ಇಬ್ಬರು ರೋಗಿಗಳಿಗೆ ಹೃದಯ ಕವಾಟಗಳ ಯಶಸ್ವೀ ಬದಲಾವಣೆ: ಇಂಡಿಯಾನ ಆಸ್ಪತ್ರೆಯ ವಿಕ್ರಮ

ಮಂಗಳೂರು: ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯ ಸಂಸ್ಥೆ (Indiana Hospital and Heart Institute)ಯು ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಇಬ್ಬರು ರೋಗಿಗಳಿಗೆ ಹೃದಯ ಕವಾಟಗಳ ಬದಲಾವಣೆ Valve-in-Valve TAVR (Transcatheter Aortic Valve Replacement) ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಈ ತರದ ಸವಾಲಿನ ಹಾಗೂ ಕ್ಲಿಷ್ಟ ಪ್ರಕ್ರಿಯೆ ಮಂಗಳೂರಿನಲ್ಲಿ ನಡೆಯುವುದು ಇದೇ ಮೊದಲು ಎಂದು ಡಾ. ಯೂಸಫ್‌ ಕುಂಬ್ಳೆ ಹೇಳಿದರು.


ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡುತ್ತಾ, ಕರ್ನಾಟಕದಲ್ಲಿ ಮೊದಲ “ವಾಲ್ಇನ್-ವಾಲ್’ ಪ್ರಕ್ರಿಯೆಯನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ ನಡೆಸಿದ ಹೆಗ್ಗಳಿಕೆಯನ್ನೂ ಇಂಡಿಯಾನಾ ಆಸತ್ರೆ ಹೊಂದಿದೆ. ಆದರೆ TAVRನ ಸುಧಾರಿತ ತಂತಜ್ಞಾನ ಈವರೆಗೆ ಎಲ್ಲೂ ನಡೆದಿರಲಿಲ್ಲ, ಆದರೆ ಅದೀಗ ನಮ್ಮಲ್ಲಿ ಸಾಧ್ಯವಾಯಿತು ಎಂದು ಡಾ. ಯೂಸಫ್‌ ಹೇಳಿದರು.

ವಾಲ್ವ್-ಇನ್-ವಾಲ್ ಟಿಎವಿಆರ್ (ಕವಾಟ ಚಿಕಿತ್ಸೆ)‌ ಎಂದರೇನು?
ಮಾನವ ಹೃದಯದಲ್ಲಿರುವ ನಾಲ್ಕು ಕವಾಟಗಳಲ್ಲಿ ಮಹಾಪಧಮನಿಯ ಕವಾಟವೂ ಒಂದು, ಇದು ಎಡ ಹೃತ್ಕುಕ್ಷಿ ಮತ್ತು ಮಹಾಪಧಮನಿಯ ನಡುವೆ ಇದೆ. ಹೃದಯದಿಂದ ಮಹಾಪಧಮನಿಯೊಳಗೆ ಪಂಪ್ ಮಾಡಲಾದ ಆಮ್ಲಜನಕ ಯುಕ್ತ ರಕ್ತವು ಒಂದೇ ದಿಕ್ಕಿನಲ್ಲಿ ಹರಿಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಾಲ್ವ್(ಕವಾಟ) ಹೊಂದಿದೆ, ಇದು ಕುಹರ(ಹೃತ್ಕುಕ್ಷಿ) ಮ್ಮುಖ ಹರಿವನ್ನು ತಡೆಯುತ್ತದೆ. ಕವಾಟವು ಮೂರು ಚಿಗುರೆಲೆಗಳನ್ನು ( ಕಸ್ಪ್ಸ್) ಹೊಂದಿದ್ದು, ಅದು ಪ್ರತಿ ಹೃದಯ ಬಡಿತದೊಂದಿಗೆ ತೆರೆದು ಮುಚ್ಚುತ್ತದೆ. ಆದರೆ
ತೀವ್ರವಾದ ಆಯೊರ್ಟಿಕ್ರೋಗ ಹೊಂದಿರುವ ರೋಗಿಗಳ ವಾಲ್ವ್‌ ಮುಚ್ಚಿ ತೆರೆಯದೆ ತನ್ನ ಕೆಲಸ ನಿಲ್ಲಿಸುತ್ತದೆ. ಹೀಗಾಗಿ ಇದನ್ನು ಶಸ್ತ್ರಚಿಕಿತ್ಸೆ ಮಾಡಿ ಬದಲಾಯಿಸಬೇಕಾಗುತ್ತದೆ. ಆದರೆ ಇದು ತುಂಬಾ ಕ್ಲಿಷ್ಟಕರ. ಇದನ್ನು ಓಪನ್‌ ಸರ್ಜರಿಯ ಮೂಲಕ ಹೊಸ ವಾಲ್ವ್‌ ಅಳವಡಿಸಬೇಕಾಗುತ್ತದೆ.

