ನವದೆಹಲಿ: 2030 ರ ಕಾಮನ್ ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಲು ಭಾರತ ಬಿಡ್ ಸಲ್ಲಿಸುವುದಕ್ಕೆ ಭಾರತೀಯ ಒಲಿಂಪಿಕ್ ಸಂಸ್ಥೆ (IOA) ವಿಶೇಷ ಸಾಮಾನ್ಯ ಸಭೆಯಲ್ಲಿ ಬುಧವಾರ ಒಪ್ಪಿಗೆ ನೀಡಲಾಗಿದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ 20230ರ ಕಾಮನ್ ವೆಲ್ತ್ ಕ್ರೀಡಾಕೂಟ ಆಯೋಜನೆಗೆ ಉತ್ಸುಕವಾಗಿರುವುದಾಗಿ ಭಾರತ ಈಗಾಗಲೇ ಅರ್ಜಿ ಸಲ್ಲಿಸಿದೆ. ಆದರೆ ಆಗಸ್ಟ್ 31 ರೊಳಗೆ ಅಂತಿಮ ಬಿಡ್ ಗೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ.
ಭಾರತವು 2010ರಲ್ಲಿ ದೆಹಲಿಯಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಿತ್ತು. ಕ್ರೀಡಾಕೂಟ ಆಯೋಜಿಸಲು ಆರಂಭದಲ್ಲಿ ಆಸಕ್ತಿ ತೋರಿದ್ದ ಕೆನಡಾ ಈಗಾಗಲೇ ಬಿಡ್ ನಿಂದ ಹಿಂದೆ ಸರಿದಿದ್ದು, ಭಾರತಕ್ಕೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಅಧಿಕಾರಿಗಳ ನಿಯೋಗ ಇತ್ತೀಚಿಗೆ ಅಹಮದಾಬಾದ್ ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತ್ತು. ಆತಿಥೇಯ ದೇಶ ಯಾವುದೇ ಎಂಬುದು ಇದೇ ವರ್ಷದ ನವೆಂಬರ್ ಕೊನೆ ವಾರದಲ್ಲಿ ಅಂತಿಮ ವಾರದಲ್ಲಿ ನಿರ್ಧಾರವಾಗಲಿದೆ.