ಕಡಬ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ (52) ಮೃತದೇಹ ಕುಮಾರಧಾರ ನದಿಯಲ್ಲಿ ಜುಲೈ 25ರಂದು ಪತ್ತೆಯಾಗಿದೆ.
ಸುಬ್ರಹ್ಮಣ್ಯ ದೇವರಗದ್ದೆ ನಿವಾಸಿ ಹೊನ್ನಪ್ಪ (52) ಮೃತಪಟ್ಟ ವ್ಯಕ್ತಿ.
ಜುಲೈ 22 ರಂದು ಕೆಲಸಕ್ಕೆಂದು ಮನೆಯಿಂದ ಹೊರಟ ಹೊನ್ನಪ್ಪ ಅವರು ನಾಪತ್ತೆಯಾಗಿದ್ದರು. ಅಗ್ರಹಾರ ದೇವಸ್ಥಾನದ ಬಳಿಯಿಂದಾಗಿ ಕುಮಾರಧಾರ ನದಿಯ ಕಡೆಗೆ ಹೋಗುತ್ತಿರುವುದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆ ಅವರು ನದಿಗೆ ಹಾರಿರಬಹುದು ಎಂಬ ಶಂಕೆ ಮೇರೆಗೆ ಕುಮಾರಧಾರ ನದಿಯಲ್ಲಿ ಅಂದು ರಾತ್ರಿಯಿಂದಲೇ ಶೋಧ ಕಾರ್ಯ ಆರಂಭಿಸಲಾಗಿತ್ತು.
ಜು.23ರಂದು ಎಸ್.ಡಿ.ಆರ್.ಎಫ್. ತಂಡ, ಈಶ್ವರ್ ಮಲ್ಪೆ ತಂಡ, ಆಂಬ್ಯುಲೆನ್ಸ್ ಚಾಲಕರ ತಂಡ, ರವಿ ಕಕ್ಕೆಪದವು ತಂಡ, ಅಗ್ನಿಶಾಮಕದಳ ಸುಳ್ಯ, ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿದ್ದರು. ಇದೀಗ 4 ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಶುಕ್ರವಾರ, ಕುಮಾರಧಾರ ಸ್ನಾನಘಟ್ಟದಿಂದ ಸುಮಾರು ಕಿ.ಮೀ. ನಷ್ಟು ಕೆಳಭಾಗದಲ್ಲಿ ಹೊನ್ನಪ್ಪ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬದಲ್ಲಿ ನಾಪತ್ತೆಯಾದ ಆ್ಯಂಬುಲೆನ್ಸ್ ಚಾಲಕನ ಪೊಲೀಸರಿಂದ ನದಿಯಲ್ಲಿ ಶೋಧ ಕಾರ್ಯ
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19