ಮಂಗಳೂರು: ಮಂಗಳೂರು ನಗರ ಉತ್ತರದ ಶಾಸಕ, ಡಾ. ವೈ ಭರತ್ ಶೆಟ್ಟಿ ಹಾಗೂ ನಿಕಟ ಪೂರ್ವ ಮಂಗಳೂರು ಮಹಾನಗರ ಪಾಲಿಕೆ ಮಹಾ ಪೌರರಾದ ಮನೋಜ್ ಕುಮಾರ್ ಅವರಿಂದ ಕೋಡಿಕಲ್ ಪರಿಸರದಿಂದ ಪಡೀಲ್‌ವರೆಗಿನ ಕೆ. ಎಸ್.ಆರ್.ಟಿ.ಸಿ. ಬಸ್ ಇಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಜಿಲ್ಲಾಧಿಕಾರಿ ಕಛೇರಿಯ ಎಲ್ಲಾ ಕೆಲಸ ಕಾರ್ಯಗಳಿಗೆ ಬಸ್ ಪ್ರಯಾಣಿಸಲು ಸಹಕಾರಿಯಾಗಲಿದೆ, ಸ್ಥಳೀಯ ಜನರ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಕೋಡಿಕಲ್ ನಿಂದ ಪಡೀಲ್ ವರೆಗೆ ಬಸ್ ವ್ಯವಸ್ಥೆಯನ್ನು ನಾಗರಿಕರಿಗೆ ಪ್ರಯಾಣಿಸಲು ಅವಿರತ ಮನವಿಯ ಮುಖಾಂತರ ಪ್ರಯತ್ನ ಪಟ್ಟ ಕೋಡಿಕಲ್ ದೇರೆಬೈಲು 17 ನೇ ಉತ್ತರ ವಾರ್ಡಿನ ಹಾಗೂ ಬಂಗ್ರ ಕುಳೂರು 16 ನೇ ವಾರ್ಡಿನ ನಿಕಟ ಪೂರ್ವ ಎರಡೂ ಮ.ನ.ಪಾ ಸದಸ್ಯರಿಗೆ ಕೋಡಿಕಲ್ ನಾಗರಿಕರು ಈ ಸಂದರ್ಭ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಿಶೋರ್ ಬಾಬು,ವಾರ್ಡ್ ಅಧ್ಯಕ್ಷರಾದ ರವಿಪ್ರಸಾದ್, ವಾರ್ಡ್ ಕಾರ್ಯದರ್ಶಿ ಭರತ್ ಕೋಡಿಕಲ್,ಮಂಡಲ ಕಾರ್ಯದರ್ಶಿ ಆನಂದ್, ಪಕ್ಷದ ಹಿರಿಯರಾದ ಲೋಕನಾಥ್ ಬಂಗೇರ, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಲಕ್ಷ್ಮಿ ನವೀನ್, ವಿಶ್ವ ಹಿಂದು ಪರಿಷತ್ ಭಜರಂಗದಳ ಖಂಡ ಸಮಿತಿಯ ಪ್ರಮುಖರು ಮತ್ತು ಪ್ರಖಂಡ ಪ್ರಮುಖರು, ಜಿಲ್ಲಾ ಪ್ರಮುಖರು, ಬೂತ್ ಅಧ್ಯಕ್ಷರಾದ ಶರತ್ ಪಾಲ್ದಡಿ, ಅವಿನಾಶ್, ಸೌಪರ್ಣಿಕ, ಹರಿಪ್ರಸಾದ್ ಶೆಟ್ಟಿ, ಪ್ರವೀಣ್ ಸಂಗಮ್, ಗಣೇಶ್ ರೈ ಪಾಲ್ದಡಿ, ರಾಘವ ಶೆಟ್ಟಿ, ಶಿವರಾಜ್ ಶೆಟ್ಟಿ, ಯುವ ಮೋರ್ಚಾ ಮಂಡಲ ಸದಸ್ಯರಾದ ಕಾರ್ತಿಕ್, ಮಂಜುನಾಥ್ ಆರ್.ಕೆ. ಶ್ರವಣ್ ಆರ್.ಕೆ. ಬಾಲಕೃಷ್ಣ ಕೋಡಿಕಲ್, ಚೇತನ್ ಕಟ್ಟೆ, ಧನಂಜಯ ಕಟ್ಟೆ, ಯಶವಂತ ಕಟ್ಟೆ, ಮಿಥುನ್ ಕೋಡಿಕಲ್, ವಿನೋದ್ ಕಟ್ಟೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.