ಬೆಳ್ತಂಗಡಿ: ಧರ್ಮಸ್ಥಳದ ಕಾಡಿನಲ್ಲಿ ನಿಗೂಢ ವ್ಯಕ್ತಿ ಹೂತು ಹಾಕಿದ್ದ ಸ್ಥಳದ ಪಾಯಿಂಟ್ ನಂಬರ್ 9ರಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ ಎಂದು ಎಸ್‌ಐಟಿ ಮೂಲಗಳಿಂದ ಮಾಹಿತಿ ಲಭಿಸಿದೆ. ಕಳೆದೈದು ದಿನಗಳಿಂದ ನಿಗೂಢ ವ್ಯಕ್ತಿ ಹೇಳಿದ ಜಾಗವನ್ನು ಪಾಯಿಂಟ್ ಬೈ ಪಾಯಿಂಟ್ ಮಾಡಿ, ಅಗೆದು, ಶೋಧಿಸಿ ಎಸ್‌ಐಟಿ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆೆಯಿಂದ 2.30 ರ ವರೆಗೆ ನಿಗೂಢ ವ್ಯಕ್ತಿ ಗುರುತಿಸಿದ್ದ ನೇತ್ರಾವತಿ ಅರಣ್ಯ ಪ್ರದೇಶದ ಪಾಯಿಂಟ್ ನಂಬರ್ 9 ಅನ್ನು ಎಸ್.ಐ.ಟಿ ಅಧಿಕಾರಿಗಳು ಆತನ ಸಮ್ಮುಖದಲ್ಲಿಯೇ ಪೌರಕಾರ್ಮಿಕರಿಂದ ಅಗೆಸಿದ್ದಾರೆ. ಸುಮಾರು 4 ಅಡಿ ತೆಗಿಸಿ ಬಳಿಕ ಮಿನಿ ಜೆಸಿಬಿಯಿಂದ ಸುತ್ತಮುತ್ತ ಕಾರ್ಯಾಚರಣೆ ನಡೆಸಿದರೂ ಕಳೇಬರ ಸಿಕ್ಕಿಲ್ಲ ಎಂದು ಹೇಳಲಾಗಿದೆ.
ನಿಗೂಢ ವ್ಯಕ್ತಿ ಪಾಯಿಂಟ್ ನಂಬರ್ 9ರಲ್ಲಿ ಕಳೇಬರ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದ. ಇದೀಗ ಪಾಯಿಂಟ್ ನಂಬರ್ 10ರ ಅಗೆಯುವ ಕಾರ್ಯ ನಡೆಯುತ್ತಿದೆ.