ಬಾಗಲಕೋಟೆ/ಕೋಲ್ಕತಾ: ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಲೋಕಾಪುರ ಪಟ್ಟಣದ ಯುವಕ ಪರಮಾನಂದ ಟೋಪನ್ನ ಎಂಬಾತನನ್ನು ಕೋಲ್ಕತಾದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿಸಲಾಗಿದೆ.
ಕೋಲ್ಕತಾದ ಐಐಎಂ-ಸಿ ಕ್ಯಾಂಪಸ್‌ನಲ್ಲಿ ಎಂಬಿಎ 2ನೇ ವರ್ಷದ ವಿದ್ಯಾರ್ಥಿಯಾಗಿರುವ ಪರಮಾನಂದಗೆ ಸಾಮಾಜಿಕ ಜಾಲತಾಣದಲ್ಲಿ ಈ ಯುವತಿಯ ಪರಿಚಯವಾಗಿದ್ದು, ಈಕೆ ಮನಃಶಾಸ್ತ್ರ ಓದಿದ್ದೇನೆ ಎಂದು ಹೇಳಿದ್ದು, ಪರಮಾನಂದ ಯುವತಿಗೆ ಜು.11ರಂದು ಕರೆ ಮಾಡಿ ಕೌನ್ಸೆಲಿಂಗ್ ಮಾಡಲು ತಾನು ವಾಸವಿರುವ ಐಐಎಂ ಜೋಕಾ ಹಾಸ್ಟೆಲ್‌ಗೆ ಕರೆಸಿಕೊಂಡಿದ್ದಾನೆ. ಬಳಿಕ ಯುವತಿಗೆ ಆಹಾರ ಹಾಗೂ ನೀರಿನಲ್ಲಿ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಜು.12ರಂದು ಕೋಲ್ಕತಾದ ಹರಿದೇವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಯುವಕನನ್ನು ಬಂಧಿಸಿ ಅಲಿಪುರದ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿಗಳ ಎದುರು ಹಾಜರುಪಡಿಸಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆದರೆ ಯುವತಿ ತನಿಖೆಗೆ ಸ್ಪಂದಿಸದೆ, ಹೇಳಿಕೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾಳೆ. ಈ ಕುರಿತು ಸಮಗ್ರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಯುವತಿ ಮನಃಶಾಸ್ತ್ರ ಅಧ್ಯಯನ ಮಾಡಿದ್ದು ಎಲ್ಲಿ, ಕೌನ್ಸೆಲಿಂಗ್ ನೀಡಲು ಪರವಾನಿಗೆ ಹೊಂದಿದ್ದಾಳೆಯೇ ಮುಂತಾದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪುತ್ರನ ಬಂಧನ ತಿಳಿಯುತ್ತಿದ್ದಂತೆ ಕಂಗಾಲಾಗಿರುವ ಹೆತ್ತವರು ಕೋಲ್ಕತಾಕ್ಕೆ ತೆರಳಿದ್ದು, ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t