ಆ.23ರಂದು ತಿರುವನಂತಪುರಂನ ತೈಕ್ಕಾಡಿನಲ್ಲಿ ́ಆನಂತಪುರಿ ಗಡಿನಾಡ ಕನ್ನಡ ಸಾಂಸ್ಕೃತಿ ಉತ್ಸವʼ

ಮಂಗಳೂರು: ಕೇರಳದ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ(ರಿ) ವತಿಯಿಂದ ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ಕೇರಳ ಸರ್ಕಾರದ ತಿರುವನಂತಪುರದ ಭಾರತ್ ಭವನ್ ಜಂಟಿ ಆಶ್ರಯದಲ್ಲಿ ಆಗಸ್ಟ್ 23 ರಂದು ಶನಿವಾರ ಬೆಳಗ್ಗೆ 9 ರಿಂದ ತಿರುವನಂತಪುರಂನ ತೈಕ್ಕಾಡಿನಲ್ಲಿರುವ ಭಾರತ್ ಭವನ ಸಭಾಂಗಣದಲ್ಲಿ ಆನಂತಪುರಿ ಗಡಿನಾಡ ಕನ್ನಡ ಸಾಂಸ್ಕೃತಿಕ ಉತ್ಸವ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಅಕಾಡೆಮಿ ಗೌರವಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ್‌ ಹೇಳಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಆನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 2025-ಆಗಸ್ಟ್ 23 ರಂದು ತಿರುವನಂತಪುರದಲ್ಲಿ ಆಧುನಿಕ ವೈಜ್ಞಾನಿಕ ಯುಗದಲ್ಲಿ ಜಗತ್ತು ಹತ್ತಿರವಾಗುತ್ತಿರುವಂತೆ ಸ್ಥಳೀಯ ಭಾಷೆ, ಸಂಸ್ಕೃತಿಗಳು ಜಾಗತೀಕರಣದ ಬಿರು ಬಿಸಿಲಿಗೆ ಇಮನ್ನಿಲ್ಲವಾಗುವ ಆತಂಕದ ಮಧ್ಯೆ ನಮ್ಮ ಮಣ್ಣಿನ ಸೊಗಡನ್ನು ಪರಸ್ಪರ ಹಂಚಿಕೊಳ್ಳುವ ವೇದಿಕೆಗಳಾಗಿ ಸಂಸ್ಕೃತಿ ಉತ್ಸವಗಳು ತನ್ನದೇ ಮಹತ್ವಿಕೆಯನ್ನು ಹೊಂದಿದೆ ಎಂಬುದು ನಿಸ್ಸಂಶಯ. ವೈವಿಧ್ಯಮಯವಾದ ಬಹುತ್ವದ ಭಾರತೀಯ ಸಂಸ್ಕೃತಿಯೊಳಗಿನ ಭಿನ್ನ-ಭಿನ್ನ ಪರಂಪರೆ, ಜೀವನ ಕ್ರಮ. ಸಂಸ್ಕೃತಿಗಳು ಒಟ್ಟಂದದಲ್ಲಿ ಒಂದೇ ಮೂಲದವುಗಳಾಗಿದ್ದು, ಅವು ಪರಸ್ಪರ ಬೆಸೆದುಕೊಂಡಿರುವುದು ಏಕ ಸ್ವರೂಪದ ಚಿಂತನೆ, ಬಹುರೂಪದಲ್ಲೂ ಏಕರೂಪದ ಸಾಂಸ್ಕೃತಿಕ ಹಿನ್ನೆಲೆಯಿಂದಲೇ ಬಂದಿದೆ ಎಂದು ಕಲ್ಕೂರ ಹೇಳಿದರು.

ಹಲವು ಸಮಸ್ಯೆಗಳ ನಿವಾರಣೆ:
ಗಡಿನಾಡ ಅಕಾಡೆಮಿ ಮೂಲಕ ಹಲವು ಸಮಸ್ಯೆಗಳ ಪರಿಹಾರ ಮಾಡಿದ್ದೇವೆ. ವಿಶೇಷವಾಗಿ ಕಾಸರಗೋಡಿನಿಂದ ಕನ್ಯಾಕುಮಾರಿಯವರೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳಿರಬಹುದು, ಅಭಿವೃದ್ಧಿ ಪ್ರಾಧಿಕಾರ ಸವಲತ್ತುಗಳಿರಬಹುದು, ಸರಕಾರಿ ಶಾಲೆಗಳು ಹಾಗೂ ಮೂಲಭೂತ ಸಮಸ್ಯೆಗಳು, ವಿದ್ಯಾರ್ಥಿವೇತನ ಸಮಸ್ಯೆಗಳನ್ನು ಸಾತ್ವಿಕ ಹೋರಾಟದ ಮೂಲಕ ಹಂತಹಂತವಾಗಿ ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ. ಕೇರಳ ಭಾಗದಲ್ಲಿ ನಮ್ಮವರಾದ ತುಳು, ಕನ್ನಡಿಗರ ದೊಡ್ಡ ಸಂಖ್ಯೆಯಲ್ಲಿದೆ. ನಮ್ಮ ಭಾಗ ಆಡಳಿತಾತ್ಮಕವಾಗಿ ಮೊದಲು ಮದ್ರಾಸ್‌ ಪ್ರಾಂತ್ಯದಲ್ಲಿತ್ತು.. ಹಾಗಾಗಿ ನಮ್ಮ ಹಾಗೂ ಕೇರಳದ ಮಧ್ಯೆ ಪ್ರತ್ಯೇಕತೆಯ ಸಮಸ್ಯೆಗಳು ಬರುವುದಿಲ್ಲ. ಅಲ್ಲಿಗೆ ಹೋದಾಗ ನಮಗೆ ಪರವೂರಿನಂತೆ ಅನುಭವವಾಗುವುದಿಲ್ಲ. ಇಡೀ ಕೇರಳ ಹಾಗೂ ತೌಳವ ಸಂಸ್ಕೃತಿಯನ್ನು ಒಳಗೊಂಡಂತೆಯೇ ಬದುಕುತ್ತಿದ್ದೇವೆ. ನಾವೆರಡು ಒಟ್ಟು ಸೇರಿದಾಗ ನಮ್ಮ ಸಂಸ್ಕೃತಿ ಒಂದೇ ತೆರನಾಗಿ ಅನಾವರಣಗೊಳ್ಳುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ದಕ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಗಡಿನಾಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ್, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯಕಟ್ಟೆ ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!