚಾಗಿ ಸೇವಿಸುತ್ತಾರೆ.
– ವಾಕಿಂಗ್, ಯೋಗ, ವ್ಯಾಯಾಮ ಹಾಗೂ ಚೆನ್ನಾಗಿ ನಿದ್ದೆ, ಸರಿಯಾದ ಸಮಯಕ್ಕೆ ಊಟ ಇದನ್ನು ಕಡ್ಡಾಯವಾಗಿ ಪಾಲಿಸುತ್ತಾರೆ.
– ಹಸಿವಾಗದಿದ್ದರೆ ಊಟ ಮುಟ್ಟುವುದಿಲ್ಲ, ತಿಂಡಿಪೋತರಂತೆ ಸಿಕ್ಕಿದ್ದನ್ನು ಮುಕ್ಕುವುದಿಲ್ಲ, ಅದು ತಿನ್ನಬಾರದು, ಇದು ತಿನ್ನಬಾರದು ಎಂಬ ನಿಯಮವಿಲ್ಲ. ಬಾಯಿ ನೀರೂರಿದರೆ ಅದು ನಮ್ಮ ದೇಹಕ್ಕೆ ಬೇಕು ಎಂಬ ನಿಯಮ ಪಾಲಿಸುತ್ತಾರೆ.
– ಹಸಿರು ಚಹಾ, ಜೋಳದ ಚಹಾ ಹಾಗೂ ಹರ್ಬಲ್ ಟೀ ದೈನಂದಿನ ಪಾನೀಯಗಳಲ್ಲೇ ಸೇರಿವೆ. ಇವು ದೇಹವನ್ನು ಹೈಡ್ರೇಟ್ ಮಾಡಿ ವಿಷಕಾರಕಗಳನ್ನು ಹೊರಹಾಕುತ್ತವೆ.
– ಸೈಕ್ಲಿಂಗ್, ಜಾಗಿಂಗ್, ಜಂಪ್ ರೋಪ್‌ಗಳೊಂದಿಗೆ ವೇಟ್ ಲಿಫ್ಟಿಂಗ್ ಹಾಗೂ ಬಾಡಿವೇಟ್ ಎಕ್ಸರ್ಸೈಸ್ ಕೂಡ ಅವರ ದಿನಚರಿಯಲ್ಲಿ ಸೇರಿವೆ.
– ತಾತ್ಕಾಲಿಕ ಫಲಿತಾಂಶಗಳಿಗಿಂತ ದೀರ್ಘಕಾಲಿಕ ಆರೋಗ್ಯವೇ ಇವರ ಆದ್ಯತೆ. ಶಿಸ್ತು ಮತ್ತು ಸತತತೆಯೇ ಕೊರಿಯನ್ ತಾರೆಗಳ ಫಿಟ್ ಮೈಕಟ್ಟಿನ ನಿಜವಾದ ರಹಸ್ಯ.