ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾರೀ ಗಾಳಿ ಮಳೆಗೆ 70 ವರ್ಷಗಳಷ್ಟು ಹಳೆಯದಾದ ಬೃಹತ್ ಮರ ಉರುಳಿ ಬಿದ್ದು ಕಾರಿನಲ್ಲಿ ಕುಳಿತಿದ್ದ ಮಲ್ಲಾಪುರ ನಿವಾಸಿ ಲಕ್ಷ್ಮೀ ಮಮ್ತೆಕರ್ (55) ಮೃತಪಟ್ಟಿದ್ದಾರೆ.
ಮೃತರು ಗರ್ಭಿಣಿ ಸೊಸೆಯನ್ನು ತಪಾಸಣೆಗೆ ಆಸ್ಪತ್ರೆ ಕರೆ ತಂದಿದ್ದಾಗ ಈ ದುರ್ಘಟನೆ ನಡೆದಿದೆ. ಮರದ ಕೆಳಗೆ ಕುಳಿತಿದ್ದ ಮೂವರು ವ್ಯಾಪಾರಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿದೆ.
ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕಡಲತೀರ ಪ್ರದೇಶದಲ್ಲಿ ನೆರೆ ಭೀತಿ ಆವರಿಸಿದೆ.