ತುಳು ಪರಿಷತ್ ಮಂಗಳೂರು ವತಿಯಿಂದ ಆಟಿದ ಕೂಟ !

ಮಂಗಳೂರು: ತುಳು ಪರಿಷತ್ ಮಂಗಳೂರು ವತಿಯಿಂದ ಶಕ್ತಿನಗರದಲ್ಲಿ ಆಟಿದ ಕೂಟ ಕಾರ್ಯಕ್ರಮ ನಡೆಯಿತು.

ಗೋವಿಂದ ದಾಸ್ ಪದವಿ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಕೃಷ್ಣಮೂರ್ತಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತುಳು ಭಾಷೆ ಮತ್ತು ತುಳು ಸಂಸ್ಕೃತಿ ಹಾಗೂ ತುಳುನಾಡಿನ ಪುರಾತನ ದೇವಾಲಯದ ಇತಿಹಾಸವನ್ನು ತಿಳಿಸಿದರು.


ಅಧ್ಯಕ್ಷತೆಯನ್ನು ತುಳು ಪರಿಷತ್ ಅಧ್ಯಕ್ಷರಾದ ಶುಭೋದಯ ಆಳ್ವ ಮಾತನಾಡುತ್ತ ಆಟಿ ತಿಂಗಳು ತುಂಬಾ ಕಷ್ಟದ ಸಮಯವಾಗಿತ್ತು. ಕೃಷಿ ಬದುಕಿನ ಮದ್ಯೆ ಬಡತನದ ಮಧ್ಯೆಯೂ ಜನರೂ ಸಂಸ್ಕಾರ ಯುತ ಜೀವನ ನಡೆಸುತ್ತಿದ್ದರು. ತುಳು ಭಾಷೆ ಮತ್ತು ಸಂಸ್ಕೃತಿ ಯನ್ನು ಉಳಿಸಲು ಪ್ರತಿ ತಿಂಗಳು ಕಾರ್ಯಕ್ರಮವನ್ನು ನಡೆಸುತಿದ್ದೇವೆ ಎಂದು ಹೇಳಿದರು.


ತುಳು ಪರಿಷತ್ ಮಂಗಳೂರು ಗೌರವಧ್ಯಕ್ಷರಾದ ಡಾ! ಪ್ರಭಾಕರ್ ನಿರುಮಾರ್ಗ ಮಾತನಾಡುತ್ತ ತುಳು ಭಾಷೆ ಮತ್ತು ತುಳು ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ರಾಜಕೀಯ ರಹಿತವಾಗಿ ಕೆಲಸ ಮಾಡಬೇಕು. ಪದವಿ ತರಗತಿಯಲ್ಲಿ ತುಳು ತೃತೀಯ ಭಾಷೆಯಾಗಿ ನಾನು ಮತ್ತು ಈಗಿನ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಜೊತೆ ಶ್ರಮಿಸಿದ್ದೇನೆ. ಹಾಗೂ ಪಿಯು ಸಿ ಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಅಳವಡಿಸಲು ಪ್ರಯತ್ನ ನಡೆಸಿದ್ದೇವೆ ಹಾಗೂ ಎಲ್ಲರೂ ಪ್ರಯತ್ನ ಪಡಬೇಕೆಂದು ಕರೆಯಿತ್ತರು.

ಸುಧಾ ನಾಗೇಶ್, ಚಂದ್ರಕಲಾ ರಾವ್, ಸುಮತಿ ಹೆಗ್ಡೆ, ಶಾಲಿನಿ ರೈ, ಅಮಿತಾ ಅಶ್ವಿನ್ ಉಳ್ಳಾಲ್,ವಿನುತಾ, ಶ್ರೀನಿವಾಸ್, ರಾಕೇಶ್ ಕುಂದರ್, ರಮೇಶ್ ಮಂಚಕಲ್, ಶಾರದಾ ಬಾರ್ಕುರೂ, ವಿನಯ್, ದುರ್ಗಾ ಪ್ರಸಾದ್, ಮೀರಾ ಶೆಟ್ಟಿ, ವನಿತಾ, ನ್ಯಾನ್ಸಿ ನೋರೋನ್ಹ, ಆಶಾ,ಜ್ಯೋತಿ, ಸನ್ನಿಧಿ, ಉಪಸ್ಥಿತರಿದ್ದರು.
ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!