ಮೋಹಿತ್ ಸೂರಿ ಅವರ ಪ್ರಣಯಗಾಥೆ ‘ಸೈಯಾರಾ’ ಕೇವಲ ಎರಡೇ ವಾರದಲ್ಲಿ ಬರೋಬ್ಬರಿ 250 ಕೋಟಿ ಕಲೆಕ್ಷನ್ ಮಾಡಿದ್ದು, ಚಿತ್ರದ ಬಗ್ಗೆ ಟ್ರೆಂಡಿಗ್ ಹೆಚ್ಚಾಗಿದೆ. ಆರಂಭದಿಂದ ಇಂದಿನವರೆಗೂ ದೇಶದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕಡಿಮೆ ಬಂಡವಾಳ ಹೂಡಿ, ವಿಭಿನ್ನ ಪ್ರೇಮಕತೆಯನ್ನು ಹೊಂದಿರುವ ಹೊಸವರೇ ನಟಿಸಿರುವ ಈ ಚಿತ್ರ ಹಲವು ಸ್ಟಾರ್ ನಟ-ನಟಿಯರ ಅಹಂ ಅನ್ನು ಇಳಿಸಿದೆ.
ಈ ಚಿತ್ರದಲ್ಲಿ ಹೊಸಬರಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಬಣ್ಣ ಹಚ್ಚಿದ್ದಾರೆ. ಈ ಚಿತ್ರವು ಈಗಾಗಲೇ 230 ಕೋಟಿ ರೂ.ಗಳನ್ನು ದಾಟಿದೆ. 10 ನೇ ದಿನದ (ಎರಡನೇ ಭಾನುವಾರ) ಹೊತ್ತಿಗೆ, ಇದುವರೆಗೆ 30.00 ಕೋಟಿ ರೂ.ಗಳನ್ನು ಸಂಗ್ರಹಿಸಿದೆ, ಇದುವರೆಗೆ ಒಟ್ಟು 247.25 ಕೋಟಿ ರೂ.ಗಳನ್ನು ಗಳಿಸಿದೆ.
ಹಾಗಾಗಿ ಈ ಚಿತ್ರವು ಈಗ 200 ಕೋಟಿ ರೂ.ಗಳ ಕ್ಲಬ್‌ಗೆ ಸೇರಿದಂತಾಗಿದೆ. ʻಸೈಯಾರಾ’ ಬಗ್ಗೆ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಕಳೆದ ಒಂಬತ್ತು ದಿನಗಳಲ್ಲಿ ಚಿತ್ರವು ಎರಡು-ಅಂಕಿಯ ಗಳಿಕೆಗಿಂತ ಕಡಿಮೆಯಾಗಿಲ್ಲ. ವಾರಾಂತ್ಯದಲ್ಲಿ ಇನ್ನಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆಯಿದ್ದು, 300 ಕೋಟಿ ದಾಟುವ ನಿರೀಕ್ಷೆ ಹೊಂದಲಾಗಿದೆ.
ಅನೀತ್ ಪಡ್ಡಾ ತಮ್ಮ ಚೊಚ್ಚಲ ಚಿತ್ರ ‘ಸೈಯಾರಾ’ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಅತ್ಯಂತ ಸರಳ ಪ್ರೇಮಕಥೆ ಪ್ರೇಕ್ಷಕರ ಹೃದಯ ಗೆದ್ದಿದೆ. ಆರಂಭದ ನಾಲ್ಕು ದಿನಗಳಲ್ಲಿಯೇ ಬಾಕ್ಸ್ ಆಫೀಸ್‌ನಲ್ಲಿ ₹100 ಕೋಟಿ ಮಾಡಿತ್ತು. ಮತ್ತೊಬ್ಬ ಹೊಸಬ ಅಹಾನ್ ಪಾಂಡೆಯ ಲಕ್ ಕೂಡ ಬದಲಾಗಿದೆ. ಇದು ಅವರ ಮೊದಲ ಚಿತ್ರವಾಗಿದ್ದರೂ, ಅವರ ಅಭಿನಯವು ವ್ಯಾಪಕ ಪ್ರಶಂಸೆ ಗಳಿಸಿದೆ. ವಿಶೇಷವಾಗಿ ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವ ಯುವತಿಯಾಗಿ ಅನೀತ್ ಪಡ್ಡಾ ಅವರ ಭಾವನಾತ್ಮಕ ಪಾತ್ರ ವೀಕ್ಷಕರಿಗೆ ಹುಚ್ಚು ಹಿಡಿಸಿದೆ. ಹೀಗಾಗಿ ಭಾವಾನಾತ್ಮಹ ವ್ಯಕ್ತಿಗಳು ಥಿಯೇಟರ್‌ಗಳಲ್ಲಿಯೇ ಮಾಸ್ ಹಿಸ್ಟೀರಿಯಾ ಹಿಡಿಸಿದೆ.
