ಹಳೆಯಂಗಡಿ :ದೇವಾಡಿಗ ಸಮಾಜ ಸೇವಾ ಸಂಘ(ರಿ)ಪಾವಂಜೆ ವಾರ್ಷಿಕ ಮಹಾಸಭೆ; 2024-25

ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ (ರಿ)ಪಾವಂಜೆ ಇದರ 2024-25 ನೇ ಸಾಲಿನ ವಾರ್ಷಿಕಯು ಮಹಾಸಭೆಯು ಸಂಘದ ಕಲಾ ವೇದಿಕೆಯಲ್ಲಿ ನಡೆಯಿತು.ಇದರ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ವಹಿಸಿದ್ದರು.

ಕಾರ್ಯಕ್ರಮಕ್ಕೆ ಶ್ರೀಮತಿ ಜಯಶ್ರೀ ಯಾದವ್ ರವರ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.  ಸಭೆಯನ್ನು ಕಾರ್ಯದರ್ಶಿ ಶ್ರೀ ನಿಖಿಲ್ ದೇವಾಡಿಗ ಸ್ವಾಗತಿಸಿ 2024-2025 ರ ವರದಿಯನ್ನು ವಾಚಿಸಿದರು.

ಈ ಸಾಲಿನ ಆಯ ವ್ಯಯ ಪತ್ರವನ್ನು ಕೋಶಾಧಿಕಾರಿ ಶ್ರೀ ಸುಬ್ರತ್ ದೇವಾಡಿಗ ಸಭೆಯಲ್ಲಿ ಪ್ರಸ್ತುತ ಪಡಿಸಿದರು. ಕಟ್ಟಡದ ನೆಲ ಅಂತಸ್ತು ನಿರ್ಮಾಣವಾದ ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ಹಾಗೂ ನಾವು ನಡೆದು ಬಂದ ದಾರಿಯ ಬಗ್ಗೆ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಯಾದವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಶ್ರೀ ಜನಾರ್ಧನ್ ಪಡುಪಣಂಬೂರು, ಉಪಾಧ್ಯಕ್ಷ ಶ್ರೀ ಜೀವನ ಪ್ರಕಾಶ್ ಕಾಮೇರೊಟ್ಟು,ಟ್ರಸ್ಟಿನ ಅಧ್ಯಕ್ಷ ಶ್ರೀ ರಮೇಶ್ ಕುಮಾರ್ ತೋಕೂರು,ಮಾತನಾಡಿದರು. ಕೊನೆಯಲ್ಲಿ ಅಧ್ಯಕ್ಷರಾದ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಮುಂದಿನ ಯೋಜನೆಗಳಿಗೆ ಸರ್ವರ ಸಕಾರಾತ್ಮಕ ಸಹಕಾರವನ್ನು ಯಾಚಿಸಿದರು.

ಕಟ್ಟಡ ಸಮಿತಿಯ ಕಾರ್ಯಧ್ಯಕ್ಷರಾದ ಶ್ರೀ ಯಾದವ ದೇವಾಡಿಗ, ಸಂಘದ ಉಪಾಧ್ಯಕ್ಷರುಗಳಾದ ಸರ್ವಶ್ರೀ ರಘು ದೇವಾಡಿಗ,ಜಗದೀಶ್ ಪಲಿಮಾರ್, ಸತೀಶ್ ಇಂದಿರಾನಗರ,ಕಾರ್ಯದರ್ಶಿ ಶ್ರೀ ನಿಖಿಲ್ ದೇವಾಡಿಗ, ಕೋಶಾಧಿಕಾರಿ ಶ್ರೀ ಸುಬ್ರತ್ ದೇವಾಡಿಗ, ಶ್ರೀ ಅಶೋಕ್ ಪಾವಂಜೆ,ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ರಮೇಶ್ ಕುಮಾರ್ ತೋಕೂರು,ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಜನಾರ್ದನ, ಮಹಿಳಾ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಸುಬ್ರತ್ ಕೋಶಾಧಿಕಾರಿ ಶ್ರೀಮತಿ ಅನುಪಮಾ ಅಶೋಕ್, ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ಗಣೇಶ್ ಪಂಜ, ಯುವ ವೇದಿಕೆ ಕಾರ್ಯದರ್ಶಿ ಶ್ರೀ ಆನಂದ ದೇವಾಡಿಗ ಹಾಗೂ ಸದಸ್ಯರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಉಪಾಧ್ಯಕ್ಷ ಶ್ರೀಸತೀಶ್ ಇಂದಿರಾನಗರ ಇವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!