ಶಿವಮೊಗ್ಗ: ನಗರದ ಸರ್ಕ್ಯೂಟ್ ಹೌಸ್ ಸರ್ಕಲ್‌ನಲ್ಲಿ ನಂದಿನಿ ಹಾಲಿನ ವಾಹನ ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾಗಿ ಭೀಕರ ಅಪಘಾತಕ್ಕೀಡಾಗಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು (ಆ.20) ಬೆಳಗಿನ ಜಾವ ನಡೆದಿದೆ.
ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಮೃತ ವಿದ್ಯಾರ್ಥಿಗಳು.
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇
ಅಪಘಾತದ ಪತಿಣಾಮ ಹಾಲಿನ ವಾಹನದಲ್ಲಿದ್ದ ಹಾಲಿನ ಕ್ರೇಟ್‌ಗಳೆಲ್ಲ ಕೆಳಗೆ ಬಿದ್ದು ಪ್ಯಾಕೆಟ್‌ಗಳು ಒಡೆದು ಹಾಲು ರಸ್ತೆಯ ಮೇಲೆ ಹರಿದಿದೆ.
ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.