ಪಂಜಾಬ್‌ನ ಅಮೃತಸರದಿಂದ ಬಂದ ಅನೀತ್ ಪಡ್ಡಾಳನ್ನು ಈಗ ಅಭಿಮಾನಿಗಳು ʻಅದೃಷ್ಟ ಸುಂದರಿ’ ಎಂದು ಕರೆಯಲಾರಂಭಿಸಿದ್ದಾರೆ. ಸೈಯಾರಾ ಅವರು ನಾಯಕಿಯಾಗಿ ಮೊದಲ ಚಿತ್ರವಾಗಿದ್ದರೂ, ಸಹ ಈಕೆ ವೆಬ್ ಸರಣಿ ಮತ್ತು ಹಲವಾರು ಟಿವಿ ಜಾಹೀರಾತುಗಳಲ್ಲಿ ನಟಿಸಿದ್ದಾರೆ.
ಅನೀತ್ ಪಡ್ಡಾ ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಮತ್ತು ಚಿಕ್ಕ ವಯಸ್ಸಿನಿಂದಲೂ ನಟಿಸುವ ಕನಸು ಕಂಡಿದ್ದರು. ಅವರು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಶೀಘ್ರದಲ್ಲೇ ಪ್ರಮುಖ ಬ್ರ್ಯಾಂಡ್‌ಗಳ ಮುಖವಾದರು. 2021 ರ ಕ್ಯಾಡ್ಬರಿ ಜಾಹೀರಾತು ಅವರನ್ನು ಪರಿಚಿತ ಮುಖವನ್ನಾಗಿ ಮಾಡಿತು ಮತ್ತು ನಂತರ ಅವರು ನೆಸ್ಕಾಫೆ, ಪೇಟಿಎಂ ಮತ್ತು ಅಮೆಜಾನ್ ಪ್ರೈಮ್‌ನ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.
ಕೆಲವು ಸ್ಟಾರ್ ನಟ-ನಟಿಯರು ನಟಿಸುವ ಮುನ್ನ ತನಗೆ ಬೇಕಾದ ಹಾಗೆ ಚಿತ್ರದ ಕಥೆಯನ್ನು ಬದಲಿಸುತ್ತಾರೆ, ಕೆಲವೊಮ್ಮೆ ಇಲ್ಲ ಸಲ್ಲದ ಸನ್ನಿವೇಷಗಳನ್ನು ಸೃಷ್ಟಿಸಿ, ಕೋಟಿಗಟ್ಟಲೆ ಡಿಮಾಂಡ್ ಮಾಡುತ್ತಾರೆ. ಆದರೆ ಇದು ಚಿತ್ರ ನೆಲಕಚ್ಚಿದಾಗ ನಿರ್ಮಾಮಕ ಬೀದಿಪಾಲಾಗುತ್ತಾನೆ. ಇಂಥಾ ಒಂದು ಸ್ಟಾರ್‌ಗಿರಿ ಭಾರತೀಯ ಸಿನಿಮಾ ರಂಗವನ್ನು ಆವರಿಸಿದೆ. ಹೀಗಾಗಿಯೇ ಇಂದು ಥಿಯೇಟರ್‌ಗಳೆಲ್ಲಾ ಖಾಲಿಹೊಡೆಯುತ್ತಿವೆ. ಹೀಗಾಗಿ ʻಸೈಯಾರಾʼ ಚಿತ್ರ ಸ್ಟಾರ್‌ಗಿರಿ ಪಟ್ಟಕ್ಕೆ ಸಮಾ ಪೆಟ್ಟು ನೀಡಿದೆ.