5 ಆಸ್ಪತ್ರೆಗಳು, 180 ಕಿ.ಮೀ.‌ ಸುತ್ತಾಟ: ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು

ಉತ್ತರಾಖಂಡ: ಉತ್ತರಾಖಂಡದಲ್ಲಿ ಇಡೀ ದೇಶವೇ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ನಿರ್ಜಲೀಕರಣದಂತಹಾ ಸಾಮಾನ್ಯ ಅಸ್ವಸ್ಥತೆ ಹೊಂದಿದ್ದ ಬಾಲಕನನ್ನು ಜಿಲ್ಲೆಯ ನಾಲ್ಕು ಜಿಲ್ಲೆಗಳ ಐದು ಆಸ್ಪತ್ರೆಗಳಿಗೆ ಕರೆದೊಯ್ದರೂ, ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಬಾಲಕ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಶಿವಾಂಶ್ ಜೋಶಿ
ಶಿವಾಂಶ್ ಜೋಶಿಯ ಪೋಷಕರು

ಸೇನಾ ಅಧಿಕಾರಿ ದಿನೇಶ್ ಚಂದ್ರ ಜೋಶಿ ಅವರ ಪುತ್ರ ಶಿವಾಂಶ್ ಜೋಶಿ ಮೃತ ಬಾಲಕ. ದೇಶ ಕಾಯುವ ಸೈನಿಕರಿಗೇ ಈ ರೀತಿ ಆದರೆ ಆ ದೇಶದ ಸಾಮಾನ್ಯರ ಗತಿ ಏನು ಎಂದು ಇಡೀ ದೇಶವಾಸಿಗಳು ಉತ್ತರಾಖಂಡದ ವ್ಯವಸ್ಥೆಯ ಬಗ್ಗೆ ಕ್ಯಾಕರಿಸಿ ಉಗಿಯುತ್ತಿದ್ದಾರೆ. ಈ ದುರದೃಷ್ಟಕರ ಘಟನೆಯನ್ನು ಗಮನಿಸಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತನಿಖೆಗೆ ಆದೇಶಿಸಿದ್ದಾರೆ.

ಜುಲೈ 10 ರಂದು, ಪುಟ್ಟ ಬಾಲಕ ಶಿವಾಂಶ್ ವಾಂತಿ ಸೇರಿದಂತೆ ನಿರ್ಜಲೀಕರಣದ ಲಕ್ಷಣಗಳನ್ನು ತೋರಿಸಿದ್ದ. ಅವನಿಗೆ ಹಾಲುಣಿಸಲು ಸಾಧ್ಯವಾಗದಿದ್ದಾಗ, ಅವನ ತಾಯಿ ಅವನನ್ನು ಚಮೋಲಿಯ ಗ್ವಾಲ್ಡಮ್‌ನಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ (PHC) ಕರೆದೊಯ್ದರು. ಇಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದಾಗ ಹುಡುಗನನ್ನು 22 ಕಿ.ಮೀ ದೂರದಲ್ಲಿರುವ ಬಾಗೇಶ್ವರದ ಬೈಜ್‌ನಾಥ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಕಳಿಸಿದರು. PHCಯ ಶಿಶುವೈದ್ಯರು ಇಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ಸೌಲಭ್ಯಗಳಿಲ್ಲ ಎಂದು ಕಳಿಸಿದ್ದಾರೆ. ಅಲ್ಲಿಂದ
ಮಗುವನ್ನು CHC ಗೆ ಕರೆದೊಯ್ಯಲಾಯಿತು, ಅಲ್ಲಿ ಅವನಿಗೆ ಚಿಕಿತ್ಸೆ ನೀಡಲಾಯಿತಾದರೂ ಅವನ ಸ್ಥಿತಿ ಹದಗೆಟ್ಟ ಕಾರಣ ಅವನನ್ನು 20 ಕಿ.ಮೀ ದೂರದಲ್ಲಿರುವ ಬಾಗೇಶ್ವರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು.

ಶಿವಾಂಶ್ ಜೋಶಿಯ ಪೋಷಕರು
ಶಿವಾಂಶ್ ಜೋಶಿಯ ಪೋಷಕರು

ಇಲ್ಲಿನ ಜಿಲ್ಲಾ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ತಮ್ಮ ಮೊಬೈಲ್ ಫೋನ್‌ನಲ್ಲಿ ಬ್ಯುಸಿಯಾಗಿದ್ದರೆ. ನರ್ಸ್‌ಗಳು ತಮಾಷೆ ಮತ್ತು ನಗುವುದರಲ್ಲಿ ನಿರತರಾಗಿದ್ದರು ಎಂದು ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.

“ವೈದ್ಯರು ಅಥವಾ ಇತರ ಸಿಬ್ಬಂದಿ ಸೌಜನ್ಯದಿಂದಲೂ ಮಾತನಾಡಲಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿಯೂ ಸಹ, ವೈದ್ಯರು ನನ್ನ 14 ತಿಂಗಳ ಮಗನನ್ನು ಸರಿಯಾಗಿ ಪರೀಕ್ಷಿಸಲಿಲ್ಲ ಎಂದು ತಂದೆ ಎನ್‌ಡಿಟಿವಿ ಮುಂದೆ ಆರೋಪಿಸಿದ್ದಾರೆ.

