ಎಂ.ಸಿಸಿ. ಬ್ಯಾಂಕಿನ ಕುಲಶೇಖರ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮತ್ತು 11ನೇ ಎಟಿಎಮ್ ಉದ್ಘಾಟನೆ !

ಮಂಗಳೂರು:ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ಆಗಸ್ಟ್ 17 ರಂದು ಮಂಗಳೂರಿನ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬಿಸಿನೆಸ್ ಸೆಂಟರ್‌ನ ಕೆಳ ಮಹಡಿಯಲ್ಲಿರುವ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸಲಾಯಿತು. ಹೊಸ ಕಛೇರಿಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಮಂಗಳೂರಿನ ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಶ್ರೈನ್‌ನ ನಿರ್ದೇಶಕ ವಂದನೀಯ ಸ್ಟಿಫನ್ ಪಿರೇರಾ, ಒಸಿಡಿ ಅವರು ದೀಪ ಬೆಳಗಿಸುವ ಮೂಲಕ ಪ್ರಾರಂಬಿಸಿದರ. ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರುಗಳಾದ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಹೊಸ ಕಛೇರಿಯನ್ನು ಆಶೀರ್ವದಿಸಿದರು.

ಸೇಫ್ ರೂಮ್ ಅನ್ನು ಮುಖ್ಯ ಅತಿಥಿ, ಸಿಸ್ಟರ್ಸ್ ಆಫ್ ದಿ ಲಿಟಲ್ ಫ್ಲವರ್ ಆಫ್ ಬೆಥನಿಯ ಪ್ರೊಕ್ಯುರೇಟರ್ ಸಿ. ಫ್ಲೋಸಿ ಮಿÄನೆಜಸ್ ಉದ್ಘಾಟಿಸಿದರು. ಎಟಿಎಂ ಸೌಲಭ್ಯವನ್ನು ಮಂಗಳೂರಿನ ವೈಟ್ ಡವ್ಸ್ನ ಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ಕೊರಿನ್ ರಸ್ಕ್ವಿನ್ಹಾ ಉದ್ಘಾಟಿಸಿದರು. ಮೊದಲ ಎಟಿಎಂ ನಗದು ಹಿಂಪಡೆಯುವಿಕೆಯನ್ನು ಮಂಗಳೂರಿನ ಪ್ರಸಾದ್ ಪ್ರಿಂಟರ್ಸ್ನ ಮಾಲೀಕ ಶ್ರೀ ಪ್ರವೀಣ್ ಪತ್ರಾವೊ ನೆರವೆರಿಸಿದರು.

ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಕಳೆದ 31 ವರ್ಷಗಳಲ್ಲಿ ಗ್ರಾಹಕರು ನೀಡಿದ ಅಚಲ ಬೆಂಬಲ ಮತ್ತು ಸಹಕಾರಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು. 113 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಬ್ಯಾಂಕ್ ಅನ್ನು ಬೆಂಬಲಿಸುವುದನ್ನು ಮುಂದುವರಿಸಲು ಅವರು ಕರೆ ನೀಡಿದರು, ಇದರಿಂದಾಗಿ ಬ್ಯಾಂಕಿನ ಪ್ರಗತಿಯೊಂದಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶ್ರೀ ವ್ಯಾಲೆಂಟೈನ್ ಡಿ’ಸಿಲ್ವಾ ಅವರ ದೂರದೃಷ್ಟಿಯ ನಾಯಕತ್ವಕ್ಕಾಗಿ ಮತ್ತು 1994ರಲ್ಲಿ ಕುಲಶೇಖರ ಶಾಖೆಯನ್ನು ಪರಿಚಯಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಸದಸ್ಯರು, ಗ್ರಾಹಕರು ಮತ್ತು ನಿರ್ದೇಶಕರ ಮಂಡಳಿಯ ಬೆಂಬಲ, ವಿಶ್ವಾಸ ಹಾಗೂ ಸಿಬ್ಬಂದಿಯ ಕಠಿಣ ಪರಿಶ್ರಮವು ಬ್ಯಾಂಕನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಅನುವು ಮಾಡಿಕೊಟ್ಟಿದೆ ಎಂದು ಅವರು ಒತ್ತಿ ಹೇಳಿದರು. ಸಮಾಜದ ಬಗ್ಗೆ ತನ್ನ ಜವಾಬ್ದಾರಿಯನ್ನು ಗುರುತಿಸುವ ಕಾರಣ ಬ್ಯಾಂಕ್ ವಿವಿಧ ಸಾರ್ವಜನಿಕ ಮತ್ತು ದತ್ತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದರು. ಬ್ಯಾಂಕಿನ ಭವಿಷ್ಯದ ಯೋಜನೆಗಳನ್ನು ವಿವರಿಸುತ್ತಾ, ಸಂತೆಕಟ್ಟೆ ಮತ್ತು ದೇರಲಕಟ್ಟೆಯಲ್ಲಿ ಹೊಸ ಶಾಖೆಗಳೊಂದಿಗೆ ಪ್ರಸ್ತಾವಿತ ವಿಸ್ತರಣೆಯನ್ನು ಘೋಷಿಸಿದರು ಮತ್ತು ಗ್ರಾಹಕರಿಂದ ನಿರಂತರ ಬೆಂಬಲ ಮತ್ತು ಸಹಕಾರವನ್ನು ಕೋರಿದರು.

