
ಮಂಗಳೂರು: ಲಯನ್ಸ್ ಕ್ಲಬ್ & ಲಿಯೋ ಕ್ಲಬ್ ಮಂಗಳೂರು ಕೊಡಿಯಾಲ್‌ಬೈಲ್‌ನ 2026-27ನೇ ಲಯನ್ಸ್ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಮಾಜಿ ಜಿಲ್ಲಾ ಗವರ್ನರ್ ಲ| ಡಾ. ಮೆಲ್ವಿನ್ ಡಿಸೋಜಾ, pmjf ಇವರು ಪದಗ್ರಹಣ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
2026-27ನೇ ಸಾಲಿನ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಲ| ಸತ್ಯೇಂದ್ರ ಭಟ್, ಕಾರ್ಯದರ್ಶಿಯಾಗಿ
ಲ| ವಿನೂತನ್ ಕಲಿವೀರ್, ಖಜಾಂಚಿಯಾಗಿ ಲ| ಸುದೀಪ್ ಕೃಷ್ಣರಾಜ್ ಮತ್ತು ಲಿಯೋ ಕ್ಲಬ್ಬಿನ ನೂತನ ಅಧ್ಯಕ್ಷೆಯಾಗಿ ಲಿ| ನವ್ಯ ಜೋಗಿ, ಕಾರ್ಯದರ್ಶಿಯಾಗಿ ಲಿ| ಶಿವಾನಿ ಎಸ್. ಖಜಾಂಚಿಯಾಗಿ ಲಿ| ವಾರುಣಿ ಎನ್. ಅಧಿಕಾರ ಸ್ವೀಕರಿಸಿದರು. ಕೊಡಿಯಾಲ್‌ಬೈಲಿನ ಕ್ಲಬ್ಬಿನ ನಿರ್ಗಮಿತ ಅಧ್ಯಕ್ಷರು ಲ| ಮೋಹನ್ ಕೊಪ್ಪಲ ಕದ್ರಿ ಸ್ವಾಗತ ಭಾಷಣ ಮಾಡಿದರು. ಐಪಿಡಿಜಿ ಕುಡ್ಪಿ ಅರವಿಂದ ಶೆಣೈ, ಸಂಪುಟ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಪ್ರಾಂತ್ಯ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್, ವಲಯಾಧ್ಯಕ್ಷ ನಿಖಿಲ್ ಶೆಟ್ಟಿ, ನಿರ್ಗಮಿತ ಕಾರ್ಯದರ್ಶಿ ಲ| ಸತ್ಯೇಂದ್ರ ಭಟ್, ನಿರ್ಗಮಿತ ಖಜಾಂಚಿ ಲ| ಕಿಶೋರ್ ಡಿ. ಶೆಟ್ಟಿ, ಲಿ| ಸಚಿನ್, ಲಿ| ಅಪೇಕ್ಷಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಲಬ್ಬಿನ ವತಿಯಿಂದ 2026-27ನೇ ಸಾಲಿನ ಆಯೋಜಿಸಲಾದ ಸುಮಾರು 3,40,000 ಮೌಲ್ಯದ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮವನ್ನು ನಡೆಸಲಾಯಿತು. ಮಕ್ಕಳ ಶಿಕ್ಷಣಕ್ಕೆ ಮತ್ತು ಬಡಕುಟುಂಬಗಳ ಆರೋಗ್ಯ ನೆರವು ಕಾರ್ಯಕ್ರಮ ಹಾಗೂ ಈ ಸಾಲಿನಲ್ಲಿ ಒಂದು ಬಡ ಕುಟುಂಬಕ್ಕೆ ಮನೆ ಕಟ್ಟಿಕೊಡುವುದಾಗಿ ನಿರ್ಧರಿಸಲಾಯಿತು.
ಸಮಾರಂಭದಲ್ಲಿ ಪಿಡಿಜಿಗಳಾದ ವಸಂತ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಪತ್ರಾವೊ, ರೋನಾಲ್ಡ್ ಗೋಮ್ಸ್, ಜೆ.ಕೆ. ರಾವ್, ಕೆ.ಸಿ. ಪ್ರಭು, ಲಯನ್ಸ್ ಸದಸ್ಯರು, ಲಿಯೋ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಆಹ್ವಾನಿತ ಅತಿಥಿಗಳು ಭಾಗವಹಿಸಿ ಪದಗ್ರಹಣಕ್ಕೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಲ| ವಿನೂತನ್ ಕಲಿವೀರ್ ಮತ್ತು ಲ| ಚಂದ್ರಹಾಸ್ ಶೆಟ್ಟಿಯವರು ಕಾರ್ಯಕ್ರಮದ ನಿರೂಪಣೆಗೈದರು. ಲ| ಸುದೀಪ್ ಕೃಷ್ಣರಾಜ್ ವಂದಿಸಿದರು