ಮಂಗಳೂರು: ಔಷಧ ಎಂದು ಭಾವಿಸಿ ಇಲಿ ಪಾಷಾಣ ಸೇವಿಸಿದ ಪೊಲೀಸ್ ಸಿಬಂದಿ ಒಬ್ಬರು ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ ಹೆಗ್ಡೆ (44) ಮೃತಪಟ್ಟವರು.
ಅನಾರೋಗ್ಯ ಸಮಸ್ಯೆಗೆ ಸಂಬಂಧಿಸಿ ಆಯುರ್ವೇದ ಔಷಧ ಸೇವಿಸುತ್ತಿದ್ದ ಅವರು, ಔಷಧ ಎಂದುಕೊಂಡು ಇಲಿ ವಿಷ ಸೇವಿಸಿದ್ದರು. ಚಿಂತಾಜನಕ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹರೇಕಳ ಮೂಲದವರಾದ ಅವರು ಸುರತ್ಕಲ್ ಚೇಳೈರು ಬಳಿ ವಾಸವಾಗಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.