ಪಕರಣ 1: 72 ವರ್ಷದ ಗಂಭೀರ ಸ್ಥಿತಿಯ ರೋಗಿಗೆ ಚಿಕಿತ್ಸೆ
110 ಕಿಲೋಗ್ರಾಂ ತೂಕದ, ಮಧುಮೇಹ, ರಕ್ತದೊತ್ತಡ, ಹೃದಯಾಘಾತ ಮುಂತಾದ ಹಲವಾರು ಸಮಸ್ಯೆಗಳುಳ್ಳ, (comorbidities) 72 ವರ್ಷದ ರೋಗಿಗೆ 20 ವರ್ಷ ಹಿಂದೆ ಕೊಚ್ಚಿಯಲ್ಲಿ SAVR ಮಾಡಲಾಗಿದ್ದರೂ ಸಹ ಸಮಸ್ಯೆ ಮತ್ತೆ ಮರುಕಳಿಸಿತ್ತು. ಕೊಚ್ಚಿ ಸೇರಿ ಅನೇಕ ಆಸ್ಪತ್ರೆಗಳಿಗೆ ತೆರಳಿ ವಾಪಸ್‌ ಬಂದಿದ್ದರು. ಕೊನೆ ಘಳಿಗೆಯಲ್ಲಿ ಅವರು ಇಂಡಿಯಾನಾಗೆ ಬಂದಿದ್ದರು. ಅವರಿಗೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಲಾಗಿತ್ತು. ಅಂತಿಮವಾಗಿ ಡಾ. ಯೂಸುಫ್ ಕುಂಬ್ಳೆ ಸಂಪೂರ್ಣ ತಪಾಸಣೆ ನಡೆಸಿದ ಆನಂತರ Valve-in-Valve TAVR ಪ್ರಕ್ರಿಯೆಗೆ ಸೂಚಿಸಿದ್ದರು.

ಆದರೆ ನಿಜವಾದ ಸವಾಲು ಆರಂಭವಾಗಿದ್ದೇ ಇದೀಗ. ಯಾಕೆಂದರೆ ರೋಗಿಗೆ ಕೇವಲ ವಾಲ್ವ ಸಮಸ್ಯೆಯಲ್ಲದೆ ಅಂಜಿಯೋಗ್ರಾಮ್ನಲ್ಲಿ ಪಮುಖ ರಕ್ತನಾಳಗಳ ಅಡಚಣೆಯು (coronary artery blockages) ಸಮಸ್ಯೆಯೂ ಕಂಡುಬಂದಿತು. ತಜ್ಞರ ತಂಡ ಈ ಎರಡೂ ಸಮಸ್ಯೆಗಳಿಗೆ ಒಂದೇ ಸಂದರ್ಭದಲ್ಲಿ ಪರಿಹಾರ ನೀಡಲು ನಿರ್ಧರಿಸಿತು. ಅವರಿಗೆ ಮೊದಲು ಆಂಜಿಯೋಯಾಸ್ಕಿ ಮಾಡಿ ಪ್ರಮುಖ ರಕ್ತನಾಳಗಳ ಅಡಚಣೆಗೆ ಚಿಕಿತ್ಸೆ ನೀಡಲಾಯಿತು. ಬಳಿಕ, Valve-in-Vaive TAVR ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲಾಯಿತು.

