ಬೆಂಗಳೂರಿನ 40ಕ್ಕೂ ಹೆಚ್ಚು ಶಾಲೆಗಳಿಗೆ ʻಬಾಂಬ್‌ʼ ಬೆದರಿಕೆ! ತೀವ್ರ ತಪಾಸಣೆ!

ಬೆಂಗಳೂರು: ಬೆಂಗಳೂರಿನ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇಂದು ಬೆಳಗ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ ಎನ್ನಲಾಗಿದ್ದು ಇದರಿಂದ ಎಲ್ಲೆಡೆ ಆತಂಕ ಮನೆಮಾಡಿದೆ. ರಾಜರಾಜೇಶ್ವರಿ ನಗರ, ಕೆಂಗೇರಿ, ಜಯನಗರ, ಮತ್ತು ವೈಟ್‌ಫೀಲ್ಡ್ ಸೇರಿದಂತೆ ವಿವಿಧ ಪ್ರದೇಶಗಳ ಶಾಲೆಗಳನ್ನು ಗುರಿಯಾಗಿಸಿಕೊಂಡು ಇ-ಮೇಲ್‌ಗಳನ್ನು ಕಳುಹಿಸಲಾಗಿದ್ದು ಬೆಂಗಳೂರು ನಗರ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
“roadkill333@atomicmail.io” ಎಂಬ ಇ-ಮೇಲ್ ಐಡಿಯಿಂದ ಕಳುಹಿಸಲಾದ ಸಂದೇಶವು, “ಶಾಲೆಯ ತರಗತಿಗಳಲ್ಲಿ ಟ್ರಿನೈಟ್ರೊಟೊಲ್ಯೂನ್ ಒಳಗೊಂಡ ಹಲವಾರು ಸ್ಫೋಟಕ ಸಾಧನಗಳನ್ನು ಇರಿಸಲಾಗಿದೆ. ಈ ಸ್ಫೋಟಕಗಳು ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ಅಡಗಿಸಲಾಗಿದೆ,” ಎಂದು ಉಲ್ಲೇಖಿಸಲಾಗಿದೆ. ಇದರ ಜೊತೆಗೆ, “ನಿಮ್ಮೆಲ್ಲರನ್ನೂ ಈ ಲೋಕದಿಂದ ಅಳಿಸಿಹಾಕುತ್ತೇನೆ” ಎಂಬ ಧಮಕಿಯನ್ನೂ ಒಳಗೊಂಡಿತ್ತು. ಇದುವರೆಗೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ ಆದರೆ ತಪಾಸಣೆ ಮುಂದುವರಿದಿದೆ.

error: Content is protected !!