ದೆಹಲಿಯಲ್ಲಿ ಮತ್ತೆ 50 ಶಾಲೆಗಳಿಗೆ ಬಾಂಬ್ ಬೆದರಿಕೆ !

ನವದೆಹಲಿ: ರಾಷ್ಟ್ರ ರಾಜಧಾನಿಯ ಸುಮಾರು 50 ಶಾಲೆಗಳಿಗೆ ಇಂದು(ಆ.20) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸರು ಮತ್ತು ಇತರ ತುರ್ತು ಸಂಸ್ಥೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಸುಮಾರು 50 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವುಗಳಲ್ಲಿ ದ್ವಾರಕಾದ ರಾಹುಲ್ ಮಾಡೆಲ್ ಸ್ಕೂಲ್ ಮತ್ತು ಮ್ಯಾಕ್ಸ್‌ಫೋರ್ಟ್ ಸ್ಕೂಲ್, ಮಾಳವೀಯ ನಗರದ ಎಸ್‌ಕೆವಿ ಮತ್ತು ಪ್ರಸಾದ್ ನಗರದ ಆಂಧ್ರ ಸ್ಕೂಲ್ ಸೇರಿವೆ.

ದೆಹಲಿ ಅಗ್ನಿಶಾಮಕ ಸೇವೆಗಳ ಪ್ರಕಾರ, ಮಾಲ್ವಿಯಾ ನಗರದ ಎಸ್‌ಕೆವಿ ಮತ್ತು ಪ್ರಸಾದ್ ನಗರದ ಆಂಧ್ರ ಶಾಲೆಗೆ ಕ್ರಮವಾಗಿ ಬೆಳಿಗ್ಗೆ 7.40 ಮತ್ತು 7.42 ಕ್ಕೆ ಬಾಂಬ್ ಬೆದರಿಕೆಗಳ ಬಗ್ಗೆ ಮಾಹಿತಿ ಬಂದಿತ್ತು. ಪೊಲೀಸ್ ತಂಡಗಳು, ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ತಕ್ಷಣವೇ ಆವರಣಕ್ಕೆ ಧಾವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!