ಈ ಚಿಕಿತ್ಸಾ ತಂಡದಲ್ಲಿ ಡಾ.ಯೂಸುಫ್ ಕುಂಬ್ಳೆ, (ಮುಖ್ಯ ಇಂಟರ್ವೆನವಲ್ ಕಾರ್ಡಿಯೋಲಾಜಿಸ್ಟ್ ವ್ಯವಸ್ಥಾಪಕ ನಿರ್ದೇಶಕರು), ಡಾ. ಗಾರ್ಶೀ ವಲೇರಿಯನ್ ಪೈಸ್, ಡಾ.ಆಕಾಶ್ ಜಿ. ನಾಯರ್, ಡಾ.ಸುಖೇನ್ ಎನ್.ಶೆಟ್ಟಿ ಕಾರ್ಡಿಯಾಕ್ ಅನಸ್ಸೇಶಿಯಾಲಜಿಸ್ಟ್, ಡಾ. ಲತಾ ಕಾರ್ಡಿಯಾಲಜಿ ಮೆಡಿಕಲ್‌ ಆಫೀಸರ್, ಶ್ರೀ ವಿಜಿನ್-ಕಾನ್ ಲಾಬ್ ಮಾನೇಜರ್, ಇಂಡಿಯಾನಾ ಇವೆರಲ್ಲಾ ಇದ್ದರು.

ಪ್ರಕರಣ 2: 80 ವರ್ಷದ ಮಹಿಳೆಗೆ ಯಶಸ್ವೀ ಚಿಕಿತ್ಸೆ

ಅದೇ ದಿನ, 20 ವರ್ಷಗಳ ಹಿಂದೆ ವಾಲ್ವ್ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದ 30 ವರ್ಷದ ಮಹಿಳೆಯೊಬ್ಬರು ಪುನಃ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಇನ್ನೊಂದು ಶಸ್ತ್ರಚಿಕಿತ್ಸೆಗೆ ತಯಾರಾಗಿದ್ದರೂ, ಹೆಚ್ಚಿನ ಅಪಾಯ ಇರುವುದರಿಂದ ಯಾವುದೇ ವೈದನು ಆ ಶಸ್ತ್ರ ಚಿಕಿತ್ಸೆ ಮಾಡಲು ಸಿದ್ಧರಾಗಿರಲಿಲ್ಲ. ಆದರೆ ಆದರೆ, ಮೊದಲ ವೃದ್ಧ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ನಡೆದಿರುವುದನ್ನು ಕಂಡು, ಧೈರ್ಯದಿಂದ ವಕ್ರಿಯೆಗೆ ಒಪ್ಪಿಗೆ ನೀಡಿದರು. ಒಂದು ಗಂಟೆಯೊಳಗೆ, ಅವರಿಗೂ ಯಶಸ್ವಿಯಾಗಿ Valve-in-Valve TAVE ಮಾಡಲಾಯಿತು.
ಈ ಎರಡು ಅಪರೂಪದ ಹಾಗೂ ತಾಂತ್ರಿಕವಾಗಿ ಜಟಿಲವಾದ ಶಸ್ತ್ರಚಿಕಿತ್ಸೆಗಳ ಯಶಸ್ವಿಯಾಗಿ ನಡೆಸಿ ಮಂಗಳೂರು ಹಾಗೂ ಕರ್ನಾಟಕದ ಹೃದಯ ಚಿಕಿತ್ಸೆಗೆ ಹೊಸ ಹಾದಿಯನ್ನು ತೋರಿಸಿದೆ ಎಂದು ಡಾ. ಯೂಸಫ್‌ ಕುಂಬ್ಳೆ ಅಭಿಪ್ರಾಯ ಪಟ್ಟಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥರಾದ ಶಿವಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

 

error: Content is protected !!