ಬಂಟ್ವಾಳ: ಕೇರಳದ ಪೋಲೀಸರಿಗೆ ಮೋಸ್ಟ್ ವಾಂಟೆಡ್ ಆರೋಪಿಯೋರ್ವನ ಕಾರು ಬಂಟ್ವಾಳದ ಮಂಚಿಯಲ್ಲಿ ಅಪಘಾತವಾಗಿದ್ದು, ಪೋಲೀಸರ ಸಮಯ ಪ್ರಜ್ಞೆಯಿಂದ ಈತನನ್ನು ಬಂಧಿಸಿದ್ದಾರೆ.
ಕೇರಳ ನಿವಾಸಿ ಮೊಹಮ್ಮದ್ ರಾಝಿಕ್ ಎಂಬಾತನ ಕಾರು ಮಂಚಿಯಲ್ಲಿ ಇನ್ನೊಂದು ಕೇರಳ ಮೂಲದ ಕಾರಿಗೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಈತನ ಜೊತೆ ಸ್ನೇಹಿತರಾದ ಸಿಬಿನ್, ಸಯ್ಯದ್ ಮಹಮ್ಮದ್ ಆಲ್ ಅಮೀನ್ ಎಂಬವರು ಕೂಡ ಕಾರಿನಲ್ಲಿದ್ದರು. ಕೇರಳ ರಾಜ್ಯದ ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ದಾಖಲಾದ ಆರೋಪಿಯಾಗಿರುವ ಈತ ಹಳೆಯ ಆರೋಪಿ ಕೂಡ ಆಗಿದ್ದ ಎನ್ನಲಾಗಿದೆ.
ಹಾಗಾಗಿ ಪೋಲೀಸರ ತಂಡ ಈತನ ಬಂಧನಕ್ಕೆ ಬಲೆ ಬೀಸಿತ್ತು. ಈತನ ಕಾರು ಬಂಟ್ವಾಳದ ಕಡೆ ಹೋಗುತ್ತಿರುವ ಖಚಿತ ಮಾಹಿತಿ ಪಡೆದ ಕೇರಳ ಪೋಲೀಸರ ತಂಡ ಈತನ ಬೆನ್ನ ಹಿಂದೆ ಬಿದ್ದಿದ್ದರು. ಪೋಲೀಸರ ಬೇಟೆಯ ವಿಚಾರ ತಿಳಿದ ಈತ ಅತಿಯಾದ ವೇಗದೊಂದಿಗೆ ಬಂದು ಮಂಚಿಯ ಮೋಂತಿಮಾರು ಎಂಬಲ್ಲಿ ಕೇರಳ ಮೂಲದ ಆಲ್ಟೊ ಕಾರೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದ.
ಪೋಲೀಸರು ತಮ್ಮ ಸಮಯ ಪ್ರಜ್ಞೆಯಿಂದ ಈತನನ್ನು ಬಂಧಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಬೇಟಿ ನೀಡಿದ್ದು, ಮಂಚಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.