ಮಣಿಪಾಲ: ಈಶ್ವರ್ ನಗರದಲ್ಲಿರುವ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಾಲ್ಪಾ ಎಮರಾಲ್ಡ್ ಅಪಾರ್ಟ್‌ಮೆಂಟ್ ಮೇಲೆ ಪೋಲಿಸರು ದಾಳಿ ನಡೆಸಿ ಅಕ್ರಮ ವೇಶ್ಯಾವಾಟಿಕೆ ಬಯಲು ಮಾಡಿದ್ದಾರೆ. ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ಜು. 16ರ ಸಂಜೆ ವೇಳೆ ಬಂದ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರೂಮ್ ನಂ. 103, ಮೊದಲ ಮಹಡಿ, ಮಾಲ್ಪಾ ಎಮರಾಲ್ಡ್ ಅಪಾರ್ಟ್‌ಮೆಂಟ್ಸ್, 20 ನೇ ಕ್ರಾಸ್, ಈಶ್ವರ್ ನಗರ, ಹೆರ್ಗಾ ವಿಲೇಜ್‌ನಲ್ಲಿ ದಾಳಿ ನಡೆಸಲಾಯಿತು.
ಅಕ್ರಮ ವಾಣಿಜ್ಯ ಲಾಭಕ್ಕಾಗಿ ಮಹಿಳೆಯನ್ನು ಬಲವಂತವಾಗಿ ಬಂಧಿಸಿ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಕಾರ್ಯಾಚರಣೆಯ ಸಮಯದಲ್ಲಿ ಆಕೆಯನ್ನು ಆವರಣದಿಂದ ರಕ್ಷಿಸಲಾಗಿದೆ.
ಪ್ರಮುಖ ಆರೋಪಿ ಹೊನ್ನಾವರ ತಾಲೂಕಿನ ನಿವಾಸಿ ಗಣೇಶ್ ಗಣಪ್ ನಾಯಕ್ (38) ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎರಡನೇ ಶಂಕಿತ ಪರಾರಿಯಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t