ವಂದನೀಯ ಸ್ಟಿಫನ್ ಪಿರೇರಾ ಅವರು ತಮ್ಮ ಭಾಷಣದಲ್ಲಿ, ಶಾಖೆಯನ್ನು ಗ್ರಾಹಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾದ ಹೊಸ ಸ್ಥಳಕ್ಕೆ ಸ್ಥಳಾಂತರಿಸಿದ್ದಕ್ಕಾಗಿ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಎಲ್ಲಾ ಗ್ರಾಹಕರನ್ನು ಅಭಿನಂದಿಸಿದರು. ಬ್ಯಾಂಕ್ ರೂ.1300 ಕೋಟಿ ವಹಿವಾಟು ದಾಟಿದೆ ಮತ್ತು ಗ್ರಾಹಕ ಸೇವೆಯನ್ನು ಆಧುನಿಕ ತಂತ್ರಜ್ಞಾನದೊAದಿಗೆ ಬೆರೆಸುವ ಮೂಲಕ ತನ್ನ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ ಎಂದು ಅವರು ಎತ್ತಿ ತೋರಿಸಿದರು. ಕುಲಶೇಖರ ಶಾಖೆಗೆ ಯಶಸ್ಸನ್ನು ಹಾರೈಸಿದರು ಮತ್ತು ಬ್ಯಾಂಕಿAಗ್‌ನ ಎಲ್ಲಾ ಅಂಶಗಳಲ್ಲಿಯೂ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು. ಎಂಸಿಸಿ ಬ್ಯಾಂಕ್ ಕೇವಲ ಹಣಕಾಸು ಸಂಸ್ಥೆಯಲ್ಲ, ಆದರೆ ಅತ್ಯುತ್ತಮ ಗ್ರಾಹಕ ಸೇವೆಯನ್ನು ನೀಡುವಲ್ಲಿ ಮತ್ತು ಸಾಧಿಸುವಲ್ಲಿ ಆಧುನೀಕರಣ, ಬದ್ಧತೆ ಮತ್ತು ಸೃಜನಶೀಲತೆಯ ಸಂಕೇತವಾಗಿದೆ ಎಂದು ಅವರು ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್, ಶಿಸ್ತು, ಸಕಾರಾತ್ಮಕ ಮನಸ್ಥಿತಿ, ಕಠಿಣ ಪರಿಶ್ರಮ ಮತ್ತು ಸೃಜನಶೀಲತೆಯ ತತ್ವಗಳು ಯಾವಾಗಲೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ ಎಂದು ಒತ್ತಿ ಹೇಳಿದರು. ಯುವಕರು ಶ್ರದ್ಧೆಯಿಂದ ಕೆಲಸ ಮಾಡಲು, ಎಂಸಿಸಿ ಬ್ಯಾಂಕಿನ ಬೆಂಬಲದೊಂದಿಗೆ ಸ್ಟಾರ್ಟ್-ಅಪ್‌ಗಳನ್ನು ಅನ್ವೇಷಿಸಲು ಮತ್ತು ಒಂದೇ ಆದಾಯದ ಮೂಲವನ್ನು ಅವಲಂಬಿಸದಿರಲು ಅವರು ಪ್ರೋತ್ಸಾಹಿಸಿದರು.