ಮಗುವಿಗೆ ಮೆದುಳಿನಲ್ಲಿ ರಕ್ತದ ಹರಿವಿನ ಸಮಸ್ಯೆ ಇತ್ತು. ಮಕ್ಕಳ ಐಸಿಯು ಘಟಕದ ಕೊರತೆಯಿಂದಾಗಿ ವೈದ್ಯರು ಮಗುವನ್ನು ಉನ್ನತ ಕೇಂದ್ರಕ್ಕೆ ಉಲ್ಲೇಖಿಸುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಮಗುವಿನ ತಾಯಿಯ ಪ್ರಕಾರ, ಅವರು ಸಂಜೆ 7 ಗಂಟೆಗೆ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು, ಆದರೆ ಜೋಶಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕರೆ ಮಾಡಿ ಸಹಾಯ ಕೇಳಿದ ನಂತರ ತುರ್ತು ಸೇವಾ ವಾಹನ ಎರಡೂವರೆ ಗಂಟೆ ತಡವಾಗಿ ಬಂದಿತು.

ಗೆದ್ದಲು ಹಿಡಿದ ಅಂಬ್ಯುಲೆನ್ಸ್‌ ವ್ಯವಸ್ಥೆ

ಉತ್ತಮ ಚಿಕಿತ್ಸೆಗಾಗಿ ವೈದ್ಯರು 108 ಅಂಬ್ಯುಲೆನ್ಸ್‌ಗೆ ಕರೆ ಮಾಡಲು ಹೇಳಿದರು. ನಾನು ಕರೆ ಮಾಡಿದಾಗ ಅಲ್ಲಿಂದ ತಕ್ಷಣ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಾನು ಇಲ್ಲಿ ಒಬ್ಬಂಟಿಯಾಗಿದ್ದರೆ ನನ್ನ ಪತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದರು. ಆಂಬ್ಯುಲೆನ್ಸ್ ಬಂದಿಲ್ಲ ಎಂದು ನಾನು ವೈದ್ಯರಿಗೆ ಹೇಳಿದೆ. ಆಸ್ಪತ್ರೆ ಸಿಬ್ಬಂದಿ ನಮಗೆ ಸಹಾಯ ಮಾಡುವ ಬಗ್ಗೆ ಕಾಳಜಿ ವಹಿಸಲಿಲ್ಲ. ಅವರು ನಮ್ಮ ಮನವಿಗಳನ್ನು ನಿರ್ಲಕ್ಷಿಸಿದರು” ಎಂದು ಮಗುವಿನ ತಾಯಿ ಹೇಳಿದರು.

ರಾತ್ರಿ 9:30 ಕ್ಕೆ, ಆಂಬ್ಯುಲೆನ್ಸ್ ಬಂದಾಗ, ಮಗುವನ್ನು ಚಿಕಿತ್ಸೆಗಾಗಿ ನಾಲ್ಕನೇ ಆಸ್ಪತ್ರೆಯಾದ ಅಲ್ಮೋರಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಮಗುವಿಗೆ ಚಿಕಿತ್ಸೆ ನೀಡಲಾಯಿತು ಆದರೆ ಮತ್ತೆ ನೈನಿತಾಲ್‌ನ ಹಲ್ದ್ವಾನಿಯ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು. ಜುಲೈ 12 ರಂದು, ಹಲ್ದ್ವಾನಿಯ ವೈದ್ಯರು ಮಗುವನ್ನು ವೆಂಟಿಲೇಟರ್‌ನಲ್ಲಿ ಇರಿಸಿದರು. ಆದಾಗ್ಯೂ, ನಾಲ್ಕು ದಿನಗಳ ನಂತರ, ಜುಲೈ 16 ರಂದು, ಹುಡುಗ ಸತ್ತಿದ್ದಾನೆ ಎಂದು ಘೋಷಿಸಲಾಯಿತು.

ರಾಜ್ಯದ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದ್ದು, ಸರ್ಕಾರ ಈ ಬಗ್ಗೆ ಸರಿಯಾದ ಕಾಳಜಿ ವಹಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಒಬ್ಬ ಅಮಾಯಕ ಸಣ್ಣದೊಂದು ನಿರ್ಜಲೀಕರಣ ಸಮಸ್ಯೆಯಿಂದ ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಅಲ್ಲಿನ ಮುಖ್ಯಮಂತ್ರಿ ಧಾಮಿ ಈ ಘಟನೆಯನ್ನು ಖಂಡಿಸಿದರು ಮತ್ತು ಮಗುವಿನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಚಿತಪಡಿಸಿದ್ದಾರೆ. ಉತ್ತರಾಖಂಡ ಸರ್ಕಾರ ಇಡೀ ಜಗತ್ತಿನ ಎದುರು ಬೆತ್ತಲಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!