350 ಗ್ರಾಂ ಶುದ್ಧ ಬಂಗಾರ ದೋಚಿದ ನಕಲಿ ಕಸ್ಟಮ್‌ ಅಧಿಕಾರಿಗಳು ವಶಕ್ಕೆ

ಮಂಗಳೂರು: ಕಸ್ಟಮ್ ಅಧಿಕಾರಿಗಳ ಸೋಗಿನಲ್ಲಿ ಬಂದು ವ್ಯಕ್ತಿಯನ್ನು ಹೆದರಿಸಿ 35 ಲಕ್ಷ ರೂ. ಮೌಲ್ಯದ 350 ಗ್ರಾಂ ಶುದ್ಧ ಬಂಗಾರದ ಗಟ್ಟಿಯನ್ನು ದರೋಡೆಗೈದಿದ್ದ ಒಟ್ಟು ಐವರು ಆರೋಪಿಗಳನ್ನು ಆ.18 ರಂದು ಸಂಜೆ ಮಹಾರಾಷ್ಟ್ರದ ಪುಣೆ ಎಂಬಲ್ಲಿ ಮಂಗಳೂರು ಪೊಲೀಸರು ಪತ್ತೆ ಮಾಡಿ, ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ: ಇದೇ ಆಗಸ್ಟ್‌ 13ರಂದು ಬೆಳಿಗ್ಗೆ 7-00 ಗಂಟೆಗೆ ಶ್ರೀಹರಿ ಭಾನುದಾಸ ಥೋರಟ ಎಂಬವರು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಹತ್ತಿರದ ಕೈರಾಲಿ ಹೋಟೆಲ್ ಸಮೀಪ ಆಟೋ ಕಾಯುತ್ತಿದ್ದರು. ಆಗ ಯಾರೋ ಆರು ಜನ ಅಪರಿತರು ಇನ್ನೋವಾ ಕಾರಿನಲ್ಲಿ ಬಂದು ದೂರುದಾರಾದ ಶ್ರೀಹರಿ ಭಾನುದಾಸ ಥೋರಟರನ್ನು ಸಂಪರ್ಕಿಸಿ ತಾವು ಕಸ್ಟಮ್ ಅಧಿಕಾರಿಗಳು, ನಿಮ್ಮ ವಿರುದ್ದ ಮಾಹಿತಿ ಇದೆ, ವಿಚಾರಣೆ ಮಾಡಬೇಕು ಎಂದು ತಿಳಿದ್ದಾರೆ. ಗದರಿಸಿ ತಮ್ಮೊಂದಿಗೆ ಬನ್ನಿ ಶ್ರೀಹರಿಯರನ್ನು ಹಿಡಿದುಕೊಂಡು ಬಲವಂತವಾಗಿ ಬಿಳಿ ಬಣ್ಣದ ಇನ್ನೋವಾ ಕಾರಿನಲ್ಲಿ ಕೂರಿಸಿಕೊಂಡು ಉಡುಪಿ ಹೈವೇ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಲುಪಿದ್ದಾರೆ. ಅಲ್ಲದೆ ಶ್ರೀಹರಿ ಬಳಿ ಇದ್ದ ಸುಮಾರು 35,00,000 ರೂಪಾಯಿ ಬೆಲೆ ಬಾಳುವ 350 ಗ್ರಾಂ ತೂಕದ ಶುದ್ಧ ಬಂಗಾರದ ಗಟ್ಟಿಯನ್ನು ಹೆದರಿಸಿ ಕಿತ್ತುಕೊಂಡು ದರೋಡೆ ಮಾಡಿ, ಶ್ರೀಹರಿ ಭಾನುದಾಸ ಥೋರಟ ಕುಮಟಾ ತಾಲೂಕಿನ ಶಿರಸಿ ಬಳಿ ಅಂತ್ರವಳ್ಳಿ ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದರು.

ಈ ಬಗ್ಗೆ ಫಿರ್ಯಾದಿಯವರು ಕುಮುಟಾ ಠಾಣೆಯಲ್ಲಿ ದೂರು ನೀಡಿದಾಗ ಝೀರೋ ಎಫ್.ಐ.ಆರ್ ರಡಿಯಲ್ಲಿ ಪ್ರಕರಣ ದಾಖಲಿಸಿ ಸರಹದ್ದಿನ ಆಧಾರದ ಮೇಲೆ ಮುಂದಿನ ಕ್ರಮದ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ಇಲ್ಲಿ ಠಾಣೆಯಲ್ಲಿ ಅ.ಕ್ರ 171/2025 ಕಲಂ 310(2), 137(2), 204 ಬಿ.ಎನ್. ಎಸ್ ನಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಭೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಆಯುಕ್ತರು, ಸಿಸಿಬಿ ಅಧಿಕಾರಿ ಮತ್ತು ಕೇಂದ್ರ ಉಪವಿಭಾಗದಿಂದ ತಂಡವನ್ನು ರಚಿಸಿದ್ದರು. ಪ್ರಕರಣದ ತನಿಖೆಯಲ್ಲಿ ಕಂಡ ಬಂದ ತಾಂತ್ರಿಕ ಸಾಕ್ಷ್ಯಾಧಾರಗಳಿಂದ ಮತ್ತು ಇತರೆ ಮಾಹಿತಿಗಳಿಂದ ಈವರೆಗೆ ಒಟ್ಟು 5 ಜನ ಆರೋಪಿಗಳನ್ನು ದಿನಾಂಕ 18-08-2025 ರಂದು ಸಂಜೆ ಮಹಾರಾಷ್ಟ್ರದ ಪುಣೆ ಎಂಬಲ್ಲಿ ಪತ್ತೆ ಮಾಡಲಾಗಿದೆ. ಆರೋಪಿಗಳು ವಿಚಾರಣಾ ಕಾಲದಲ್ಲಿ ತಪ್ಪೋಪ್ಪಿಗೆ ಮಾಡಿದ್ದು ದೊಚ್ಚಿದ್ದ ಚಿನ್ನವನ್ನು ಮಾರಾಟ ಮಾಡಿದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಮುಂದೆ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಕೈಗೊಳ್ಳಲಾಗುವುದು. ದರೋಡೆ ಮಾಡಿದ್ದ ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ಸ್ವಾಧೀನ ಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!