ಸೋಷಿಯಲ್‌ ಮೀಡಿಯದಲ್ಲೆಲ್ಲಾ ʻನಾನ್‌ವೆಜ್‌ʼನದ್ದೇ ಹವಾ!

ಮಂಗಳೂರು: ಟೀಸರ್‌ನಲ್ಲಿಯೇ ಹಲ್ ಚಲ್‌ ಎಬ್ಬಿಸಿದ ʻನಾನ್‌ವೆಜ್‌ʼ ಸಿನಿಮಾ ಆಗಸ್ಟ್‌ 1ರಿಂದ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಸೋಷಿಯಲ್‌ ಮೀಡಿಯಾದಲ್ಲೆಲ್ಲಾ ಇದರದ್ದೇ ಹವಾ ಕಂಡುಬರುತ್ತಿದೆ.

ತುಳುನಾಡಿನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮಾಡಿದಂತಹ ʻಚಾಲಿಪೋಲಿಲುʼ ಚಿತ್ರ ನಿರ್ಮಾಪಕ ಪ್ರಕಾಶ್‌ ಪಾಂಡೇಶ್ವರ್‌ ಹಾಗೂ ʻಪಿಲಿಬೈಲ್ ಯಮುನಕ್ಕʼದಂತಹಾ ಅದ್ಭುತ ಚಿತ್ರವನ್ನು ನೀಡಿದ ಕೆ.ಸೂರಜ್‌ ಶೆಟ್ಟಿ ಅವರ ಜುಗಲ್ಬಂದಿಯಿಂದ ಮೂಡಿಬಂದಿರುವ ʻನಾನ್‌ವೆಜ್‌ʼ ಚಿತ್ರವೂ ಸಹ ತುಳು ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಜುಲೈ 19ರಂದು ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದೇ ತಡ, ಇದು ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಟ್ರೋಲ್‌ ಪೇಜ್‌ಗಳೆಲ್ಲಾ ʻಹ್ಞಾಂ ಹ್ಞಾಂʼ ಎಂದೇ ಕೇಳಿಸುತ್ತಿದೆ. ಒಂದು ಚಿತ್ರ ತೆರೆಗೆ ಅಪ್ಪಳಿಸುವ ಮುನ್ನವೇ ಇಷ್ಟೊಂದು ಹವಾ ಸೃಷ್ಟಿಸಿರುವುದು ಇದೇ ಮೊದಲು ಎಂದೇ ಹೇಳಬಹುದು.

ಸೋಷಿಯಲ್‌ ಮೀಡಿಯಾದಲ್ಲಿ ಇದು ಯಾವ ರೀತಿ ಬಿರುಗಾಳಿ ಎಬ್ಬಿಸಿದೆ ಎಂದರೆ ಯುವ ಸಮುದಾಯದವರು ತಾವಾಗಿಯೇ ಮುಂದೆ ಬಂದು ಈ ಚಿತ್ರಕ್ಕೆ ಪ್ರಮೋಷನ್‌ ನೀಡುತ್ತಿದ್ದಾರೆ. ತಮ್ಮದೇ ಸ್ವಂತ ಪ್ರತಿಭೆಯನ್ನು ಬಳಸಿ ಬೇರೆ ಬೇರೆ ರೀತಿಯ ರೀಲ್ಸ್‌, ಮೀಮ್ಸ್‌ಗಳನ್ನು ಮಾಡಲಾರಂಭಿಸಿದ್ದು, ಇದೆಲ್ಲಾ ಕ್ಷಣಾರ್ಧದಲ್ಲಿ ವೈರಲ್‌ ಆಗುತ್ತಿದೆ. ಇದೀಗ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಹೊಸ ಹೊಸ ರೀಲ್ಸ್‌, ಶಾರ್ಟ್‌ ವಿಡಿಯೋಗಳು ಭಾರೀ ಟ್ರೆಂಡಿಂಗ್‌ ಆಗುತ್ತಿದೆ.

ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಕೆ.ಸೂರಜ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ʻನಾನ್‌ವೆಜ್‌ʼ ಚಿತ್ರದಲ್ಲಿ ಅಥರ್ವ ಪ್ರಕಾಶ್‌ ಮತ್ತು ಸಂಜನಾ ಬುರ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಕುಸೆಲ್ದರಸೆ ನವೀನ್‌ ಡಿ. ಪಡೀಲ್‌, ಪ್ರಕಾಶ್‌ ತೂಮಿನಾಡು, ದೀಪಕ್ ರೈ ಪಾಣಾಜೆ, ವಿಸ್ಮಯ ವಿನಾಯಕ್ ಕಾಣಿಸಿಕೊಂಡಿದ್ದು, ನಾಯಕ ನಟನಾಗಿ ಅಥರ್ವ ಪ್ರಕಾಶ್‌, ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ನಟಿಸಿದ್ದಾರೆ.

ಅಥರ್ವ್ ಪ್ರಕಾಶ್ ಕನ್ನಡ ಚಿತ್ರರಂಗದ ಯುವನಟ. ತನ್ನ ಡಿಫೆರೆಂಟ್‌ ಮ್ಯಾನರಿಸಂ ಮೂಲಕ ಕನ್ನಡದ ಭರವಸೆಯ ನಟರಾಗಿ ಕಾಣಿಸಿಕೊಂಡಿದ್ದಾರೆ. ಭಾವಪೂರ್ಣ, ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಕಣ್ಣಾಮುಚ್ಚೆ ಕಾಡೇ ಗೂಡೇ, ಎಕ್ಸ್‌ ಆಂಡ್‌ ವೈ ಸಿನಿಮಾಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಮಾತ್ರವಲ್ಲದೆ ಅನೇಕ ತುಳು ಕನ್ನಡ, ತುಳು ಚಿತ್ರಗಳಲ್ಲಿ ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದು ಜನರಿಗೆ ಎಲ್ಲವೂ ಕಣ್ಣಳತೆಯಲ್ಲಿಯೇ ಸಿಗುತ್ತದೆ. ಆದರೆ ಇಂದು ಜನರಿಗೆ ಬೇಕಾಗಿರುವುದು ಹೊಟ್ಟೆ ತುಂಬಾ ನಗು ಹಾಗೂ ಮಾನಸಿಕ ನೆಮ್ಮದಿ. ಇಂಥಾ ಕಾನ್ಸೆಪ್ಟ್‌ ಅನ್ನು ಸಮಾಜಕ್ಕೆ ಪರಿಚಯಿಸಿದರೆ ಅದು ಖಂಡಿತಾ ಹಿಟ್‌ ಆಗುತ್ತದೆ ಎನ್ನುವುದನ್ನು ಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರು ಕಂಡುಕೊಂಡ ಹಾಗಿದೆ. ಹಾಗಾಗಿ ಇದು ಮತ್ತೊಂದು ದಾಖಲೆ ಬರೆಯುವ ಎಲ್ಲಾ ಸಾಧ್ಯತೆಗಳೂ ಇವೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

 

 

 

error: Content is protected !!