ಮಲಯಾಳಂ ಖ್ಯಾತ ನಟ ಕಲಾಭವನ್ ನವಾಸ್ ಹೋಟೇಲ್ ನಲ್ಲಿ ಶವವಾಗಿ ಪತ್ತೆ !

Malayalam Actor : ಮಲಯಾಳಂ ಹಾಸ್ಯ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ (51) ಅವರು ಕೊಚ್ಚಿಯ ಚೋಟ್ಟನಿಕ್ಕರದಲ್ಲಿರುವ ಹೋಟೆಲ್ ಕೋಣೆಯಲ್ಲಿ ಶುಕ್ರವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಈ ಸುದ್ದಿಯಿಂದ ಮಲಯಾಳಂ ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ.

‘ಪ್ರಕಂಬನಂ’ ಸಿನಿಮಾ ಚಿತ್ರೀಕರಣಕ್ಕಾಗಿ ನವಾಸ್‌ ಅವರು ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಅವರು ಚೆಕ್-ಔಟ್‌ಗೆ ಬಾರದಿದ್ದ ಕಾರಣ ಸಿಬ್ಬಂದಿ ಬಂದು ಕೊಠಡಿ ಪರಿಶೀಲಿಸಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ ಕಲಾಭವನ್ ನವಾಸ್ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅವರ ಕೊಠಡಿಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲಾಭವನ್ ಅವರ ಮರಣೋತ್ತರ ಪರೀಕ್ಷೆಯನ್ನು ಶನಿವಾರ ಕಲಾಮಸ್ಸೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿ, ಸಾವಿಗೆ ಕಾರಣವನ್ನು ಖಚಿತಪಡಿಸಲಾಗುವುದು. ಬಳಿಕ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

1995ರಲ್ಲಿ ‘ಚೈತನ್ಯಂ’ ಚಿತ್ರದ ಮೂಲಕ ಸಿನಿ ಪ್ರವೇಶ ಮಾಡಿದ್ದ ಕಲಾಭವನ್ ನವಾಸ್ ಅವರು, ‘ಮಿಮಿಕ್ಸ್ ಆಕ್ಷನ್ 500’, ‘ಹಿಟ್ಲರ್ ಬ್ರದರ್ಸ್’, ‘ಜೂನಿಯರ್ ಮಾಂಡ್ರೇಕ್’, ‘ಅಮ್ಮ ಅಮ್ಮಯ್ಯಮ್ಮ’, ‘ಚಂದಮಾಮ’ ಮತ್ತು ‘ತಿಲ್ಲಾನ ತಿಲ್ಲಾನ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ, ಮಿಮಿಕ್ರಿ ಪ್ರತಿಭೆ ಮತ್ತು ಹಿನ್ನೆಲೆ ಗಾಯನದಿಂದ ಅಪಾರ ಪ್ರೇಕ್ಷಕರನ್ನು ಮೆಚ್ಚಿಸಿಕೊಂಡಿದ್ದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!