ಲ್ಯಾಪ್ರೋಸ್ಕೋಪಿಕ್ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಉತ್ಕೃಷ್ಟಗೊಳಿಸುವ ತರಬೇತಿ ಕಾರ್ಯಕ್ಕೆ ಕೈಜೋಡಿಸಿದ ಮೆಡ್ಟ್ರಾನಿಕ್ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು

ಮಂಗಳೂರು: ಮೆಡ್ಟ್ರಾನಿಕ್ ಸಂಸ್ಥೆಯು ಭಾರತದಲ್ಲಿ ಹೊಸ ಸರ್ಜನ್ ಗಳಿಗೆ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮತ್ತು ವೃತ್ತಿಪರ ಸರ್ಜನ್ ಗಳಿಗೆ ಲ್ಯಾಪ್ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಉತ್ಕೃಷ್ಟ ಮಟ್ಟದಲ್ಲಿ ನಡೆಸುವುದು ಹೇಗೆ ಎಂಬ ರಚನಾತ್ಮಕ ತರಬೇತಿ ಒದಗಿಸುವ ಉದ್ದೇಶದಿಂದ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ (ಎಫ್ಎಂಸಿಸಿ) ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಲ್ಯಾಪ್ರೋಸ್ಕೋಪಿಕ್ ಹರ್ನಿಯಾ ಶಸ್ತ್ರಚಿಕಿತ್ಸೆ ಕುರಿತಾದ ಪ್ರಾಯೋಗಿಕ ಅನುಭವ ಪಡೆಯುವುದರ ಜೊತೆಗೆ ಶಾರೀರಿಕ ಮತ್ತು ಕಾರ್ಯವಿಧಾನದ ಅಂಶಗಳ ಬಗ್ಗೆ ಆಳವಾದ ತಿಳುವಳಿಕೆಯುಳ್ಳ ಸಮಗ್ರ ತರಬೇತಿ ಪಡೆಯಲಿದ್ದಾರೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಫಾದರ್ ಮುಲ್ಲರ್ ಕಾಲೇಜಿನ ಪರಿಣತ ಉಪನ್ಯಾಸಕರ ಮೇಲ್ವಿಚಾರಣೆಯಯಲ್ಲಿ ಮಾರ್ಗದರ್ಶನದ ಕಾರ್ಯವಿಧಾನಗಳನ್ನು ಕಲಿಯುವುದರಿಂದ ಹಿಡಿದು ತಮ್ಮ ಸಂಸ್ಥೆಗಳಲ್ಲಿ ಸ್ವತಂತ್ರವಾಗಿ ಶಸ್ತ್ರಚಿಕಿತ್ಸೆ ನಡೆಸುವವರೆಗೆ ಬೆಳವಣಿಗೆ ಸಾಧಿಸಲಿದ್ದಾರೆ.

ಈ ಕುರಿತು ಮಾತನಾಡಿದ ಮೆಡ್ಟ್ರಾನಿಕ್ ಇಂಡಿಯಾದ ಮೆಡಿಕಲ್ ಸರ್ಜಿಕಲ್ ವಿಭಾಗದ ಹಿರಿಯ ನಿರ್ದೇಶಕ ಅಭಿಷೇಕ್ ಭಾರ್ಗವ ಅವರು, “ವೈದ್ಯಕೀಯ ಕ್ಷೇತ್ರದಲ್ಲಿನ ನಿಜವಾದ ಆವಿಷ್ಕಾರ ಎಂದರೆ ತಾಂತ್ರಿಕ ಪ್ರಗತಿಯಷ್ಟೇ ಅಲ್ಲ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರನ್ನು ಸಬಲೀಕರಣ ಮಾಡುವುದು ಎಂಬುದು ಮೆಡ್ಟ್ರಾನಿಕ್ ಸಂಸ್ಥೆಯ ನಂಬಿಕೆಯಾಗಿದೆ. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯು ನಮ್ಮ ವೈದ್ಯಕೀಯ ಸೇವೆಯನ್ನು ಬದಲಿಸುವ ಮತ್ತು ರೋಗಿಗಳಿಗೆ ಅತ್ಯುತ್ತ ಫಲಿತಾಂಶ ನೀಡುವಲ್ಲಿ ಬಹಳ ಮಹತ್ವದ್ದಾಗಿದೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಜೊತೆಗಿನ ನಮ್ಮ ಸಹಭಾಗಿತ್ವವು ನಿರಂತರ ಕಲಿಕೆ ಮತ್ತು ಸಾಮರ್ಥ್ಯ ಹೆಚ್ಚಿಸುವ ಕ್ರಮಗಳ ಮೂಲಕ ಶಸ್ತ್ರಚಿಕಿತ್ಸಾ ವಿಭಾಗವನ್ನು ಉತ್ಕೃಷ್ಟಗೊಳಿಸುವ ಈ ಎರಡೂ ಸಂಸ್ಥೆಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವೈದ್ಯಕೀಯ ಕ್ಷೇತ್ರವನ್ನು ಉನ್ನತೀಕರಿಸುವುದು ಮತ್ತು ಸಮಾಜಕ್ಕೆ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದ್ದಾರೆ.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ರೆವ್ ಫಾದರ್ ಫೌಸ್ಟಿನ್ ಎಲ್ ಲೋಬೊ ಅವರು ಮಾತನಾಡಿ, “ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನಾವು ವೈದ್ಯಕೀಯ ಶಿಕ್ಷಣಕ್ಕೆ ಮಾತ್ರವೇ ಒತ್ತು ನೀಡುತ್ತಿಲ್ಲ, ಬದಲಿಗೆ ಅತ್ಯುತ್ತಮ, ಶ್ರೇಷ್ಠ ವೈದ್ಯಕೀಯ ಸೇವೆಯನ್ನು ಒದಗಿಸಲು ಬದ್ಧರಾಗಿದ್ದೇವೆ. ಮೆಡ್ಟ್ರಾನಿಕ್ಜೊತೆಗಿನ ಈ ಸಹಭಾಗಿತ್ವವು ಶಸ್ತ್ರಚಿಕಿತ್ಸಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಮತ್ತು ಜ್ಞಾನ ಹಂಚುವ ವಿಚಾರದಲ್ಲಿ ಬಹಳ ಮಹತ್ವದ ಹೆಜ್ಜೆಯಾಗಿದೆ. ನಮ್ಮ ಪರಿಣತ ಉಪನ್ಯಾಸಕರ ತಂಡ ಮತ್ತು ಮೂಲಸೌಕರ್ಯ ಹಾಗೂ ಮೆಡ್ಟ್ರಾನಿಕ್ ಸಂಸ್ಥೆಯ ತಾಂತ್ರಿಕ ಪರಿಣತಿ ಎರಡೂ ಜೊತೆಗೂಡಿ ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ ಸಮಗ್ರ ಕಲಿಕಾ ಅನುಭವ ಒದಗಿಸಲಿದೆ. ಈ ಕಲಿಕೆಯಿಂದ ರೋಗಿಗಳಿಗೆ ಅತ್ಯುತ್ಕೃಷ್ಟ ಶಸ್ತ್ರಚಿಕಿತ್ಸಾ ಸೌಲಭ್ಯ ದೊರೆಯುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ” ಎಂದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

Father Muller Medical College Hospital Mangalorewww.fathermuller.edu.in#:#https://www.fathermuller.edu.in/medical-college/

 

error: Content is protected !!