ಕಾರ್ಕಳ: ಸಾಣೂರು ಪೆಟ್ರೋಲ್ ಬಂಕ್ ಸಮೀಪದ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಪೆಟ್ರೋಲ್ ಸೋರಿಕೆಯಾಗಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ.
ಬಂಗ್ಲೆಗುಡ್ಡೆ ನಿವಾಸಿ ಅಯಾನ್, ಕಾರನ್ನು ಬೇರೊಬ್ಬ ವ್ಯಕ್ತಿಯಿಂದ ಖರೀದಿಸಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಮೂಡುಬಿದಿರೆ ಕಡೆಗೆ ಚಲಿಸುತ್ತಿದ್ದ ಕೆಎ ೦4 ಎಂ 1166 ಕಾರು ಘಟನೆಯಲ್ಲಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕದಳ ಠಾಣಾಧಿಕಾರಿ ಅಲ್ಬಟ್೯ ಮೋನಿಸ್, ಸಹಾಯಕಠಾಣಾಧಿಕಾರಿ ಚಂದ್ರಶೇಖರ್, ಸಹಾಯಕರಾದ ಅಚ್ಚುತ ಕರ್ಕೇರಾ, ದಿನೇಶ್ ಚಾಲಕ ಜಯಮೂಲ್ಯ ಪಾಲ್ಗೊಂಡರು.