ಮಂಗಳೂರು: ಕಳೆದ 20 ದಿನಗಳಿಂದ ದಿನ ಮಾಸ್ಕ್ ಹಾಕಿಕೊಂಡು ಪೊಲೀಸರ ಜೊತೆ ಬಂದು ಹೊಸ ಹೊಸ ಜಾಗ ತೋರಿಸುತ್ತಿದ್ದ ಮುಸುಕುದಾರಿ ಬಗ್ಗೆ ಎಲ್ಲರಲ್ಲೂ ಭಾರಿ ಕುತೂಹಲವನ್ನು ಕೆರಳಿಸಿತ್ತು. ಮುಸುಕುದಾರಿ ಮೊದಲು ಒಂದು ಬುರುಡೆ ತಂದು, ಪೊಲೀಸರಿಗೆ, ಕೋರ್ಟ್ ಗೆ ಕೊಟ್ಟಿದ್ದು, ಆದಾದ ಬಳಿಕ ಆತ ತೋರಿಸಿದ 15 ಜಾಗದಲ್ಲಿ ಅಗೆದರೂ ಆತ ಹೇಳಿದಂತೆ ನೂರಾರು ಶವಗಳ ಅಸ್ಥಿಪಂಜರಗಳು ಸಿಗಲಿಲ್ಲ. ಹೀಗಾಗಿ ಈತನ ಬಗ್ಗೆಯೇ ಎಸ್‌ಐಟಿ ಗೆ ಅನುಮಾನ ಶುರುವಾಗಿದೆ. ಹಾಗಾಗಿ ಈಗ ಎಸ್‌ಐಟಿ ಅಧಿಕಾರಿಗಳು ಆತ ಹೇಳಿದಂತೆ ನೂರಾರು ಶವಗಳು ಸಿಗದೇ ಇರೋದರಿಂದ ಮಾಸ್ಕ್ ಮ್ಯಾನ್ ನನ್ನೇ ಬಂಧಿಸಿದ್ದಾರೆ. ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯ ಅಲಿಯಾಸ್ ಚಿನ್ನನ ಈಗಿನ ಲೇಟೆಸ್ಟ್ ಪೋಟೋ ಕೂಡ ಬಿಡುಗಡೆಯಾಗಿದೆ.
ಈ ವ್ಯಕ್ತಿಯೇ ಮುಸುಕುದಾರಿ ಚಿನ್ನಯ್ಯ ಅಲಿಯಾಸ್ ಚೆನ್ನ
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇
ವಿಚಾರಣೆಯ ವೇಳೆ ಮುಸುಕುದಾರಿ, ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆಯೇ ಇದ್ದಾರೆ ಎಂದು ದೂರುದಾರ ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಈ ವೇಳೆ ಸತ್ಯದ ಅನಾವರಣವಾಗಿದೆ. ನನಗೆ ಈ ರೀತಿ ಹೇಳಲು ಹೇಳಿದ್ರು, ನಾನು ಈ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್‌ಗೆ ಒಪ್ಪಿಸಿ ಅಂದ್ರು, ನಾನು ಒಪ್ಪಿಸಿದೆ. ಕೋರ್ಟ್‌ಗೆ ಹಾಜರುಪಡಿಸಿದ ಬುರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ ಎಂದು ಮಾಸ್ಕ್ ಮ್ಯಾನ್ ಚೆನ್ನ ಹೇಳಿದ್ದಾನೆ.
ಇಂದು ಈ ಚಿನ್ನಯ್ಯನಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಬೆಳ್ತಂಗಡಿ ಕೋರ್ಟ್ ಗೆ ಎಸ್‌ಐಟಿ ಪೊಲೀಸ್ ಅಧಿಕಾರಿಗಳು ಹಾಜರುಪಡಿಸಿದ್ದಾರೆ. ಕೋರ್ಟ್ ನಲ್ಲಿ ಚಿನ್ನಯ್ಯನನ್ನು 10 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ಕೋರ್ಟ್ ಗೆ ಮನವಿ ಮಾಡಿದ್ದಾರೆ.