ಶ್ರೀ ವ್ಯಾಲೆಂಟೈನ್ ಡಿ’ಸಿಲ್ವಾ ಅವರು ತಮ್ಮ ಭಾಷಣದಲ್ಲಿ, ಕುಲಶೇಖರ ಶಾಖೆಯನ್ನು ಗ್ರಾಹಕ ಸ್ನೇಹಿ ವಾತಾವರಣಕ್ಕೆ ಬದಲಾಯಿಸಿದ್ದಕ್ಕಾಗಿ ಬ್ಯಾಂಕ್ ಅನ್ನು ಅಭಿನಂದಿಸಿದರು. ಕುಲಶೇಖರದಲ್ಲಿ ಶಾಖೆಯನ್ನು ಸ್ಥಾಪಿಸುವಲ್ಲಿ ಅವರ ಪ್ರಯತ್ನಗಳನ್ನು ಅವರು ನೆನಪಿಸಿದರು ಅವರ ಅಧಿಕಾರಾವಧಿಯಲ್ಲಿ ನೇಮಕಗೊಂಡ ಹಲವಾರು ಸಿಬ್ಬಂದಿ ಈಗ ಎಂಸಿಸಿ ಬ್ಯಾಂಕಿನಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊರವರ ನೇತ್ರತ್ವದಲ್ಲಿ ಆದ ಬ್ಯಾಂಕಿನ ಉನ್ನತ ಪ್ರಗತಿಯನ್ನು ಕೊಂಡಾಡಿ ಶುಭ ಹಾರೈಸಿದದರು.

ಈ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಸರ್ಕಾರಿ ವಕೀಲರಾಗಿ ನೇಮಕಗೊಂಡಿದ್ದಕ್ಕಾಗಿ ಶ್ರೀ ಎಂ.ಪಿ. ನೊರೊನ್ಹಾ ಅವರನ್ನು ಸನ್ಮಾನಿಸಲಾಯಿತು. ಆಧುನಿಕ ತಂತ್ರಜ್ಞಾನ ಮತ್ತು ಅತ್ಯುತ್ತಮ ಗ್ರಾಹಕ ಸೇವೆಯೊಂದಿಗೆ ಬ್ಯಾಂಕಿನ ಶಾಖೆಯನ್ನು ಪರಿವರ್ತಿಸಿದ್ದಕ್ಕಾಗಿ ಅವರು ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ವಿಕಸಿಸುತ್ತಿರುವ ಬ್ಯಾಂಕಿAಗ್ ಉದ್ಯಮದಲ್ಲಿ ಸಿಬ್ಬಂದಿ ಆತ್ಮವಿಶ್ವಾಸ ಮತ್ತು ಭವಿಷ್ಯಕ್ಕೆ ಸಿದ್ಧರಾಗಿರಬೇಕೆಂದು ಅವರು ಒತ್ತಾಯಿಸಿದರು.

