ಮಂಗಳೂರು: ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಮಂಗಳೂರು ವತಿಯಿಂದ ಇದೇ ಆಗಸ್ಟ್ 22 ರ ಶುಕ್ರವಾರ ಉರ್ವಾಸ್ಟೋರಿನ ಅಶೋಕ್‌ನಗರದ ವಿಶ್ವ ಶಾಂತಿ ಮಂದಿರಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಇದಕ್ಕೆ ಭಾರತ ರೆಡ್ ಕ್ರಾಸ್ ಸೊಸೈಟಿ ಸಹಯೋಗವಿದೆ ಎಂದು ಬ್ರಹ್ಮಕುಮಾರಿ ಬಿ.ಕೆ. ವಿಶ್ವೇಶ್ವರಿ ಹೇಳಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ರಕ್ತದಾನದ ಮಹತ್ವವನ್ನು ಒತ್ತಿ ಹೇಳಿ ಜನರಿಗೆ “ರಕ್ತದಾನ ಮಹಾದಾನ” ಎಂಬ ಸಂದೇಶವನ್ನು ಸಾರಲಿದ್ದೇವೆ. ದಾನ ಮಾಡಿದ ರಕ್ತವು ಅಪಘಾತ ಪೀಡಿತರು, ಗಂಭೀರವಾಗಿ ಅಸ್ವಸ್ಥರಾದವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ತುರ್ತು ಅವಶ್ಯಕತೆಯುಳ್ಳ ರೋಗಿಗಳಿಗೆ ಜೀವದಾನವಾಗುತ್ತದೆ. 18 ರಿಂದ 65 ವರ್ಷದೊಳಗಿನ, ಆರೋಗ್ಯದ ದೃಷ್ಟಿಯಿಂದ ಯೋಗ್ಯರಾಗಿರುವ ಪ್ರತಿಯೊಬ್ಬರಿಗೂ ಈ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ದಾನಿಗಳಿಗೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಶಿಬಿರ ಸ್ಥಳದಲ್ಲಿಯೇ ನಡೆಸಲಾಗುತ್ತದೆ. ಬ್ರಹ್ಮಕುಮಾರೀಸ್ ಸಂಸ್ಥೆ ಪ್ರತಿವರ್ಷವೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ಬಾರಿಯ ರಕ್ತದಾನ ಶಿಬಿರವು ಸಹ ಸಮುದಾಯ ಸೇವೆಯೊಂದಾಗಿ ಮಹತ್ವ ಪಡೆದುಕೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕುಮಾರಿ ಅಂಬಿಕಾ, ಸಂಯೋಜಕಿ ರೇವತಿ ಸನಿಲ್ ಉಪಸ್ಥಿತರಿದ್ದರು.