ಆಚರಣೆಯ ಭಾಗವಾಗಿ, ಶಿಕ್ಷಣದಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು. ಸಮಾಜ ಸೇವಾ ಸಂಸ್ಥೆಗಳಾದ ಅವ್ ಮಾರಿಯಾ ಪ್ಯಾಲಿಯೇಟಿವ್ ಕೇರ್, ಸಾನಿಧ್ಯ, ವೈಟ್ ಡವ್ಸ್ ಮತ್ತು ರಿಯಾ ಫೌಂಡೇಶನ್‌ಗೆ ಬ್ಯಾಂಕಿನ ದತ್ತಿ ನಿಧಿಯಿಂದ ತಲಾ ರೂ.50,000/- ಚೆಕ್ ನೀಡಿ ಸನ್ಮಾನಿಸಲಾಯಿತು. ಯುವ ಸಾಧಕರಾದ ಶ್ರೀಮತಿ ವೆನ್ಸಿಟಾ ಡಯಾಸ್, ಶ್ರೀ ವಿ.ಜೆ. ಡಿಕ್ಸನ್, ಶ್ರೀಮತಿ ಸಪ್ನಾ ಕ್ರಾಸ್ತಾ ಮತ್ತು ಶ್ರೀಮತಿ ಸೋನಾಲ್ ಮಾಂತೆರೊ ಅವರನ್ನು ಹಾಗೂ ರ‍್ಯಾಂಕ್ ಪಡೆದ ಗ್ರಾಹಕರ ಮಕ್ಕಳನ್ನು ಹಾಗೂ ಹಳೆಯ ಕಟ್ಟಡದ ಮಾಲೀಕರಾದ ಶ್ರೀ ಫ್ರಾನ್ಸಿಸ್ ಕುಟಿನ್ಹೋ, ಹೊಸ ಆವರಣದ ನಿರ್ಮಾಣಕಾರ ಶ್ರೀ ಅವಲಾನ್ ಪತ್ರಾವೊ, ಶ್ರೀ ಅಜಿತ್ ಕುಮಾರ್, ಮತ್ತು ಅರ್ಕಿಟೆಕ್ಟ್ ಶ್ರೀ ದೀಪಕ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಸರ್ಕಾರಿ ವಕೀಲ ಮತ್ತು ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶ್ರೀ ಎಂ.ಪಿ. ನೊರೊನ್ಹಾ, ಎಂಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶ್ರೀ ವ್ಯಾಲೆಂಟೈನ್ ಡಿಸಿಲ್ವಾ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಐಡಿಯಲ್ ಚಿಕನ್) ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿನ್ಸೆಂಟ್ ಕುಟಿನ್ಹಾ, ಹೋಲಿ ಕ್ರಾಸ್ ಚಚ್ ಕೊರ್ಡೆಲ್‌ನ ಪ್ಯಾರಿಶ್ ಕೌನ್ಸಿಲ್ ಉಪಾಧ್ಯಕ್ಷರಾದ ಶ್ರೀಮತಿ ರುತ್ ಕ್ಯಾಸ್ಟೆಲಿನೊ, ಅವರು ಗೌರವಾನ್ವಿತ ಅತಿಥಿಗಳಾಗಿದ್ದರು, ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್, ಶಾಖಾ ವ್ಯವಸ್ಥಾಪಕಿ ಶ್ರೀಮತಿ ವಿಲ್ಮಾ ಜ್ಯೋತಿ ಸಿಕ್ವೇರಾ ವೇದಿಕೆಯಲ್ಲಿ ಹಾಜರಿದ್ದರು.

ನಿರ್ದೇಶಕರಾದ ಶ್ರೀ ಎಲ್ರಾಯ್ ಕಿರಣ್ ಕ್ರಾಸ್ಟೊ, ಶ್ರೀ ಜೋಸೆಫ್ ಅನಿಲ್ ಪತ್ರಾವೊ, ಶ್ರೀ ಜೆ.ಪಿ. ರೋಡ್ರಿಗಸ್, ಶ್ರೀ ರೋಶನ್ ಡಿಸೋಜಾ, ಶ್ರೀ ಹೆರಾಲ್ಡ್ ಜಾನ್ ಮೊಂತೆರೊ, ಶ್ರೀ ಡೇವಿಡ್ ಡಿಸೋಜಾ, ಶ್ರೀ ಮೆಲ್ವಿನ್ ವಾಸ್, ಶ್ರೀ ಸುಶಾಂತ್ ಸಲ್ಡಾನಾ, ಶ್ರೀ ಫೆಲಿಕ್ಸ್ ಡಿಕ್ರೂಜ್, ಶ್ರೀ ಸಿ.ಜಿ.ಪಿಂಟೊ, ಶ್ರೀಮತಿ ಶರ್ಮಿಳಾ ಮೆನೆಜಸ್, ಶ್ರೀ ಆಲ್ವಿನ್ ಪಿ. ಮೊಂತೆರೊ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಆಲ್ವಿನ್ ಡಿಸೋಜಾ ಮತ್ತು ತಂಡದ ನೇತೃತ್ವದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಖಾ ನಿರ್ದೇಶಕಿ ಶ್ರೀಮತಿ ಐರೀನ್ ರೆಬೆಲ್ಲೊ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕಿ ಶ್ರೀಮತಿ ವಿಲ್ಮಾ ಜ್ಯೋತಿ ಸಿಕ್ವೇರಾ ಧನ್ಯವಾದ ಅರ್ಪಿಸಿದರು ಮತ್ತು ಶ್ರೀ ಅಲೋಶಿಯಸ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!